‎ಸಮುದ್ರ ಉತ್ಪನ್ನ ರಫ್ತಿನಲ್ಲಿ ಭಾರತದ ಮೈಲಿಗಲ್ಲು
ಬೆಂಗಳೂರು, 14 ಡಿಸೆಂಬರ್ (ಹಿ.ಸ.) : ಆ್ಯಂಕರ್ : ‎ಭಾರತ ಸಮುದ್ರ ಉತ್ಪನ್ನ ರಫ್ತು ವಲಯದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಜಾಗತಿಕ ಬೇಡಿಕೆ ಪುನಶ್ಚೇತನದೊಂದಿಗೆ ಮುನ್ನಡೆದು, 2024–25ನೇ ಹಣಕಾಸು ವರ್ಷದ ಮೊದಲೇಳು ತಿಂಗಳಲ್ಲೇ ಶೇ.16.2ರಷ್ಟು ಬೆಳವಣಿಗೆ ದಾಖಲಿಸಿದೆ. ಏಪ್ರಿಲ್ -ಅಕ್ಟೋಬರ್ ಅವಧಿಯಲ್ಲಿ
marine product exports


ಬೆಂಗಳೂರು, 14 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ‎ಭಾರತ ಸಮುದ್ರ ಉತ್ಪನ್ನ ರಫ್ತು ವಲಯದಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಜಾಗತಿಕ ಬೇಡಿಕೆ ಪುನಶ್ಚೇತನದೊಂದಿಗೆ ಮುನ್ನಡೆದು, 2024–25ನೇ ಹಣಕಾಸು ವರ್ಷದ ಮೊದಲೇಳು ತಿಂಗಳಲ್ಲೇ ಶೇ.16.2ರಷ್ಟು ಬೆಳವಣಿಗೆ ದಾಖಲಿಸಿದೆ.

ಏಪ್ರಿಲ್ -ಅಕ್ಟೋಬರ್ ಅವಧಿಯಲ್ಲಿ ಭಾರತದಿಂದಾದ ಸಮುದ್ರೋತ್ಪನ್ನಗಳ ಒಟ್ಟು ರಫ್ತು ಮೌಲ್ಯ ಬರೋಬ್ಬರಿ 4.87 ಬಿಲಿಯನ್ ಡಾಲರ್‌ ದಾಟಿದೆ.‎ಏಷ್ಯಾ ಹಾಗೂ ಯುರೋಪಿಯನ್ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರತದ ವಸ್ತು ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆ ಕುದುರಿದೆ. ಕೇಂದ್ರ ಸರ್ಕಾರದ ಜಿಎಸ್ಟಿ ಇಳಿಕೆ ನೀತಿಯು ಇದಕ್ಕೆ ಬೆಂಬಲವಾಗಿ ನಿಂತಿದೆ.

ಭಾರತೀಯ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ತಮ ಮೌಲ್ಯದಿಂದಾಗಿ ವಿದೇಶಗಳು ಹೆಚ್ಚು ವಿಶ್ವಾಸವಿರಿಸಿದ್ದು, ದೇಶದ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ವೃದ್ಧಿಸಿ ರಫ್ತು ವಲಯದ ಬಲ ಹೆಚ್ಚಿಸಿದೆ.

‎ಶ್ರಿಂಪ್‌–ಪ್ರಾನ್ಸ್‌ ಪಾಲು ಶೇ.63%ಕ್ಕಿಂತ ಹೆಚ್ಚು: ‎ಸಮುದ್ರ ಉತ್ಪನ್ನ ವಲಯದಲ್ಲಿ ಶ್ರಿಂಪ್ ಮತ್ತು ಫ್ರಾನ್ಸ್ ಪ್ರಮುಖ ಪಾತ್ರ ವಹಿಸಿದ್ದು, ಒಟ್ಟು ರಫ್ತುಗಳಲ್ಲಿ ಶೇ.63ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಇದು ಭಾರತದ ಸಮುದ್ರ ವಲಯದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.

