

ಕೊಪ್ಪಳ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಓಪನ್ ರ‍್ಯಾಪಿಡ್ ಚದುರಂಗ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.
ವಿಶ್ವ ಚೆಸ್ ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಓಪನ್ ರಾಪಿಡ್ ಚದುರಂಗ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು.
ಅನುಪಮಾ ತಾಂಬ್ರಳ್ಳಿ ಮಠ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ತ್ರಿವೇಣೀ, ಸಾತ್ವಿಕ್ ಕುಲಕರ್ಣಿ, ಶ್ರೇಯಸ್ ಕುಲಕರ್ಣಿ ಮತ್ತು ನಿವೃತ್ತ ತಹಶೀಲ್ದಾರ ಮಲ್ಲಿಕಾರ್ಜುನ ಜಾನಿಕರ್ ಹಾಗೂ ಮತ್ತಿತರಿದ್ದರು.
ಕಲಬುರಗಿಯ ಪ್ರಮೋದರಾಜ್ ಮೋರೆ ಅವರು ಮುಖ್ಯ ಅರ್ಭಿಟರ್ ಆಗಿ ಕಾರ್ಯನಿರ್ವಹಿಸಿದರು. ಈ ಪಂದ್ಯಾವಳಿಯು ಒಟ್ಟು 7 ಸುತ್ತುಗಳಲ್ಲಿ ನಡೆಯಿತು. ಇದರಲ್ಲಿ ರಾಮಚಂದ್ರ ಭಟ್ ಅವರು 1712 ಪೈಡೆ ರೇಟಿಂಗ್ ಟಾಪ್ ಸೀಡ್ ಆಟಗಾರರಾಗಿ ಹೊರಹೊಮ್ಮಿರುತ್ತಾರೆ.
ವಿಜೇತರ ವಿವರ: ರಾಮಚಂದ್ರ ಭಟ್ 11712/3000 ರೇಟಿಂಗ್, ಪ್ರಹ್ಲಾದ್ ಎಂ. ಮಾಂಡ್ರೆ 21436 ರೇಟಿಂಗ್, ನಾಗರಾಜ್ ಕುಲಕರ್ಣಿ 111496 ರೇಟಿಂಗ್, ನಾಗರಾಜ್ ಪಾಟೀಲ್ 61656 ರೇಟಿಂಗ್, ದಿವ್ಯಾ ಕಂಬ್ಳೇಕರ್ 161489 ರೇಟಿಂಗ್, ಶಾಲಿನಿ ಹೀರೆಮಠ 330 ರೇಟಿಂಗ್, ವಾರುಣಿ ಎನ್. ನಂಜನಾಗೌಡರ್ 16ಎಫ್10 ಫಸ್ಟ್ ಪ್ರೈಜ್ ರೇಟಿಂಗ್, ಯಶ್ವಿ ರಾವಲ್ 11524 ಎಫ್13 ಫಸ್ಟ್ ಪ್ರೈಜ್ ರೇಟಿಂಗ್, ನಿಖಿಲ್ ಪಿ ಮೊರೆ 11544 ಯು13 ಫಸ್ಟ್ ಪ್ರೈಜ್ ರೇಟಿಂಗ್, ಕೆ.ವಿ ಬ್ರಾಹ್ಮಣಿ 1ಎಫ್ 16 ಫಸ್ಟ್ ಪ್ರೈಜ್ ರೇಟಿಂಗ್ ಮತ್ತು ವಿಕಾಸ್ ಪತ್ತಾರ್ 11460ಯು16 ಫಸ್ಟ್ ಪ್ರೈಜ್ ರೇಟಿಂಗ್ ಪಡೆದಿರುತ್ತಾರೆ.
ಪಂದ್ಯಾವಳಿಯ ನಂತರ ಬಹುಮಾನ ವಿರತಣೆಯ ಸಮಾರಂಭದಲ್ಲಿ ವಿಶ್ವ ಚೆಸ್ ಅಕಾಡೆಮಿಯ ಅಧ್ಯಕ್ಷರಾದ ರಾಮಸ್ವರೂಪ್ ಕಂಬ್ಳೇಕರ್ ಹಾಗೂ ಎಸ್‌ಎಸ್‌ಐಎಸ್ ಶಾಲೆಯ ಪ್ರಾಶುಂಪಾಲರಾದ ಕಂಚನ ಗೌಡರ್ ಅವರು ಉಪಸ್ಥಿತರಿದ್ದರು.
ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಅವರು ಮಾತನಾಡಿ, ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ವಿಶ್ವ ಚೆಸ್ ಅಕಾಡೆಮಿಯು ಶೀಘ್ರದಲ್ಲಿ ಫೈಡೇ ರೇಟೆಡ್ ಚದುರಂಗ ಪಂದ್ಯಾವಳಿಯನ್ನು ಆಯೋಜಿಸಲಿದೆ ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್