
ರಾಯಚೂರು, 18 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಭೂ ಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಕಾನೂನಿನ ಸಲಹೆ ನೀಡಲು ಕಾನೂನು ಸಲಹೆಗಾರರನ್ನು ನೇಮಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರದ ಆದೇಶಗಳನ್ವಯ ಈ ಹಿಂದೆ ನೇಮಿಸಲಾದ ಕಾನೂನು ಸಲಹೆಗಾರರು ಹುದ್ದೆಗೆ ರಾಜೀನಾಮೆಯನ್ನು ನೀಡಿರುವುದರಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಕಾನೂನು ಸಲಹೆಗಾರರ ಹುದ್ದೆಯು ಖಾಲಿ ಇರುತ್ತದೆ. ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಭೂಕಂದಾಯ, ಭೂ ಮಂಜೂರಾತಿ ನಿಯಮ, ಭೂಸುಧಾರಣಾ, ಭೂಸ್ವಾಧೀನ ಕಾಯ್ದೆ, ನಿಯಮ, ಇನ್ನೀತರ ಕಾಯ್ದೆ, ನಿಯಮಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹಾಗೂ ಯಾವುದೇ ನ್ಯಾಯಾಲಯ ವ್ಯಾಜ್ಯಗಳ ಬಗ್ಗೆ ಕಾನೂನು ಸಲಹೆ ನೀಡಲು ಸೃಜಿಸಲಾಗಿರುವ ಕಾನೂನು ಸಲಹೆಗಾರರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಗಳಿಗೆ ಕರ್ತವ್ಯಗಳು, ಜವಾಬ್ದಾರಿಗಳನ್ನು ಮತ್ತು ಮೇಲಾಧಿಕಾರಿಗಳ ಸೂಚನೆಗಳು ಕಡ್ಡಾಯವಾಗಿ ಪಾಲಿಸಬೇಕು.
ಷರತ್ತಿಗೊಳಪಟ್ಟು ಕಾನೂನು ಸಲಹೆಗಾರರಿಗೆ ಒಂದು ನಿರ್ದಿಷ್ಟ ಏಕರೂಪದ ಸಂಚಿತ ವೇತನವನ್ನು ನಿಗಧಿಪಡಿಸಿ ಅಂತಹ ವೇತನದ ಮೇರೆಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಅಸಕ್ತಿಯುಳ್ಳ ನಿವೃತ್ತ ಸರ್ಕಾರಿ, ನ್ಯಾಯಾಂಗ ಇಲಾಖೆಯ ಅಧಿಕಾರಿಗಳನ್ನು ನಿವೃತ್ತ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ಇವರಿಗೆ 70,000 ಸಾವಿರ ರೂ. ಹಾಗೂ ನಿವೃತ್ತ ಕಂದಾಯ ಇಲಾಖೆ ನೌಕರರು (ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರ್) ಇವರಿಗೆ 40,000 ಸಾವಿರ ರೂ. ಸಂಚಿತ ವೇತನವನ್ನು ಹಾಗೂ ನಿಗದಿಪಡಿಸಿ ಹೊರಗುತ್ತಿಗೆ ಆಧಾರದ ಮೇಲೆ ಷರತ್ತುಗಳನ್ವಯ ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ.
ಅರ್ಹ ಮತ್ತು ಇಚ್ಛೆಯುಳ್ಳ ನಿವೃತ್ತ ಜಿಲ್ಲಾ ನ್ಯಾಯಧೀಶರು ಅಥವಾ ನಿವೃತ್ತ ಹಿರಿಯ ಸಿವಿಲ್ ನ್ಯಾಯಾಧೀಶರು, ನಿವೃತ್ತ ಕಂದಾಯ ಇಲಾಖೆಯ ಅಧಿಕಾರಿ (ನಿವೃತ್ತ ವಿಶೇಷ ಜಿಲ್ಲಾಧಿಕಾರಿ) ನಿವೃತ್ತ ಕಂದಾಯ ಇಲಾಖೆ ನಿವೃತ್ತ ತಹಶೀಲ್ದಾರ್, ಉಪತಹಶೀಲ್ದಾರರು ಅರ್ಜಿಯನ್ನು ಜನವರಿ 2ರೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ. ಈ ನೇಮಕಾತಿಯು ನೇಮಕಾತಿ ಆದೇಶದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಉರ್ಜಿತವಾಗಿರುತ್ತದೆ.
ಕಾನೂನು ಸಲಹೆಗಾರರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರಬೇಕು. ಈ ಹುದ್ದೆಯು ಕರ್ತವ್ಯಕ್ಕೆ ಹಾಜರಾದ ದಿನದಿಂದ ಒಂದು ವರ್ಷ ಅಥವಾ ಸರ್ಕಾರದ ಆದೇಶ ಹೊರಡಿಸುವವರೆಗೆ ಇದರಲ್ಲಿ ಯಾವುದೋ ಮೊದಲು ಅಲ್ಲಿಯವರೆಗೆ ತಾತ್ಕಾಲಿಕ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಕೊಳ್ಳುವ ಷರತ್ತಿಗೊಳಪಟ್ಟಿರುತ್ತದೆ. ನೇಮಕಾತಿ, ಹಾಲಿ ಕಾರ್ಯನಿರ್ವಹಿಸುತ್ತಿರುವ ಸೇವೆಯು ದಿನದ ಪೂರ್ಣಾವಧಿಯಾಗಿದ್ದು, ಯಾವುದೇ ರೀತಿಯ ಸರ್ಕಾರದ ವಿರುದ್ಧ ಯಾವುದೇ ಪ್ರಕರಣಗಳಲ್ಲಿ ವಕಾಲತ್ತು ವಹಿಸತಕ್ಕದ್ದಲ್ಲ. ಬೇರೆ ಕಂಪನಿ ಇತ್ಯಾದಿಗಳಲ್ಲಿ ಒಪ್ಪಂದ ಮಾಡಿಕೊಂಡು ಕಾರ್ಯನಿರ್ವಹಿಸತಕ್ಕದ್ದಲ್ಲ. ಎಲ್ಲಾ ಪ್ರಕರಣಗಳ ಗೌಪ್ಯತೆ ಕಾಪಾಡಬೇಕು.
ಕಾನೂನು ಸಲಹೆಗಾರರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ನಿವೃತ್ತ ಕಂದಾಯ ಇಲಾಖೆ ಅಧಿಕಾರಿ, ನೌಕರರು ಕಾನೂನು ಪದವೀಧರರಾಗಿರಬೇಕು. ಹಾಗೂ 7 ವರ್ಷಗಳ ಸೇವಾ ಅನುಭವ ಹೊಂದಿರಬೇಕು. ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ, ನೌಕರರಿಗೆ ಕಂದಾಯ ನಿಯಮಗಳ ಬಗ್ಗೆ ಅಡಳಿತ, ಇಲಾಖಾ ವಿಚಾರಣೆ ಕುರಿತಂತೆ ಅರಿವು ಹೊಂದಿರಬೇಕು. ಭೂಸ್ವಾಧೀನ ಪ್ರಕರಣಗಳು, ಸ್ವಾಧೀನ ಪೂರ್ವ ಕಬೈ, ಸರ್ಕಾರಿ ಜಮೀನು ರಕ್ಷಣೆ, ತೆರಿಗೆ ಹಣ ಪೊಲಾಗದಂತೆ ತಡೆ, ಇತರೆ ವಿಷಯಗಳ ಕುರಿತಂತ ಪ್ರಕರಣಗಳನ್ನು ವ್ಯವಹರಿಸಿದ ಬಗೆ, ಅನುಭವ ಹೊಂದಿರಬೇಕು.
ನ್ಯಾಯಾಲಯ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲು ವ್ಯಾಜ್ಯಗಳನ್ನು ನಡೆಸಲು ಸರ್ಕಾರದ ಪರವಾಗಿ ಆಕ್ಷೇವಣೆ ಸಲ್ಲಿಸುವುದು ದಾಖಲೆಗಳನ್ನು ಪರಿಶೀಲಿಸುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಕಾಯ್ದೆ ಮತ್ತು ನಿಯಮ ಕಾಲ ಕಾಲಕ್ಕೆ ಪುನರಾವಲೋಕನ ಮಾಡಿಕೊಳ್ಳತಕ್ಕದ್ದು. ಕಾನೂನು ಸಲಹೆಗಾರರು ಎಲ್ಲಾ ಪ್ರಕರಣಗಳ ವಿಚಾರಣಾ ಮತ್ತು ಆಕ್ಷೇವಣಾ ಹೇಳಿಕೆ ಹಾಗೂ ಅಫಿಡವಿಟ್ ಇನ್ನಿತರ ವಿವರಗಳನ್ನು ತಮ್ಮ ರಿಜಿಸ್ಟರ್ ಗಳಲ್ಲಿ ನಮೂದು ಮಾಡಿ ಇಟ್ಟುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ನೂತನ ಜಿಲ್ಲಾಧಿಕಾರಿಗಳ ಕಚೇರಿಯನ್ನು ಕಚೇರಿಯ ವೇಳೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್