‎ಪಾರಂಪರಿಕವಾಗಿ ಭಾರತದ ಅತಿದೊಡ್ಡ ಶ್ರಿಂಪ್ ಮಾರುಕಟ್ಟೆಯಾಗಿದ್ದ ಅಮೆರಿಕಾದಲ್ಲಿ ಈ ಅವಧಿಯಲ್ಲಿ ಶೇ.7.43ರಷ್ಟು ಇಳಿಕೆ ಕಂಡುಬಂದಿದ್ದು, ರಫ್ತು ಮೌಲ್ಯ 1.06 ಬಿಲಿಯನ್ ಡಾಲರ್‌ಗೆ ಕುಸಿದಿದೆಯಾದರೂ ಒಟ್ಟಾರೆ ಬೆಳವಣಿಗೆಗೆ ಅಡ್ಡಿಯಾಗಿಲ್ಲ.

‎ಇತರೆ ರಾಷ್ಟ್ರಗಳ ಬಲ:

‎ಟ್ರಂಪ್ ಸುಂಕ ಹೇರಿಕೆಯಿಂದ ಅಮೇರಿಕಾ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ಆಗದೆ ಇದ್ದರೂ ಚೀನಾ, ವಿಯೆಟ್ನಾಂ, ಬೆಲ್ಜಿಯಂ, ಜಪಾನ್, ರಷ್ಯಾ, ಕೆನಡಾ ಹಾಗೂ ಯುಕೇಗೆ ರಫ್ತು ಹೆಚ್ಚಳ ವೃದ್ಧಿಸಿದ್ದು, ಈ ಮೂಲಕ ಅಮೆರಿಕಕ್ಕೆ ಭಾರತ ಸೂಕ್ಷ್ಮವಾಗಿಯೇ ತಿರುಗೇಟು ನೀಡಿದೆ.

ಹೊಸ ಹಾಗೂ ವೈವಿಧ್ಯಮಯ ಮಾರುಕಟ್ಟೆಗಳತ್ತ ಗಮನ ಹರಿಸಿದ ಭಾರತ ಸರ್ಕಾರದ ಪರಿಣಾಮಕಾರಿ ನೀತಿಗಳ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.

ಭಾರತೀಯ ಸಮುದ್ರ ಉತ್ಪನ್ನಗಳ ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆ ಏಷ್ಯನ್ ಮತ್ತು ಯುರೋಪಿಯನ್ ದೇಶಗಳ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಿದ್ದು, ಈ ದೇಶಗಳಲ್ಲಿನ ಆಮದು ಹೆಚ್ಚಳವು ಭಾರತದ ರಫ್ತುದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಮತ್ತು ಏಕೈಕ ಮಾರುಕಟ್ಟೆ ಮೇಲಿನ ಅವಲಂಬನೆಯನ್ನು ಹೋಗಲಾಡಿಸಿದೆ.

‎ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾರುಕಟ್ಟೆ ವೈವಿಧ್ಯೀಕರಣ, ಮೌಲ್ಯವರ್ಧಿತ ಉತ್ಪನ್ನಗಳ ಉತ್ತೇಜನ ಮತ್ತು ರಫ್ತು ಮೂಲಸೌಕರ್ಯದ ಸುಧಾರಣೆಗಳಿಂದ ಸಮುದ್ರ ವಲಯಕ್ಕೆ ಬಲ ನೀಡಿದೆ. ಸಮುದ್ರ ಉತ್ಪನ್ನ ರಫ್ತು ಕ್ಷೇತ್ರವು ಗ್ರಾಮೀಣ ಉದ್ಯೋಗ ಮತ್ತು ವಿದೇಶಿ ವಿನಿಮಯ ಗಳಿಕೆಗೆ ಪ್ರಮುಖ ಚಾಲಕವಾಗಿಯೇ ಮುಂದುವರಿಯುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande