
ಗದಗ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆಯಲ್ಲಿ ಗೋಲ್ಮಾಲ ಮಾಡಿದೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಗೊರ ಅಪಮಾನವೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಅವ್ಯವಹಾರವನ್ನು ಟೀಕಿಸಿದ್ದಾರೆ.
ಆರ್ಥಿಕ ವರ್ಷ ಮುಗಿದಿದ್ದರಿಂದ ಈಗ ಹಳೆಯ ಎರಡು ತಿಂಗಳ ಬಾಕಿ ಭರ್ತಿ ಮಾಡುವುದು ಕಷ್ಟಸಾಧ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಎಲ್ಲರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ತಿಂಗಳ ಗೃಹಲಕ್ಷ್ಮಿಯ ದುಡ್ಡು ಮಹಿಳೆಯರಿಗೆ ಸೇರದೆ ಯಾರಿಗೆ ಸೇರಿದೆ? ಎಲ್ಲಿ ಹೋಯಿತು?ಎಂಬುದನ್ನು ತಿಳಿಸಬೇಕು ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ಒತ್ತಾಯಿಸಿದ್ದಾರೆ.
ಈ ಹಣ ಆರ್ಥಿಕ ಇಲಾಖೆಯಿಂದ ಬಿಡುಗಡೆಯಾಗಿದ್ದು ಮಹಿಳೆಯರಿಗೆ ತಲುಪದಿರುವುದು ದೊಡ್ಡ ಹಗರಣದ ಮುನ್ಸೂಚನೆ ನೀಡುತ್ತಿದೆ. ಗ್ಯಾರಂಟಿ ಗ್ಯಾರಂಟಿ ಎಂದು ನಂಬಿಸಿ ಓಟು ಪಡೆದು ರಾಜ್ಯದ ಜನರಿಗೆ ವಂಚನೆ ಮಾಡುತ್ತಿದ್ದಾರೆ. ರಾಜ್ಯದ ಹಣವನ್ನು ಲೂಟಿ ಮಾಡಲು ಕಾಂಗ್ರೆಸ್ ಪಕ್ಷ ಈ ಗ್ಯಾರೆಂಟಿಗಳನ್ನು ತಂದಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಬರುವ ತಿಂಗಳ ಒಳಗಾಗಿ ಕಳೆದ ಆರ್ಥಿಕ ವರ್ಷದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಜಮಯಾಗದಿದ್ದರೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಸವರಾಜ ಅಪ್ಪಣ್ಣವರ, ಜಿ ಕೆ ಕೊಳ್ಳಿಮಠ, ಪ್ರಪುಲ ಪುಣೆಕರ್, ಮುತ್ತು ಬಡಿಗೇರ, ಶ್ರೀಮತಿ ಮಂಜುಳಾ ಮೇಟಿ, ರಾಜೇಶ್ವರಿ ಹೂಗಾರ್, ಸಂತೋಷ್ ದೇಸಾಯಿ, ವೆಂಕಟೇಶ್ ಪಾಟೀಲ, ದಾನೇಶ್ ಹೆಬ್ಬಾಳ್ ಕಲ್ಕುಸಾ ಸಿಂಗ್ರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP