
ವಿಜಯಪುರ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲರವರು ನಾಳೆ ದಿ.19 ರಿಂದ ದಿ.24 ರವರೆಗೆ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ದಿ.19 ಶುಕ್ರವಾರ ಬೆ.11ಗಂ. ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಜರುಗಲಿರುವ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ದಿ.20 ಶನಿವಾರ ಬೆ.10.30ಗಂ. ನಗರದಲ್ಲಿ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸದಾಗಿ ವಿಜಯಪುರ ವಿಭಾಗಕ್ಕೆ ಹಂಚಿಕೆಯಾದ 25 ಸಿಟಿ ಬಸ್‍ಗಳನ್ನು ಲೋಕಾರ್ಪಣೆಯಲ್ಲಿ ಭಾಗವಹಿಸುವುದು.
ದಿ.21 ರವಿವಾರ ಬೆ.10.30ಗಂ. ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಡೊಮನಾಳ ಎನ್.ಡಿ.ಪಾಟೀಲ ಅವರ ಬಿಸಿಲನಾಡಿನ ಪರಿಸರಪ್ರೇಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆ.11ಗಂ. ತಿಕೋಟಾದ ಹಳಚಾಪುರ ರಸ್ತೆಯ ಸಾತಲಿಂಗಯ್ಯ ಸಾಲಿಮಠ ಅವರ ತೋಟದಲ್ಲಿ ತಿಕೋಟಾ ತಾಲೂಕಾ ಘಟಕದಿಂದ ಆಯೋಜಿಸಿದ ರೈತಕ್ಷೇತ್ರೋತ್ಸವ ಹಾಗೂ ಜಿಲ್ಲೆಯ ಸಮಸ್ತ ಕಬ್ಬು ಬೆಳೆಗಾರರಿಗೆ ವಿಶೇಷ ತಜ್ಞರಿಂದ ಚಿಂತನಗೋಷ್ಠಿ, ಕೃಷಿಗೆ ಸಂಬಂಧಿಸಿದಂತೆ ಉಪನ್ಯಾಸ ಮತ್ತು ಕೃಷಿ ಉತ್ಪನ್ನಗಳಿಂದ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮ.2.30ಗಂ. ತಿಕೋಟಾ ಪಟ್ಟಣದಲ್ಲಿ 20 ಕೋಟಿ ರೂ. ವೆಚ್ಚದ ಅಮೃತ ಯೋಜನೆ-2ರಲ್ಲಿ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ. ನಂತರ ಸಾ.4ಗಂ. ಬಬಲೇಶ್ವರ ಪಟ್ಟಣದಲ್ಲಿ 20 ಕೋಟಿ ರೂ. ವೆಚ್ಚದ ಅಮೃತ ಯೋಜನೆ-2ರಲ್ಲಿ ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.
ದಿ.22 ಸೋಮವಾರ ಬೆ.10ಗಂ. ಜಿಲ್ಲಾ ಪಂಚಾಯತ ಆವರಣದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಿಸಲಿದ್ದಾರೆ. ಹಾಗೂ ಶಿಶುಪಾಲನಾ ಕೇಂದ್ರದ ಕಟ್ಟಡ ಹಾಗೂ ಅಕ್ಕಾ ಕೆಫೆ ಉದ್ಘಾಟಿಸಲಿದ್ದಾರೆ. ನಂತರ ಬೆ.11ಗಂ. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಪರಿಶೀಲನೆ ಸಭೆ ನಡೆಸಲಿದ್ದಾರೆ.
ದಿ.23 ಮಂಗಳವಾರ ಬೆ.10ಗಂ. ಸಾರವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 10 ಕೋಟಿ ಅನುದಾನದಲ್ಲಿ ಸಾರವಾಡ - ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್ ವರೆಗೆ ಸುಧಾರಣೆ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ 2 ಕೋಟಿ ಅನುದಾನದಲ್ಲಿ ಸಾರವಾಡ – ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ 5 ಕೋಟಿ ಅನುದಾನದಲ್ಲಿ ಸಾರವಾಡ - ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿಪೂಜೆ ಸಲ್ಲಿಸಲಿದ್ದಾರೆ. ಸಾರವಾಡ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಸಾರವಾಡ ಗ್ರಾಮದಲ್ಲಿ ರೂ.2 ಕೋಟಿ ವೆಚ್ಚದಲಿ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡುವರು. ಸಾರವಾಡ ರೂ. ಒಂದು ಕೋಟಿ ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ ಸಲ್ಲಿಸಿದ ನಂತರ ಸಾರವಾಡ ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟಿಸುವರು.
ದಿ.24 ಬುಧವಾರ ಬೆ.10ಗಂ. ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಮೋಹಿತೆ ವಸ್ತಿಯಲ್ಲಿ ಕೆ.ಎಸ್.ಐ.ಐ.ಡಿ.ಸಿ 40ಲಕ್ಷ ರೂ. ಸಿ.ಎಸ್.ಆರ್. ಅನುದಾನದಲ್ಲಿ ಪ್ರಾಥಮಿಕ ಶಾಲಾ ಕೊಠಡಿಗಳನ್ನು ಉದ್ಘಾಟಿಸುವರು. ಬೆ.10.30ಗಂ. ತಾ: ತಿಕೋಟಾ ಅರಕೇರಿ ಗ್ರಾಮದಲ್ಲಿ ಕೆ.ಆರ್.ಐ.ಡಿ.ಎಲ್. 32ಲಕ್ಷ ರೂ. ವೆಚ್ಚದಲ್ಲಿ ಟಿ.ಎಸ್.ಪಿ. ಯೋಜನೆಯಡಿ ನಿರ್ಮಿಸಿದ ಸಮುದಾಯ ಭವನ ಕಟ್ಟಡ ಉದ್ಘಾಟಿಸುವರು. ನಂತರ ಮ.12ಗಂ. ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande