ಹಿರಿತನದ ಮೇಲೆ ಹುದ್ದೆಗೆ ನೇಮಕ ಮಾಡಿ : ಕೆ.ಎಸ್.ನಾಡಗೌಡ
ದೇವದುರ್ಗ, 18 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲವು ತಿಂಗಳುಗಳಿ0ದ ಕಂಪ್ಯೂಟರ್ ಅಪರೇಟರ್ ಎಂದು ತೆಗೆದುಕೊಂಡಿದ್ದವರಿಗೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕ ಮಾಡಿದ ಆದೇಶವನ್ನು ಕೂಡಲೇ ರದ್ದು ಮಾಡಿ, ಹದಿಮ
ಹಿರಿತನದ ಮೇಲೆ ಹುದ್ದೆಗೆ ನೇಮಕ ಮಾಡಿ: ಕೆ.ಎಸ್.ನಾಡಗೌಡ


ಹಿರಿತನದ ಮೇಲೆ ಹುದ್ದೆಗೆ ನೇಮಕ ಮಾಡಿ: ಕೆ.ಎಸ್.ನಾಡಗೌಡ


ದೇವದುರ್ಗ, 18 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆಲವು ತಿಂಗಳುಗಳಿ0ದ ಕಂಪ್ಯೂಟರ್ ಅಪರೇಟರ್ ಎಂದು ತೆಗೆದುಕೊಂಡಿದ್ದವರಿಗೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕ ಮಾಡಿದ ಆದೇಶವನ್ನು ಕೂಡಲೇ ರದ್ದು ಮಾಡಿ, ಹದಿಮೂರು ವರ್ಷಗಳಿಂದ ಕೆಲಸ ಮಾಡುವವರಿಗೆ ಹಿರಿತನದ ಅಧಾರದ ಮೇಲೆ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕ ಮಾಡುವಂತೆ ರಾಯಚೂರಿನ ಸಹಕಾರ ಸಂಘದ ಉಪ ನಿಬಂಧಕರಿಗೆ ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ನಿರ್ದೇಶಕರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಸ್.ನಾಡಗೌಡ ಅವರು ಮಾತನಾಡಿ, ಜಾಲಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶರಣಬಸವ ತಂದೆ ಶಿವಣ್ಣ ಹಂಪರಗುAದಿ ಇವರು ಗುಮಾಸ್ತನಾಗಿ ನೇಮಕಗೊಂಡು ಸುಮಾರು 13 ವರ್ಷಗಳಿಂದ ಕೇವಲ 3 ಸಾವಿರ ರೂ. ಹಣ ಸಂಭಾವನೆಗೆ ದುಡಿಯುತ್ತಾ ಬಂದಿದ್ದಾನೆ. ಪ್ರಭಾರಿ ಕಾರ್ಯದರ್ಶಿಯಾಗಿದ್ದ ರವಿಕುಮಾರ ಕೋರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆಡಳಿತಾಧಿಕಾರಿಗಳು ಸಹಕಾರ ಇಲಾಖೆಯ ಕಾನೂನಿನಂತೆ ಹಿರಿತನದ ಆದರದ ಮೇಲೆ ಶರಣಬಸವ ತಂದೆ ಶಿವಣ್ಣ ಇವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಆದೇಶ ನೀಡಿದ್ದರು. ಆದರೆ ಉದ್ದೇಶ ಪೂರ್ವಕವಾಗಿ ಸೂಪರ್ವೈಸರ್ ಮಹೀಬೂಬ್ ಅವರನ್ನು ತೆಗೆದುಕೊಳ್ಳುವ ಸಲುವಾಗಿ ರಾಯಚೂರಿನ ಆರ್.ಡಿ.ಸಿ.ಸಿ ಬ್ಯಾಂಕ್ ಅಧಿಕಾರಿಗಳಿಂದ ಪತ್ರ ಬರೆದು ಶರಣಬಸವ ತಂದೆ ಶಿವಣ್ಣ ಅವರ ಆದೇಶವನ್ನು ರದ್ದು ಮಾಡಲಾಗಿದೆ ಎಂದರು.

ಕೇವಲ ಒಂದು ವರ್ಷದ ಹಿಂದೆ ಕಂಪ್ಯೂಟರ್ ಆಪರೇಟರ್ ಎಂದು ತೆಗೆದು ಕೊಂಡವರಿಗೆ ಕಾನೂನನ್ನು ಗಾಳಿಗೆತೂರಿ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಕ ಆದೇಶ ನೀಡಿದ್ದಾರೆ. ಇದರಿಂದ 13 ವರ್ಷಗಳಿಂದ ಕೆಲಸ ಮಾಡುತ್ತಿದ್ದವರಿಗೆ ಅನ್ಯಾಯ ಮಾಡಲಾಗಿದೆ. ಶರಣಬಸವ ಪದವಿದರರಾಗಿದ್ದು, ಅವರು ಸಹಕಾರ ಇಲಾಖೆ ನೀಡುವ ತರಬೇತಿಯನ್ನು ಸಹ ಪಡೆದು ಉತ್ತೀರ್ಣನಾಗಿದ್ದಾನೆ. ಅಲ್ಲದೆ ಶರಣಬಸವ ಅವರು ಕಡು ಬಡವನ್ನಾಗಿದ್ದೇನೆ. ಶರಣಬಸವ ತಂದೆ ಶಿವಣ್ಣ ಇವರಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮುಂದುವಸಬೇಕು. ಒಂದು ವೇಳೆ ಮುಂದು ವರ್ಷದಿದ್ದರೆ ಜಾಲಹಳ್ಳಿ ಕೃಷಿ ದಿನ ಸಹಕಾರ ಸಂಘದ ಮುಂದೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೇ ಆಗುತ್ತಾರೆ ಎಂದು ಅವರು ಹೇಳಿದರು.

25-09-2025 ರಂದು ಶರಣಬಸವ ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸುವಂತೆ ಸರ್ವನುಮತಿಯಿಂದ ತೀರ್ಮಾನ ಕೈಗೊಂಡರು ವೃತ್ತ ವೀಕ್ಷಕರು ಸಭೆಯ ನಡುವಳಿಕೆ ಪುಸ್ತಕದಲ್ಲಿ ಬರೆಯದೆ ಸಭೆಯಿಂದ ಪಲಾಯನ ಮಾಡಿದರು. ಹೀಗೆ ಉದ್ದೇಶ ಪೂರ್ವಕವಾಗಿ ಯಾವುದೇ ಒತ್ತಡಕ್ಕೆ ಮಣಿದು ಕಾನೂನು ಬಾಹಿರವಾಗಿ ಆದೇಶ ಮಾಡಿದ್ದಾರೆ. ಅವರ ಅವ್ಯವಹಾರಗಳು ರುಜುವಾಗಿದ್ದು, ಅಡಿಟ್ ವರದಿಯಲ್ಲಿ ಹಣ ಕಟ್ಟುವಂತೆ ಆದೇಶವಾಗಿದೆ. ಅವರನ್ನು ರಕ್ಷಿಸಲು ಯಾವುದೇ ಅನುಭವ ಇಲ್ಲದವರಿಗೆ ಆದೇಶ ನೀಡಿದ್ದಾರೆ. ತಕ್ಷಣ ಈ ಆದೇಶ ಹಿಂಪಡೆದು ಸೇವಾ ಹಿರಿತನದ ಅದರದ ಮೇಲೆ ಶರಣಬಸವನಿಗೆ ಆದೇಶ ನೀಡಬೇಕು. ಇಲ್ಲದಿದ್ದರೆ ತಮ್ಮ ಕಾನೂನುಬಾಹಿರ ನಿರ್ಧಾರದ ವಿರುದ್ಧ ಹೋರಾಟ ಮಾಡಲಾಗುವುದು. ಅಲ್ಲದೆ ಕಾನೂನು ಹೋರಾಟಕ್ಕಾಗಿ ನ್ಯಾಯಲಯದಲ್ಲಿ ಹೋರಾಟ ಮಾಡಲಾಗುವುದು ತಾವು ಅದಕ್ಕೆ ಅವಕಾಶ ನೀಡದೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಜಾಲಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಬಸನಗೌಡ ಸಿದ್ನಕಲ್, ಚನ್ನಮ್ಮ ಇರಗಂಡ, ಯಕಂಪ್ಪ ಯರಕಮಟ್ಟಿ, ಡಿಎಸ್.ಎಸ್. ಸಂಘಟನೆಯ ಮುಖಂಡರಾದ ಎನ್.ಲಿಂಗಪ್ಪ, ಅಮರೇಶ ಚಲವಾಧಿ, ರಾಚಪ್ಪ ಸೌದ್ರಿ, ಸಾಬಣ್ಣ ರಾಂಪಳಿ, ಶಿವಣ್ಣ ಹಂಪರಗು0ದಿ, ಬಸವರಾಜ ಅಯ್ಯಾಳ, ಬಸವರಾಜ ದೊಡ್ಡಳಿ, ರಂಗಪ್ಪ ಜಂಪಿ ಸೇರಿದಂತೆ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande