
ಬಳ್ಳಾರಿ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಸಾರಾಂಗ ಹಾಗೂ ಕರ್ನಾಟಕ ಪ್ರಕಾಶಕರ ಸಂಘ(ರಿ) ಬೆಂಗಳೂರು ಇವರ ಸಹಯೋಗದಲ್ಲಿ ಪುಸ್ತಕ ಪ್ರಕಾಶನ ಕುರಿತ ಎರಡು ದಿನಗಳ ಕಮ್ಮಟವನ್ನು ಡಿ.17 ಮತ್ತು 18 ರಂದು ವಿವಿ ಯಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಪ್ರಕಾಶನ ರಂಗದ ಸ್ಥೂಲ ನೋಟ, ಪುಸ್ತಕ ನಿರ್ಮಾಣದ ವಿವಿಧ ಹಂತಗಳ ಬಗೆ, ಪುಸ್ತಕ ಪ್ರಕಾಶನ ಮತ್ತು ಕಾನೂನುಗಳು, ಕರಡು ತಿದ್ದುವಿಕೆಯ ವಿವಿಧ ಆಯಾಮಗಳು, ಪುಸ್ತಕ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ, ಮುದ್ರಣ ಶಾಲೆಯ ಹಂತಗಳು, ಪುಸ್ತಕ ಸಂಸ್ಕೃತಿಯ ಪ್ರಸಾರ ಮತ್ತು ಪ್ರಸಾರಾಂಗಗಳು, ಪತ್ರಿಕಾ ವಿಮರ್ಶೆ ಮತ್ತು ಪ್ರಸಾರ, ಪುಸ್ತಕ ಪ್ರಕಾಶನ ಮತ್ತು ಮಾರಾಟ ಜಾಲ ಮೊದಲಾದ ವಿಷಯಗಳ ರಾಜ್ಯದ ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿಗಳು ನಡೆಯಲಿವೆ.
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ವಿದ್ಯಾರ್ಥಿಗಳು, ಅಧ್ಯಾಪಕರಿಗೆ, ಹೊಸ ಪ್ರಕಾಶಕರಿಗೆ ಅನುಕೂಲವಾಗಲಿದೆ.
ಕಮ್ಮಟದಲ್ಲಿ ಭಾಗವಹಿಸುವ ಆಸಕ್ತರು ಮಾಹಿತಿಗಾಗಿ ಪ್ರಸಾರಾಂಗದ ನಿರ್ದೇಶಕ ಡಾ.ತಿಪ್ಪೇರುದ್ರ (9448855457) ಗೆ ಸಂಪರ್ಕಿಸಬಹುದು ಎಂದು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್