ಬೆಂಗಳೂರು ವಿಮಾನ ನಿಲ್ದಾಣದ ಬಳಿ ಟ್ಯಾಕ್ಸಿ ಚಾಲಕರ ಪ್ರತಿಭಟನೆ
ಬೆಂಗಳೂರು, 16 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪಾರ್ಕಿಂಗ್ ಮತ್ತು ದಂಡ ನೀತಿ ವಿರೋಧಿಸಿ ಟ್ಯಾಕ್ಸಿ ಚಾಲಕರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆಯಿತು. ಸಾದಹಳ್ಳಿ ಟೋಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಕ್ಯಾಬ್ ಚಾಲಕರು ರಸ್ತೆ ತಡೆ ನಡೆಸಿ
Protest


ಬೆಂಗಳೂರು, 16 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಪಾರ್ಕಿಂಗ್ ಮತ್ತು ದಂಡ ನೀತಿ ವಿರೋಧಿಸಿ ಟ್ಯಾಕ್ಸಿ ಚಾಲಕರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆಯಿತು. ಸಾದಹಳ್ಳಿ ಟೋಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಕ್ಯಾಬ್ ಚಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವ ವೇಳೆ ಕಲ್ಲು ತೂರಾಟವೂ ನಡೆಯಿತು.

ಕನ್ನಡ ಪರ ಸಂಘಟನೆಗಳು ಹಾಗೂ ಏರ್‌ಪೋರ್ಟ್ ಟ್ಯಾಕ್ಸಿ ಚಾಲಕರು ಹೊಸ ದಂಡ ನಿಯಮ ಖಂಡಿಸಿ ಟೋಲ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಚಾಲಕರ ಸಂಘದ ಮುಖಂಡ ನಾರಾಯಣಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಈ ವೇಳೆ ಮಾತನಾಡಿದ ಟ್ಯಾಕ್ಸಿ ಚಾಲಕರ ಸಂಘದ ಮುಖಂಡ ನಾರಾಯಣಸ್ವಾಮಿ, ನಾವು ಕಳೆದ 17 ವರ್ಷಗಳಿಂದ ಏರ್‌ಪೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಸೈಡ್ ಪಿಕ್‌ಅಪ್ ವ್ಯವಸ್ಥೆಯಿಂದ ನಮಗೆ ತೀವ್ರ ತೊಂದರೆ ಆಗುತ್ತಿದೆ. ಇದು ಬಿಐಎಎಲ್‌ನ ಕುತಂತ್ರ ಎಂದು ಆರೋಪಿಸಿದರು. ಉಪ ಪೋಲಿಸ ಆಯುಕ್ತರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ನಾವು ನಾಲ್ಕು ದಿನಗಳವರೆಗೆ ಕಾಯುತ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಗೆ ಕಾರಣ:

ವಿಮಾನ ನಿಲ್ದಾಣ ಆಡಳಿತ ಮಂಡಳಿ ಹಳದಿ ಬೋರ್ಡ್ ಕ್ಯಾಬ್‌ಗಳಿಗೆ ಹೊಸ ನಿಲುಗಡೆ ನಿಯಮ ಜಾರಿಗೆ ತಂದಿದೆ. ಅದರಂತೆ, ನಿಲುಗಡೆ ಸ್ಥಳದಲ್ಲಿ 8 ನಿಮಿಷಗಳವರೆಗೆ ಉಚಿತವಾಗಿ ಕಾಯಲು ಅವಕಾಶ ನೀಡಲಾಗಿದೆ. 8 ರಿಂದ 13 ನಿಮಿಷಗಳವರೆಗೆ ವಾಹನ ನಿಲ್ಲಿಸಿದರೆ 150 ರೂ ದಂಡ, 13 ರಿಂದ 18 ನಿಮಿಷಗಳವರೆಗೆ ನಿಲ್ಲಿಸಿದರೆ 300 ರೂ ದಂಡ ವಿಧಿಸಲಾಗುತ್ತದೆ. ನಿಯಮ ಉಲ್ಲಂಘನೆ ಮುಂದುವರಿದರೆ ವಾಹನವನ್ನು ಟೋಯಿಂಗ್ ಮಾಡುವ ಕ್ರಮಕ್ಕೂ ಮುಂದಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande