ಬಿ.ಎಲ್.ಡಿ.ಇ‌ ಆಸ್ಪತ್ರೆಗೆ ಇಬ್ಬರ‌ ಶರೀರಗಳ ದಾನ
ವಿಜಯಪುರ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಜನರಲ್ಲಿ ದೇಹದಾನದ ಮಹತ್ವದ ಕುರಿತು ಜಾಗೃತಿ ಹೆಚ್ಚಾಗುತ್ತಿದ್ದು. ಇಬ್ಬರ‌ ಪಾರ್ಥಿವ ಶರೀರಗಳನ್ನು ಅವರ ಕುಟುಂಬಸ್ಥರು ನಗರದ ಬಿ.ಎಲ್.ಡಿ.ಇ‌ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇಂಡಿ ತಾಲೂಕಿನ ಅಥರ್ಗಾ ಗ್ರಾಮ ನಿವಾಸಿಯಾದ ಶಿವಯೋಗಪ್ಪ
ದಾನ


ವಿಜಯಪುರ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಜನರಲ್ಲಿ ದೇಹದಾನದ ಮಹತ್ವದ ಕುರಿತು ಜಾಗೃತಿ ಹೆಚ್ಚಾಗುತ್ತಿದ್ದು. ಇಬ್ಬರ‌ ಪಾರ್ಥಿವ ಶರೀರಗಳನ್ನು ಅವರ ಕುಟುಂಬಸ್ಥರು ನಗರದ ಬಿ.ಎಲ್.ಡಿ.ಇ‌ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಇಂಡಿ ತಾಲೂಕಿನ ಅಥರ್ಗಾ ಗ್ರಾಮ ನಿವಾಸಿಯಾದ ಶಿವಯೋಗಪ್ಪ ಎಸ್. ಇಂಗಳೇಶ್ವರ(82) ಡಿಸೆಂಬರ್ 10 ರಂದು ನಿಧನರಾಗಿದ್ದರು. ಮೃತರ ಇಚ್ಚೆಯಂತೆ ಅವರ ದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಈ ಮಧ್ಯೆ, ತುಂಗಳ ಗ್ರಾಮದ ನಿವಾಸಿ ಡಾ. ಸಂಗಮೇಶ ಎಂ. ಬಿರಾದಾರ(88) ಅವರು ಡಿಸೆಂಬರ್ 15 ರಂದು ನಿಧನರಾಗಿದ್ದರು.‌‌ ಮೃತರ ಇಚ್ಚೆಯಂತೆ ಅವರ ದೇಹವನ್ನು ಕುಟುಂಬಸ್ಥರು ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್. ಎಸ್. ಬುಲಗೌಡ ಅವರು ಪಾರ್ಥಿವ ಶರೀರ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande