ದೇಶದ ಸಂಪತ್ತನ್ನು ಕೋಟ್ಯಾಧಿಪತಿ ಸ್ನೇಹಿತರಿಗೆ ಹಂಚಿದ ಮೋದಿ ಸರ್ಕಾರ : ಖರ್ಗೆ
ನವದೆಹಲಿ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಯನ್ನು ಗಂಭೀರ ಅಸಮಾನತೆಗೆ ತಳ್ಳಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು,
Kharge


ನವದೆಹಲಿ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿಯ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಯನ್ನು ಗಂಭೀರ ಅಸಮಾನತೆಗೆ ತಳ್ಳಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಡವರಿಗೆ ತಲುಪಬೇಕಾದ ದೇಶದ ಸಂಪತ್ತು, ಪ್ರಧಾನಿ ಮೋದಿಯವರ ಕೋಟ್ಯಾಧಿಪತಿ ಸ್ನೇಹಿತರ ಕೈಗೆ ಮಾತ್ರ ಹರಿದು ಹೋಗುತ್ತಿದೆ. ಬಡ ಜನಸಾಮಾನ್ಯರ ಮೇಲೆ ಸರ್ಕಾರದ ದೈನಂದಿನ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದಭಾರತದ ಆರ್ಥಿಕ ಅಸಮಾನತೆಯ ಬಗ್ಗೆ ಇತ್ತೀಚಿನ ಅಂಕಿ–ಅಂಶಗಳನ್ನು ಉಲ್ಲೇಖಿಸಿ, ಶ್ರೀಮಂತ–ಬಡವರ ನಡುವೆ ಅಂತರ ಭಾರೀ ಪ್ರಮಾಣದಲ್ಲಿ ಹೆಚ್ಚಿದೆಯೆಂದು ಹೇಳಿದ್ದು, ಅಸಮಾನತೆಯ ಅಂಕಿ–ಅಂಶಗಳನ್ನು ಹಂಚಿಕೊಂಡಿದ್ದಾರೆ. ದೇಶದ ಶೇ. 10 ರಷ್ಟು ಶ್ರೀಮಂತರು ಮಾತ್ರವೇ ಶೇ. 58 ರಷ್ಟು ರಾಷ್ಟ್ರೀಯ ಸಂಪತ್ತನ್ನು ಹಿಡಿದಿಟ್ಟಿದ್ದಾರೆ. ಶೇ. 50 ರಷ್ಟು ಬಡ ಭಾರತೀಯರು ಕೇವಲ ಶೇ. 15 ರಷ್ಟು ಸಂಪತ್ತನ್ನು ಹೊಂದಿರುವ ಸಂಕಷ್ಟದ ಪರಿಸ್ಥಿತಿ,ದೇಶದ ಅತಿ ಶ್ರೀಮಂತ ಶೇ. 1ರಷ್ಟು ಜನರ ಕೈಯಲ್ಲಿ ಶೇ. 40.1 ರಷ್ಟು ಸಂಪತ್ತು ಇದೆ ಎಂದಿದ್ದಾರೆ.

ಇತ್ತೀಚಿನ ಅಂಕಿ–ಅಂಶಗಳ ಪ್ರಕಾರ, ಜನಸಂಖ್ಯೆಯ 1% ಜನರು ದೇಶದ ಒಟ್ಟು ಸಂಪತ್ತಿನ 22.6% ಕಬಳಿಸಿದ್ದಾರೆ ಇದು 1922ರ ನಂತರದ ಅತ್ಯಧಿಕ ಪ್ರಮಾಣವಾಗಿದೆ. ಮಹಿಳೆಯರ ಕಾರ್ಮಿಕ ಬಲದಲ್ಲಿ ಪಾಲ್ಗೊಳ್ಳುವಿಕೆ ಕೇವಲ 15.7%; ಕಳೆದ 11 ವರ್ಷಗಳಲ್ಲಿ ಯಾವುದೇ ಮಹತ್ವದ ಸುಧಾರಣೆ ಕಂಡಿಲ್ಲ ಎಂದು ಹೇಳಿದ್ದಾರೆ.

ಮೋದಿಯವರು ಭರವಸೆ ನೀಡಿದ್ದ ‘ಅಕ್‌ಚೇ ದಿನ್’ ಎಲ್ಲಿದೆ? ಬಡವರ ಕನಸುಗಳು ಚೂರುಚೂರು ಆಗಿವೆ. ಉದ್ಯೋಗ ಹಾಳಾಗಿದೆ, ಸಂಪತ್ತು ಕೆಲವರ ಕೈಸೇರುತ್ತಿದೆ, ಯುವಕರ ಭವಿಷ್ಯ ಅನಿಶ್ಚಿತವಾಗಿದೆ. ಸಮಾಜದಲ್ಲಿ ಅಸಮಾನತೆ ದಿನೇ ದಿನೇ ಗಾಢವಾಗುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande