ಕಾರೇಕಲ್ಲು ಸುತ್ತಲೂ ಚೆಕ್ ಡ್ಯಾಂ ನಿರ್ಮಿಸಿ : ವೈ.ಎಂ. ಸತೀಶ್
ಬೆಳಗಾವಿ, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಕಾರೇಕಲ್ಲು ಗ್ರಾಮದ ಸುತ್ತಲು ಸುರಿವ ಮಳೆಯಿಂದಾಗಿ ಅಂದಾಜು 1000 ಕ್ಯುಸೆಕ್ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದ್ದು ಗ್ರಾಮದ ಸುತ್ತಲೂ 2 ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಅಂತರ್ಜಲಮಟ್ಟ ಹೆಚ್ಚಿಸಬೇ
ಕಾರೇಕಲ್ಲು ಸುತ್ತಲೂ ಚೆಕ್ ಡ್ಯಾಂ ನಿರ್ಮಿಸಿ : ವೈ.ಎಂ. ಸತೀಶ್


ಕಾರೇಕಲ್ಲು ಸುತ್ತಲೂ ಚೆಕ್ ಡ್ಯಾಂ ನಿರ್ಮಿಸಿ : ವೈ.ಎಂ. ಸತೀಶ್


ಬೆಳಗಾವಿ, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಕಾರೇಕಲ್ಲು ಗ್ರಾಮದ ಸುತ್ತಲು ಸುರಿವ ಮಳೆಯಿಂದಾಗಿ ಅಂದಾಜು 1000 ಕ್ಯುಸೆಕ್ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದ್ದು ಗ್ರಾಮದ ಸುತ್ತಲೂ 2 ಕೋಟಿ ರೂಪಾಯಿ ವೆಚ್ಚದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಅಂತರ್ಜಲಮಟ್ಟ ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಳಗಾವಿಯ `ಸುವರ್ಣ ಸೌಧ'ದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರ ಈ ಪ್ರಶ್ನೆಯನ್ನು ಪ್ರಸ್ತಾಪಿಸಿದ ವೈ.ಎಂ. ಸತೀಶ್ ಅವರು, ಬಳ್ಳಾರಿಯಿಂದ 30 ಕಿಲೋ ಮೀಟರ್ ದೂರದಲ್ಲಿ ಇರುವ ಕಾರೇಕಲ್ಲು ಗ್ರಾಮದಲ್ಲಿ 800 ಎಕರೆ ಕೃಷಿ ಭೂಮಿ ಇದೆ. ಈ ಗ್ರಾಮದ ಸುತ್ತಲಿನ ಗುಡ್ಡದಲ್ಲಿ ಸುರಿಯುವ 1000 ಕ್ಯುಸೆಕ್ ಪ್ರಮಾಣದ ಮಳೆಯು ವ್ಯರ್ಥವಾಗಿ ಹರಿಯುತ್ತಿದೆ. ಈ ನೀರನ್ನು ಶೇಖರಣೆ ಮಾಡಿದಲ್ಲಿ ಅಂತರ್ಜಲಮಟ್ಟ ಹೆಚ್ಚಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರಲ್ಲಿ ಮನವಿ ಮಾಡಿದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರು, ಈ ಕುರಿತು 200 ಲಕ್ಷ ರೂಪಾಯಿ (2 ಕೋಟಿ ರೂಪಾಯಿ) ಮೊತ್ತದ ಯೋಜನಾ ವರದಿ ಸಿದ್ಧವಾಗಿದೆ. ಈ ಯೋಜನೆ ಜಾರಿಯಾದಲ್ಲಿ ಗ್ರಾಮದ ಸುತ್ತಲೂ ಅಂತರ್ಜಲಮಟ್ಟ ಹೆಚ್ಚಲಿದೆ. ಕರ್ನಾಟಕ ಸರ್ಕಾರ ಈ ಯೋಜನೆಯ ಪ್ರಾರಂಭಕ್ಕೆ ಆಸಕ್ತಿ ಹೊಂದಿದೆ ಎಂದು ಉತ್ತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande