


ಕೊಪ್ಪಳ, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣದಲ್ಲಿ ಬಿಜೆಪಿಯು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿಯವರನ್ನು ಸಿಲುಕಿಸಿ, ಅನಾವಶ್ಯಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೊಪ್ಪಳದ ಬಿಜೆಪಿ ಜಿಲ್ಲಾ ಕಚೇರಿಯನ್ನು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಬಿಜೆಪಿ ಕಚೇರಿಯ ಕಡೆಗೆ ಬಂದ ಕಾಂಗ್ರೆಸ್ಸಿಗರು ಬಿಜೆಪಿ, ಮೋದಿ, ಶಾ ವಿರುದ್ಧ ಘೋಷಣೆ ಕೂಗಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದರು. ಬಿಜೆಪಿಗೆ ಕಾಂಗ್ರೆಸ್ಸಿಗರ ಮುತ್ತಿಗೆಯ ಮಾಹಿತಿ ಇದ್ದ ಕಾರಣ ಬಿಜೆಪಿ ಕಚೇರಿಗೆ ಬೀಗ ಹಾಕಲಾಗಿತ್ತು.
ಮುತ್ತಿಗೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಾ ಇಟ್ಟಂಗಿ ಮತ್ತು ಅಕ್ಬರ್ ಪಾಶಾ, ಕಾಂಗ್ರೆಸ್ ವಕ್ತಾರೆ ಶೈಲಾಜಾ ಹಿರೇಮಠ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಕೃಷ್ಣಾ ಗಲಿಬಿ ಮತ್ತು ಶಾಮೀದ್ ಮನಿಯಾರ್, ಮಾಜಿ ಜಿ.ಪಂ. ಸದಸ್ಯ ಪ್ರಸನ್ನ ಗಡಾದ, ಮುತ್ತುರಾಜ್ ಕುಷ್ಟಗಿ, ಗಾಳೆಪ್ಪ ಪೂಜಾರ್, ಗುರುರಾಜ ಹಲಗೇರಿ, ಕಿಶೋರಿ ಬೂದನೂರು, ಮಲ್ಲು ಪೂಜಾರ್, ಸುರೇಶ ದಾಸರಡ್ಡಿ, ಗವಿಸಿದ್ದನಗೌಡ ಪಾಟೀಲ್, ಚಾಂದಪಾಶಾ ಕಿಲ್ಲೆದಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್