ಕೊಪ್ಪಳ ಕಾರ್ಖಾನೆಗಳ ಸಮಸ್ಯೆಯಿಂದ‌ ಮುಕ್ತಿ ಕೊಡಿ; ಬೆಳಗಾವಿಯಲ್ಲೂ ಹೋರಾಟ
ಕೊಪ್ಪಳ, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಕರೆದುಕೊಂಡು ಬಂದು ಕಾರ್ಖಾನೆಯಿಂದ ಬಾಧಿತವಾದ 20 ಹಳ್ಳಿಗಳ ಜನರನ್ನು ಮಾತನಾಡಿಸಬೇಕು. ಕೊಪ್ಪಳ ನಗರ ಬಲ್ಡೋಟಾ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದ ಒಂದು ಚಿ
ಕೊಪ್ಪಳ ಕಾರ್ಖಾನೆಗಳ ಸಮಸ್ಯೆಯಿಂದ‌ ಮುಕ್ತಿ ಕೊಡಿ; ಬೆಳಗಾವಿಯಲ್ಲೂ ಹೋರಾಟ


ಕೊಪ್ಪಳ ಕಾರ್ಖಾನೆಗಳ ಸಮಸ್ಯೆಯಿಂದ‌ ಮುಕ್ತಿ ಕೊಡಿ; ಬೆಳಗಾವಿಯಲ್ಲೂ ಹೋರಾಟ


ಕೊಪ್ಪಳ, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಕರೆದುಕೊಂಡು ಬಂದು ಕಾರ್ಖಾನೆಯಿಂದ ಬಾಧಿತವಾದ 20 ಹಳ್ಳಿಗಳ ಜನರನ್ನು ಮಾತನಾಡಿಸಬೇಕು. ಕೊಪ್ಪಳ ನಗರ ಬಲ್ಡೋಟಾ ಎಂ.ಎಸ್.ಪಿ.ಎಲ್. ಪಲ್ಲೆಟ್ ಘಟಕದ ಒಂದು ಚಿಮಣಿಯಿಂದ ಬರುವ ದೂಳು, ಹೊಗೆಯಿಂದ ನಗರದ ಅರ್ಧ ಭಾಗ ಬಾಧಿತವಾಗಿದೆ. ಇಲ್ಲಿಯ ಜನರನ್ನೂ ಮಾತನಾಡಿಸಬೇಕು. ಈಗಾಗಲೇ ತಜ್ನರ ಸಮಿತಿ ಅಧ್ಯಯನವನ್ನು ಐಐಎಸ್ಸಿ ಮಾಡಿದೆ ಎಂದು ಹೇಳಿದ್ದು ಅನುಮಾನ ಹುಟ್ಟಿಸುತ್ತದೆ. ತಜ್ನರ ಸಮಿತಿಯಲ್ಲಿ ಸ್ಥಳೀಯ ಬಾಧಿತರ ಪ್ರತಿನಿಧಿಗಳು, ಹೋರಾಟ ಸಮಿತಿ ಮುಖಂಡರು ಒಳಗೊಂಡಿರಬೇಕು ಎಂದು ಆಗ್ರಹಿಸಲಾಯಿತು.

