ಭಾರತದ ಬೆಳವಣಿಗೆಗೆ ನವೀಕರಿಸಬಹುದಾದ ಇಂಧನ ಶಕ್ತಿ
ಬೆಂಗಳೂರು, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಜಪಾನ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರುತ್ತಲೇ ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆಯೂ ಅಧಿಕಗೊಳ್ಳುವ ನಿರೀಕ್ಷೆ ಹುಟ್ಟಿಸಿದೆ. 2030ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ವಿದ್ಯು
Renewable energy


ಬೆಂಗಳೂರು, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಆರ್ಥಿಕ ಬೆಳವಣಿಗೆಯಲ್ಲಿ ಭಾರತ ಜಪಾನ್‌ ಅನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರುತ್ತಲೇ ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಖಾಸಗಿ ಹೂಡಿಕೆಯೂ ಅಧಿಕಗೊಳ್ಳುವ ನಿರೀಕ್ಷೆ ಹುಟ್ಟಿಸಿದೆ. 2030ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ವಿದ್ಯುತ್‌ ಉತ್ಪಾದನಾ ಗುರಿಯೊಂದಿಗೆ ಸಾಗಿದ ಭಾರತ ದೊಡ್ಡ ಪ್ರಮಾಣದಲ್ಲಿ ಅಂದರೆ ₹30 ಲಕ್ಷ ಕೋಟಿಗೂ ಅಧಿಕ ಹೂಡಿಕೆಯ ಆಕಾಂಕ್ಷೆಯಲ್ಲಿ ದೇಶದ ಪ್ರಗತಿಗೆ ಮತ್ತಷ್ಟು ಉನ್ನತ ಕೊಡುಗೆ ಕೊಡಮಾಡುತ್ತಿದೆ.

ನವೀಕರಿಸಬಹುದಾದ ಇಂಧನ ಮತ್ತು ಸಂಬಂಧಿತ ವಲಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ದೇಶೀಯವಾಗಿಯೇ ಉನ್ನತ ಮಟ್ಟದ ತಂತ್ರಜ್ಞಾನ ಘಟಕಗಳ ಅಳವಡಿಕೆ ಮತ್ತು ಜಾಗತಿಕ ಪೂರೈಕೆಯಲ್ಲಿ ಅಭೂತಪೂರ್ವ ಬೆಳೆವಣಿಗೆ ಕಾಣುತ್ತಿರುವಂತೆಯೇ ಭಾರತದ ವೇಗದ ಆರ್ಥಿಕ ಬೆಳವಣಿಗೆಗೂ ವಿಶಿಷ್ಠ ಕೊಡುಗೆ ನೀಡುತ್ತದೆ ಎಂದು HSBC MF ಸಂಸ್ಥೆ ವರದಿ ದೃಢಪಡಿಸಿದೆ.

ಕೋವಿಡ್‌ ನಂತರದಲ್ಲಿ ದೇಶೀಯ ಬೆಳವಣಿಗೆ ಇತರೆ ದೇಶಗಳಿಗಿಂತ ವೇಗದಲ್ಲಿ ಚೇತರಿಕೆ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ GST ಸರಳೀಕರಣ, ಕಡಿಮೆ ಬಡ್ಡಿದರ, ಕಚ್ಚಾ ತೈಲ ಬೆಲೆ ಇಳಿಕೆ ಸೇರಿದಂತೆ ಅನೇಕ ಪ್ರಮುಖ ನೀತಿ ನಿಯಮಗಳಿಂದಾಗಿ ಭಾರತದ ಆರ್ಥಿಕತೆ ಇಂದು ಬಲಗೊಳ್ಳುತ್ತಿದ್ದು, ಜಾಗತಿಕವಾಗಿ ಗಮನ ಸೆಳೆಯುತ್ತಿದೆ.

ಕೇಂದ್ರ ಸರ್ಕಾರದ ಹಲವಾರು ಬೆಂಬಲಿತ ಅಂಶಗಳು ಭಾರತದ ಆರ್ಥಿಕತೆಯ ಆವೇಗದಲ್ಲಿ ಸಂಭಾವ್ಯ ಏರಿಕೆಯನ್ನು ಸೂಚಿಸುತ್ತವೆ. ಸಾಮಾನ್ಯ ಮಾನ್ಸೂನ್ ಕೂಡ ಭವಿಷ್ಯದಲ್ಲಿ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. ದೇಶದ ಹವಾಮಾನ ಸುಸ್ಥಿರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ನವೀಕರಿಸಬಹುದಾದ ಇಂಧನ ವಲಯದಲ್ಲಾಗುತ್ತಿರುವ ಮಹತ್ತರ ಬೆಳೆವಣಿಗೆಗಳು ಇದಕ್ಕೆ ಪೂರಕವಾಗಿವೆ.

ನವೀಕರಿಸಬಹುದಾದ ಇಂಧನದಲ್ಲಿ ಹೆಚ್ಚಿನ ಖಾಸಗಿ ಬಂಡವಾಳ ಮತ್ತು ದೇಶೀಯ ಬೆಂಬಲ ಭಾರತದ ಸ್ಥಿರತೆಯನ್ನು ಸಾಕಾರಗೊಳಿಸುತ್ತಿದೆ. ಇನ್ನು, ಹೂಡಿಕೆಯಲ್ಲೂ ಭಾರತ ಜಾಗತಿಕ ಆಕರ್ಷಣೆಯಲ್ಲಿದೆ. ಇತ್ತೀಚಿನ ನಿಫ್ಟಿ ಮೌಲ್ಯಮಾಪನವೇ ಇದಕ್ಕೆ ನಿದರ್ಶನ. 10 ವರ್ಷಗಳ ಸರಾಸರಿ ಅವಲೋಕಿಸಿದರೆ ನಿಫ್ಟಿ ಮತ್ತೆ ತನ್ನ ನಾಗಾಲೋಟ ಮುಂದುವರಿಸುವ ತವಕದಲ್ಲಿದೆ. ಇದರ ಆವೇಗ, ಮುನ್ನೋಟ ಭಾರತೀಯ ಷೇರುಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎನ್ನುತ್ತದೆ HSBC MF ವರದಿ.

ಭಾರತೀಯ ಮಾರುಕಟ್ಟೆ ಉತ್ತುಂಗಕ್ಕೆ ಹಲವಾರು ಸಕಾರಾತ್ಮಕ ಅಂಶಗಳನ್ನು ಈ ವರದಿ ಎತ್ತಿ ತೋರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ ಸಮೀಕ್ಷೆಯ ದತ್ತಾಂಶದ ಆಧಾರದ ಮೇಲೆ ಉದ್ಯಮ ಸಾಮರ್ಥ್ಯವೂ ಜಾಗತಿಕವಾಗಿ ವೃದ್ಧಿಸಿದೆ. ಇದರಲ್ಲಿ ಖಾಸಗಿ ಬಂಡವಾಳದ ಹರಿವು ಚೇತರಿಕೆಯ ಪ್ರಮುಖ ಚಾಲಕವಾಗಿ ಗೋಚರಿಸಿದೆ. ಇದಲ್ಲದೆ, ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯ ನಿರಂತರ ವಿಸ್ತರಣೆ ಸಹ ಉದ್ದೇಶಿತ ವಲಯಗಳಲ್ಲಿ ಹೂಡಿಕೆಗಳು ಮತ್ತು ಖಾಸಗಿಯನ್ನು ಮತ್ತಷ್ಟು ಉತ್ತೇಜಿಸಿದೆ.

*ಮೊಬೈಲ್‌ ರಫ್ತು ದಾಖಲೆ:* ಭಾರತದ ಆರ್ಥಿಕ ವಲಯಕ್ಕೆ ಉತ್ಪನ್ನ, ರಫ್ತು ವಲಯವೂ ಅಷ್ಟೇ ಅತ್ಯುನ್ನತ ಕೊಡುಗೆ ನೀಡುತ್ತಿದೆ. ಮೊಬೈಲ್ ರಫ್ತುವೇ ಇದಕ್ಕೊಂದು ಉತ್ತಮ ಉದಾಹರಣೆ. ಅಕ್ಟೋಬರ್‌ನಲ್ಲಿ ಮೊಬೈಲ್‌ ರಫ್ತು ದಾಖಲೆಯ 52.4 ಬಿಲಿಯನ್ ತಲುಪಿದೆ. ಇದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಲವಾದ ಸಂಕೇತವನ್ನು ಮೂಡಿಸಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್‌ ಹಬ್ಬದ ಋತುವಿನಿಂದಲೇ ಸ್ಮಾರ್ಟ್‌ಫೋನ್ ರಫ್ತು ಸ್ವಲ್ಪ ಏರುಗತಿಯಲ್ಲಿ ಸಾಗಿದ್ದು, ದೇಶೀಯ ಬೇಡಿಕೆ ಜತೆಗೆ ರಫ್ತುವೂ ಅಧಿಕಗೊಂಡ ಪರಿಣಾಮ ಅಕ್ಟೋಬರ್‌ ಮಾಹೆಯಲ್ಲಿ ದಾಖಲೆಯ 52.4 ಬಿಲಿಯನ್ ತಲುಪಿದೆ. ಇದು ಅಕ್ಟೋಬರ್ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ಅತ್ಯಧಿಕ ರಫ್ತು ಅಂಕಿ ಅಂಶವಾಗಿದೆ. ಹೀಗೆ ಭಾರತದ ಪ್ರತಿಯೊಂದು ಉತ್ಪನ್ನ-ಉತ್ಪಾದನೆ ವಲಯ ದೇಶದ ಸುಸ್ಥಿರತೆಗೆ ಸಾಥ್‌ ನೀಡುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande