
ಕೊಪ್ಪಳ, 16 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ನಗರಸಭೆ ವ್ಯಾಪ್ತಿಯ ಜಯಪ್ರಕಾಶ ಮಾರುಕಟ್ಟೆಯಲ್ಲಿರುವ ನಗರಸಭೆ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಮೊತ್ತ ಪಾವತಿಸದ 2 ವಾಣಿಜ್ಯ ಮಳಿಗೆಗಳನ್ನು ನಿಯಮಾನುಸಾರ ಬಂದ್ ಮಾಡಿಸಲಾಗಿದೆ.
ನಗರಸಭೆ ವ್ಯಾಪ್ತಿಯ ಜಯಪ್ರಕಾಶ ಮಾರುಕಟ್ಟೆಯಲ್ಲಿ ನಗರಸಭೆಯ ಒಟ್ಟು 15 ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಮಳಿಗೆಗಳ ಬಾಡಿಗೆ ಬಾಕಿದಾರರು ಬಾಡಿಗೆ ಮೊತ್ತ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ನಿಯಮಾನುಸಾರ ಬಾಕಿ ಮೊತ್ತ ಪಾವತಿಸುವಂತೆ ಬಾಡಿಗೆ ಬಾಕಿದಾರರಿಗೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ಬಾಡಿಗೆ ಬಾಕಿದಾರರು ಬಾಕಿ ಮೊತ್ತ ಪಾವತಿಸದ ಕಾರಣ ಡಿಸೆಂಬರ್ 15 ರಂದು ಬಾಕಿದಾರರನ್ನು ಸಂಪರ್ಕಿಸಿ ಬಾಕಿ ಮೊತ್ತ ಪಾವತಿಸುವಂತೆ ಸೂಚಿಸಲಾಗಿತ್ತು.
ಇವುಗಳಲ್ಲಿ 13 ಬಾಡಿಗೆ ಬಾಕಿದಾರರಿಂದ ಮಳಿಗೆ ಬಾಡಿಗೆ ಬಾಕಿ ಮೊತ್ತ ರೂ.8,94,000/- ಗಳನ್ನು ವಸೂಲಾತಿ ಮಾಡಲಾಗಿದೆ. ಉಳಿದ 2 ಮಳಿಗೆ ಬಾಡಿಗೆದಾರರು ಬಾಕಿ ಮೊತ್ತ ಪಾವತಿಸಲು ನಿರಾಕರಿಸಿದ ಕಾರಣ ಆ ಮಳಿಗೆಗಳನ್ನು ಸೀಜ್ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್