ಬಲ್ಡೋಟಾ ವಿಸ್ತರಣೆ ಈ ಕೂಡಲೇ ನಿಲ್ಲಬೇಕು ಎಂದು ಘೋಷಣೆ ಕೂಗಿದಾಗ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಸಮಾಧಾನಪಡಿಸಲು ಮುಂದಾದಾಗ ಅವರ ನಡೆಯನ್ನು ಖಂಡಿಸಿ ಕೈಗಾರಿಕಾ ಮಂತ್ರಿಗಳಿಗೆ ಮೊದಲು ತಿಳಿ ಹೇಳಿ ಎಂದು, ಅಧಿವೇಶನದಲ್ಲಿ ಮಾತನಾಡಿ ಎಂದು ಒತ್ತಡ ಹಾಕಲಾಯಿತು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಲ್ಲಮಪ್ರಭು ಬೆಟ್ಟದೂರು ನಗರದ ಹತ್ತಿರ ಬಲ್ಡೋಟಾ (ಬಿ.ಎಸ್.ಪಿ.ಎಲ್) ಸೇರಿದಂತೆ ತಾಲೂಕಿನ ನಾಲ್ಕು ಬೃಹತ್ ಕಾರ್ಖಾನೆಗಳ ವಿಸ್ತರಣೆ ಹಾಗೂ ಹೊಸ ಕಾರ್ಖಾನೆಗೆ ಅನುಮತಿ ಕೊಡಬಾರದು, ತುಂಗಭದ್ರಾ ವಿಷಗೊಳಿಸುವ 28 ಕಾರ್ಖಾನೆಗಳನ್ನು ಬಂದ್ ಮಾಡಬೇಕು, ಬಸಾಪುರ ಕೆರೆ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇಂದು ಅಧಿವೇಶನ ಅಂಗವಾಗಿ ಬೆಳಗಾವಿಯಲ್ಲಿ ಧರಣಿ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಧರಣಿ ಸ್ಥಳಕ್ಕೆ ಮುಖ್ಯಮಂತ್ರಿಗಳ ಪರವಾಗಿ ಆಗಮಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಶಿವರಾಜ ತಂಗಡಗಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಂತರ ಕೊಪ್ಪಳ ತಾಲೂಕಿನಲ್ಲಿ ತುಂಗಭದ್ರಾ ನದಿ ತಡದಲ್ಲಿ 28 ಬೃಹತ್ ಕಾರ್ಖಾನೆಗಳು ಬಂದು 20 ಹಳ್ಳಿಗಳ ಜನಜೀವನ ಕೃಷಿ, ಅಂತರ್ಜಲ ಎಲ್ಲಾ ಹಾಳು ಮಾಡಿವೆ.

ಜೊತೆಗೆ ಈಗ ಕೊಪ್ಪಳ ಹತ್ತಿರ 54 ಸಾವಿರ ಕೋಟಿ ವೆಚ್ಚದ ಕಾರ್ಖಾನೆ ಆರಂಭವಾದರೆ ಒಂದುವರೆ ಲಕ್ಷ ಜನರ ಬದುಕು ಸಂಕಷ್ಟಕ್ಕೆ ಈಡಾಗಲಿದೆ. ಈ ಹಿಂದೆ ಸದನದಲ್ಲಿ ಕೈಗಾರಿಕಾ ಸಚಿವರು ಮಾಲಿನ್ಯದ ಕುರಿತು ತಂತ್ರಜ್ಞರ ಸಮಿತಿಯಿಂದ ಅಧ್ಯಯನ ಆಗಿದೆ ಎಂದು ಹೇಳಿದ್ದಾರೆ. ಆದರೆ ಅಧ್ಯಯನ ಸಂದರ್ಭದಲ್ಲಿ ಬಾಧಿತ ಹಳ್ಳಿಗಳ ಜನ ಹಾಗೂ ನಮ್ಮ ಹೋರಾಟ ವೇದಿಕೆಯ ಪ್ರತಿನಿಧಿಗಳಿಲ್ಲದೆ ಪಾರದರ್ಶಕವಾಗಿ ಅಧ್ಯಯನ ನಡೆಸಿರಲು ಸಾಧ್ಯವಿಲ್ಲ.

ಕಾರ್ಖಾನೆಗಳು ಸಂಕಟಗಳನ್ನು ತಂದದ್ದರಿಂದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬಲ್ದೋಟ ಕಾರ್ಖಾನೆ ವಿಸ್ತರಣೆಯ ರದ್ದು ಆದೇಶವನ್ನು ತನ್ನಿ ಎಂದು ಸಾವಿರಾರು ಜನರ ಸಮ್ಮುಖದಲ್ಲಿ ಶ್ರೀಗಳು ಜನಪ್ರತಿನಿಧಿಗಳಿಗೆ ಹೇಳಿದ್ದಾರೆ. ಇವತ್ತಿಗೂ ನಿಮ್ಮ ಸರ್ಕಾರ ಸ್ಪಂದಿಸುತ್ತಿಲ್ಲ.

ಅಲ್ಲದೆ ಕೈಗಾರಿಕಾ ಸಚಿವರು ಎಂ ಬಿ ಪಾಟೀಲ್ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಭೇಟಿಯಾಗುತ್ತೇನೆ ಎನ್ನುತ್ತಿರುವುದು ಅಲ್ಲಿ ಕಾರ್ಖಾನೆಯನ್ನು ಆರಂಭಿಸಿಯೇ ಸಿದ್ದ ಎನ್ನುವಂತೆ ಅವರ ಮಾತು ಇದೆ. ಕೊಪ್ಪಳ ಜನರ ಆರೋಗ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎನಿಸುತ್ತಿದೆ. ಈ ಕಾರಣಕ್ಕೆ 47 ದಿನದಿಂದ ಕೊಪ್ಪಳದಲ್ಲಿ ಧರಣಿ ನಡೆಸುತ್ತಾ ನಾವು ಇಂದು ಬೆಳಗಾವಿಯಲ್ಲಿ ಪ್ರತಿಭಟಿಸಿ ತಮಗೆ ಮನವಿ ಸಲ್ಲಿಸುತ್ತಿದ್ದು ಯಾವುದೇ ಕಾರಣಕ್ಕೂ ಕಾರ್ಕಾನೆ ವಿಸ್ತರಣೆಗೆ ಅನುಮತಿ ಕೊಡಬಾರದು‌. ಹಾಗೂ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿ ಸಂಚಾಲಕರು ಮಲ್ಲಿಕಾರ್ಜುನ ಬಿ. ಗೋನಾಳ, ಮುಖಂಡರಾದ ಮೂಕಪ್ಪ ಮೇಸ್ತ್ರಿ , ಡಿ. ಎಂ. ಬಡಿಗೇರ್, ಈಶ್ವರ ಹತ್ತಿ, ಮಹಾಂತೇಶ ಕೊತಬಾಳ, ಶರಣು ಗಡ್ಡಿ, ಮಾಲಾ ಬಡಿಗೇರ್, ಸೌಮ್ಯ ನಾಲವಾಡ, ಸರೋಜಾ ಬಾಕಳೆ, ವಿದ್ಯಾ ನಾಲವಾಡ, ಸುಂಕಮ್ಮ ಪಡಚಿಂತಿ, ರಾಮಮ್ಮ ಸಿರವಾರ, ಯಮನೂರಪ್ಪ ಹಾಲಳ್ಳಿ , ಶಿವಾನಂದಯ್ಯ, ಬಿಳಗಿಮಠ, ಗವಿಸಿದ್ಧಪ್ಪ ಹಲಿಗಿ, ಲಿಂಗರಾಜ ನವಲಿ, ಮಂಗಳೇಶ ರಾಠೋಡ, ಹನಮಂತ ಕಟ್ಟಗಿ, ಮಹಾದೇವಪ್ಪ ಮಾವಿನಮಡು, ಚಾರಣ ಬಳಗದ ಚಂದ್ರಗೌಡ ಪಾಟೀಲ, ಶಿವಪ್ಪ ಹಡಪದ, ರಾಜ್ಯ ರೈತ ಸಂಘದ ಬಸವರಾಜ ಹೂಗಾರ, ವೀರಣ್ಣ ನಿಂಗೋಜಿ, ಸದಾಶಿವ ಮುದ್ದಾಬಳ್ಳಿ, ಪ್ರಕಾಶ ಮೇದಾರ್, ಹೂಗಾರ ಸಂಘದ ಸತೀಶ ಹೂಗಾರ, ಕುರಿಗಾರ ಸಂಘದ ಹನಮಂತಪ್ಪ ಚಿಂಚಲಿ, ಭೀಮಪ್ಪ ಯಲಬುರ್ಗಾ, ಇತರರು ಭಾಗವಹಿಸಿ ಅಧಿವೇಶನದ ಧರಣಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande