
ನವದೆಹಲಿ, 11 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮದ ಗಡುವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಮೂಲತಃ ಡಿಸೆಂಬರ್ 11 ರಂದು ಮುಕ್ತಾಯಗೊಳ್ಳಬೇಕಿದ್ದ ಈ ಗಡುವು, ಮತದಾರರ ಪಟ್ಟಿಯ ಮರುಪರಿಶೀಲನೆಗಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಕೋರಿಕೆಯ ಮೇರೆಗೆ ವಿಸ್ತರಿಸಲಾಗಿದೆ.
ರಿನ್ವಾ ಅವರು ಮೃತರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಗೈರುಹಾಜರಾದರು ಮತ್ತು ನಕಲಿ ನಮೂನೆಗಳ ಪರಿಶೀಲನೆಗೆ ಹೆಚ್ಚುವರಿ ಸಮಯ ಅವಶ್ಯಕತೆ ಇದೆ ಎಂದು ಆಯೋಗಕ್ಕೆ ಪತ್ರ ಬರೆದಿದ್ದರು. ಉತ್ತರ ಪ್ರದೇಶದ ಜೊತೆಗೆ ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್ ಕೇಂದ್ರಾಡಳಿತ ಪ್ರದೇಶಗಳಿಗೂ ಎಸ್‌ಐಆರ್ ಗಡುವು ವಿಸ್ತರಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಈಗಾಗಲೇ ಶೇ. 99.24 ಮತ ಎಣಿಕೆ ಫಾರ್ಮ್‌ಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಈ ಪೈಕಿ ಶೇ. 18.85 ಅನ್ನು ‘ಸಂಗ್ರಹಿಸದ’ ಎಂದಾಗಿ ಗುರುತಿಸಲಾಗಿದೆ—ಇವುಗಳಲ್ಲಿ ಮೃತರು, ಶಾಶ್ವತ ಸ್ಥಳಾಂತರ, ಗೈರುಹಾಜರಾತು ಮತ್ತು ನಕಲಿ ದಾಖಲೆಗಳಿವೆ. ಇದುವರೆಗೆ ಶೇ. 80.29 ಫಾರ್ಮ್‌ಗಳು ಮತದಾರರು ಅಥವಾ ಕುಟುಂಬ ಸದಸ್ಯರ ಸಹಿಯೊಂದಿಗೆ ಹಿಂತಿರುಗಲ್ಪಟ್ಟಿವೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಇಲ್ಲದವರು ಫಾರ್ಮ್–6 ಅನ್ನು ಭರ್ತಿ ಮಾಡಲು ಸಾಧ್ಯವಾಗುತ್ತದೆ. 2025 ಜನವರಿ 1ರಂದು 18 ವರ್ಷ ತುಂಬುವ ಯುವಕರೂ ಇದೇ ನಮೂನೆ ಮೂಲಕ ನೋಂದಾಯಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಎಸ್‌ಐಆರ್ ಕುರಿತ ಸಂಗ್ರಹಿಸದ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ರಾಜಕೀಯ ಪಕ್ಷಗಳು ಈ ಪರಿಶೀಲನೆಗೆ ಸಹಕರಿಸಲು ರಿನ್ವಾ ಮನವಿ ಸಲ್ಲಿಸಿದ್ದಾರೆ. ಎಲ್ಲ ಬೂತ್ ಮಟ್ಟದ ಅಧಿಕಾರಿಗಳು ಡಿಸೆಂಬರ್ 12ರೊಳಗೆ ಬೂತ್ ಮಟ್ಟದ ಏಜೆಂಟ್‌ಗಳಿಗೆ ಅಗತ್ಯ ಪಟ್ಟಿಯನ್ನು ಒದಗಿಸಲಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa