ಮನೋಹರ್ ಪರಿಕ್ಕರ್ ಜನ್ಮ ವಾರ್ಷಿಕೋತ್ಸವ : ಗಣ್ಯರಿಂದ ಗೌರವ ಸಲ್ಲಿಕೆ
ನವದೆಹಲಿ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಾಜಿ ರಕ್ಷಣಾ ಸಚಿವ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ, ಪದ್ಮಭೂಷಣ ಪುರಸ್ಕೃತ ಮನೋಹರ್ ಪರಿಕ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತದ ನಾಯಕರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸರಳ ಜೀವನ, ಪ್ರಾಮಾ
Parikar


ನವದೆಹಲಿ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಾಜಿ ರಕ್ಷಣಾ ಸಚಿವ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ, ಪದ್ಮಭೂಷಣ ಪುರಸ್ಕೃತ ಮನೋಹರ್ ಪರಿಕ್ಕರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ದೇಶಾದ್ಯಂತದ ನಾಯಕರು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸರಳ ಜೀವನ, ಪ್ರಾಮಾಣಿಕತೆ, ಶಿಸ್ತು ಹಾಗೂ ರಾಷ್ಟ್ರ ಸೇವೆಗೆ ಅವರ ಅಚಲ ಸಮರ್ಪಣೆಯನ್ನು ನಾಯಕರು ಸ್ಮರಿಸಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ರಾಷ್ಟ್ರದ ಭದ್ರತೆ ಮತ್ತು ಆಡಳಿತ ವ್ಯವಸ್ಥೆಗೆ ಪರಿಕ್ಕರ್ ನೀಡಿದ ಮಹತ್ವದ ಕೊಡುಗೆಗಳನ್ನು ನೆನಪಿಸಿಕೊಂಡು ಅವರಿಗೆ ಗೌರವ ಸಲ್ಲಿಸಿದರು.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಭಾರತೀಯ ರಾಜಕೀಯದಲ್ಲಿ ಸರಳತೆ, ಪ್ರಾಮಾಣಿಕತೆ ಮತ್ತು ಸಮರ್ಪಣೆಗೆ ಪರಿಕ್ಕರ್ ಜೀವಂತ ಮಾದರಿಯಾಗಿದ್ದರು ಎಂದು ಹೇಳಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಪರಿಕ್ಕರ್ ಅವರ ಸರಳತೆ ನಮಗೆ ಸದಾ ಸ್ಫೂರ್ತಿಯಾಗಿದೆ; ಅವರ ದೃಷ್ಟಿಕೋನ ಇಂದಿಗೂ ಆಡಳಿತಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸರಳತೆ ಮತ್ತು ಸಮರ್ಪಣಾಭಾವದ ಪ್ರತೀಕವಾಗಿದ್ದ ಪರಿಕ್ಕರ್ ಅವರ ಜೀವನ ರಾಷ್ಟ್ರೀಯ ಸೇವೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿರ್ಭೀತ ನಾಯಕತ್ವಕ್ಕೆ ಪರಿಕ್ಕರ್ ಅವರ ಜೀವನವೇ ಸಾಕ್ಷಿಯಾಗಿದೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಣಾಯಕ ತೀರ್ಮಾನಗಳಲ್ಲಿ ಅವರ ದೃಢಸಂಕಲ್ಪ ಸ್ಮರಣೀಯವೆಂದರು.

ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಕೂಡ ಶಿಸ್ತು, ಸರಳತೆ ಮತ್ತು ಸಾರ್ವಜನಿಕ ಸೇವೆಗೆ ಪರಿಕ್ಕರ್ ನೀಡಿದ ಕೊಡುಗೆಗಳನ್ನು ಸ್ಮರಿಸಿ ಗೌರವ ಸಲ್ಲಿಸಿದರು.

ಮನೋಹರ್ ಪರಿಕ್ಕರ್ ನಾಲ್ಕು ಬಾರಿ ಗೋವಾದ ಮುಖ್ಯಮಂತ್ರಿಯಾಗಿ ಹಾಗೂ ದೇಶದ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಐಐಟಿ ಬಾಂಬೆ ಪದವೀಧರರಾದ ಮೊದಲ ಮುಖ್ಯಮಂತ್ರಿ ಎಂಬ ಗೌರವ ಪಡೆದಿದ್ದ ಅವರು, “ಮಿಸ್ಟರ್ ಕ್ಲೀನ್” ಎಂದು ಜನಪ್ರಿಯರಾಗಿದ್ದರು. ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ರಾಷ್ಟ್ರದ ರಕ್ಷಣಾ ನೀತಿಗಳಿಗೆ ಮಹತ್ವದ ಕೊಡುಗೆ ನೀಡಿದ ಪರಿಕ್ಕರ್ ಅವರು 2019ರಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande