ಬಳ್ಳಾರಿ : ಎಚ್.ಡಿ.ಕೆ ಹುಟ್ಟುಹಬ್ಬ ಆಚರಣೆ
ಬಳ್ಳಾರಿ, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಆರೋಗ್ಯ, ಆಯುಷ್ಯ ಮತ್ತು ಕೀರ್ತಿ ಹೆಚ್ಚಲು ಕೋರಿ ಬಳ್ಳಾರಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮನ ದೇವಸ್ಥಾನದಲ್ಲಿ ಮಂಗಳವಾರ ಜೆಡಿಎಸ್ ಮುಖ
ಬಳ್ಳಾರಿ: ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ


ಬಳ್ಳಾರಿ: ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ


ಬಳ್ಳಾರಿ: ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ


ಬಳ್ಳಾರಿ, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಆರೋಗ್ಯ, ಆಯುಷ್ಯ ಮತ್ತು ಕೀರ್ತಿ ಹೆಚ್ಚಲು ಕೋರಿ ಬಳ್ಳಾರಿ ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮನ ದೇವಸ್ಥಾನದಲ್ಲಿ ಮಂಗಳವಾರ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೀನಳ್ಳಿ ತಾಯಣ್ಣ ಅವರ ನೇತೃತ್ವದಲ್ಲಿ, ಮಂಗಳವಾರ ಬೆಳಗ್ಗೆ ಎಚ್‍ಡಿಕೆ ಅಭಿಮಾನಿಗಳು ಸೇರಿ ಜೆಡಿಎಸ್ ಕಚೇರಿಯಿಂದ ಬಳ್ಳಾರಿಯ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಾಲಯದವರೆಗೆ ಬೈಕ್ ರ್ಯಾಲಿ ನಡೆಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಎಚ್.ಡಿ. ಕುಮಾರಸ್ವಾಮಿ ಅವರ ಹೆಸರಲ್ಲಿ ಕುಂಕಮಾರ್ಚನೆ ನೆರವೇರಿಸಿ, 101 ತೆಂಗಿನಕಾಯಿಗಳನ್ನು ದೇವಿಗೆ ಅರ್ಪಿಸಿ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಬಳ್ಳಾರಿ ನಗರ ಘಟಕದ ಅಧ್ಯಕ್ಷರಾದ ಹೊನ್ನೂರು ಸ್ವಾಮಿ (ವಂಡ್ರಿ) ಸೋಮಪ್ಪ, ಅಶೋಕ ಸಂಗನಕಲ್ಲು, ಮೇಘರಾಜ್, ವಸಂತ್ ಕುಮಾರ್ ಶಿವನಾರಾಯಣ, ಬಸವ, ಹೊಸಗೇರಪ್ಪ, ಬಾವಿ ಶಿವಕುಮಾರ್, ಯಲ್ಲಣ್ಣಗೌಡ, ರುದ್ರಮುನಿ, ರಾಕೇಶ್ (ಮುತ್ತು), ಪ್ರದೀಪ್, ಅಂಬಣ್ಣ, ಅಂಜಿನಪ್ಪ ನಾಗರಾಜ್, ದೊಡ್ಡಬಸಪ್ಪ, ಹಾಜಿಬಾಯ್, ಹೊನ್ನೂರ ಅಲಿ, ಪುಷ್ಪ, ಜಮೀಲಾ, ಭವಾನಿ, ವಿಜಯ, ರೇಣುಕಾ, ಶಬನಾ, ವರಲಕ್ಷ್ಮಿ, ರಾಜೇಶ್ವರಿ, ರೆಹಮತ್, ಲಕ್ಷ್ಮೀ, ಶಮೀನ್ ಬಾನು, ಜಯಲಕ್ಷ್ಮೀ ಸೇರಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande