
ಸಿಂಧನೂರು, 19 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಿಂಧನೂರು ತಾಲೂಕಿನ ತುರವಿಹಾಳದಲ್ಲಿ ಡಿ.21ರಂದು ಪಟ್ಟಣ ಪಂಚಾಯತಿ ಉಪ ಚುನಾವಣೆ ನಡೆಯಲಿದ್ದು, ಆದ್ದರಿಂದ ಅಂದು ತುರವಿಹಾಳ ಪಟ್ಟಣ ಪಂಚಾಯಿತಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆ, ಜಾನುವಾರ ಸಂತೆ, ಉತ್ಸವ, ಉರುಸು ಹಾಗೂ ಮುಂತಾದವುಗಳನ್ನು ಮುಂದೂಡಿ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ತುರವಿಹಾಳ : ಉಪ ಚುನಾವಣೆ; ಶಸ್ತ್ರಗಳನ್ನು ಠಾಣೆಯಲ್ಲಿಡಲು ಆದೇಶ
ನಗರ ಸ್ಥಳೀಯ ಸಂಸ್ಥೆ ಸಾರ್ವತ್ರಿಕ ಹಾಗೂ ಉಪ ಚುನಾವಣೆ-2025ರ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಈ ಚುನಾವಣೆಯು ಶಾಂತಿಯುತವಾಗಿ ನಡೆಸಲು ಮುಂಜಾಗ್ರತೆ ಕ್ರಮವಾಗಿ (ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ರಿಜರ್ವ ಬ್ಯಾಂಕ್ ಅವರಿಂದ ಅನುಮೋದಿಸಿದ ಶೆಡ್ಯೂಲ್ಡ್ ಬ್ಯಾಂಕುಗಳ ಸೆಕ್ಯೂರಟಿ ಗಾರ್ಡಗಳ, ಆಯುಧಗಳನ್ನು ಹೊರತುಪಡಿಸಿ) ಚುನಾವಣಾ ಪ್ರಕ್ರಿಯೆ ಮುಗಿಯುವರೆಗೆ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಯುಧಗಳನ್ನು ಪರವಾನಿಗೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಹೊತ್ತು ಪ್ರದರ್ಶನ ಮಾಡುವುದನ್ನು ನಿμÉೀಧಿಸಿ ಹಾಗೂ ಆಯುಧಗಳನ್ನು ಸಂಬಂಧಪಟ್ಟ ಪೆÇಲೀಸ್ ಠಾಣೆಗೆ ಠೇವಣಿ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಆದೇಶ ಹೊರಡಿಸಿದ್ದಾರೆ.
ತುರ್ವಿಹಾಳ ಪಟ್ಟಣ ಪಂಚಾಯತಿ : ಉಪ ಚುನಾವಣೆ; ಮದ್ಯೆ ಮಾರಾಟ ಬಂದ್
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆಯ ಮತದಾನವು ಡಿಸೆಂಬರ್ 21ರಂದು ನಡೆಯಲ್ಲಿದ್ದು, ಮತದಾನವು ಸೂಸುತ್ರವಾಗಿ, ಶಾಂತಿ ರೀತಿಯಿಂದ ನಡೆಸುವ ಉದ್ದೇಶದಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ಮದ್ಯ ತಯಾರಿಕಾ ಘಟಕಗಳು, ಸಾಗಾಣಿಕೆ, ಸಂಗ್ರಹಣೆಯನ್ನು ಹಾಗೂ ಮಾರಾಟ ಮಳಿಗೆಗಳನ್ನು ಡಿ.19ರ ಸಂಜೆ 05 ಗಂಟೆಯಿಂದ ಡಿ.21ರ ಮಧ್ಯರಾತ್ರಿ 12 ಗಂಟೆವರೆಗೆ ಬಂದ್ ಇಡುವಂತೆ ಜಿಲ್ಲಾ ದಂಡಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಆದೇಶ ಹೊರಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್