ಕೋಲ್ಕತ್ತಾದಲ್ಲಿ ಐಸಿಸ್ ಸಂಪರ್ಕ ಜಾಲದ ಅಡಗುತಾಣಗಳ ಮೇಲೆ ಇಡಿ ದಾಳಿ
ಕೋಲ್ಕತ್ತಾ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಐಸಿಸ್‌ ಗೆ ಸಂಪರ್ಕ ಹೊಂದಿರುವ ಪಡ್ಘಾ ಮಾಡ್ಯೂಲ್‌ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಗುರುವಾರ ಕೋಲ್ಕತ್ತಾ ಸೇರಿದಂತೆ ದೇಶದ ಹಲವೆಡೆ ಬೃಹತ್ ದಾಳಿ ನಡೆಸಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವುದು, ಶಸ್ತ್ರಾಸ್ತ್ರ–ಸ್ಫೋಟಕ ಸಂಗ್ರಹಣೆ ಮತ್ತು ಹಣಕಾಸ
ED raid


ಕೋಲ್ಕತ್ತಾ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಐಸಿಸ್‌ ಗೆ ಸಂಪರ್ಕ ಹೊಂದಿರುವ ಪಡ್ಘಾ ಮಾಡ್ಯೂಲ್‌ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಗುರುವಾರ ಕೋಲ್ಕತ್ತಾ ಸೇರಿದಂತೆ ದೇಶದ ಹಲವೆಡೆ ಬೃಹತ್ ದಾಳಿ ನಡೆಸಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವುದು, ಶಸ್ತ್ರಾಸ್ತ್ರ–ಸ್ಫೋಟಕ ಸಂಗ್ರಹಣೆ ಮತ್ತು ಹಣಕಾಸು ಜಾಲಕ್ಕೆ ಸಂಬಂಧಿಸಿದ ಆರೋಪಗಳ ಪರಿಶೀಲನೆಗಾಗಿ ಈ ದಾಳಿ ನಡೆದಿದೆ.

ಬೆಳಗ್ಗೆಯಿಂದಲೂ ಮಹಾರಾಷ್ಟ್ರದ ಥಾಣೆ-ಬೋರಿವಲಿ ಪ್ರದೇಶ, ದೆಹಲಿ, ಉತ್ತರ ಪ್ರದೇಶದ ಅನೇಕ ನಗರಗಳು, ಮತ್ತು ಕೋಲ್ಕತ್ತಾದ ಮನೆ–ಕಚೇರಿಗಳಲ್ಲಿ ಶೋಧ ನಡೆದಿದೆ. ಮುಂಬೈದಲ್ಲಿ ಮಹಾರಾಷ್ಟ್ರ ಎಟಿಎಸ್‌ ಭದ್ರತೆ ಒದಗಿಸಿದ್ದು, ಕೋಲ್ಕತ್ತಾದಲ್ಲಿ ಕೇಂದ್ರ ಪಡೆಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.

ಈ ದಾಳಿ NIA ಕಳೆದ ವರ್ಷ ದಾಖಲಿಸಿದ ಪ್ರಕರಣದ ಆಧಾರದಲ್ಲಿ ನಡೆದಿದೆ. ಐಸಿಸ್‌ ಸಿದ್ದಾಂತದಿಂದ ಪ್ರಭಾವಿತರಾದ ವ್ಯಕ್ತಿಗಳು ಯುವಕರನ್ನು ನೇಮಕ ಮಾಡಿಕೊಳ್ಳುವುದು, ಅವರಿಗೆ ತರಬೇತಿ ನೀಡುವುದು, ಶಸ್ತ್ರಾಸ್ತ್ರ–ಸ್ಫೋಟಕ ಸಂಗ್ರಹಣೆ ಮತ್ತು ಹಣಕಾಸು ಕಲೆಹಾಕುವ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದು NIA ಆರೋಪಿಸಿತ್ತು. ಒಟ್ಟು 21 ಮಂದಿಯನ್ನು ಈ ಪ್ರಕರಣದ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ತನಿಖೆಯಿಂದ ಆರೋಪಿಗಳು ಥಾಣೆಯ ಪಡ್ಘಾ ಗ್ರಾಮದಲ್ಲಿ “ಅಲ್-ಶಾಮ್” ಹೆಸರಿನಲ್ಲಿ ಕೇಂದ್ರ ಸ್ಥಾಪಿಸಿ, ಯುವಕರನ್ನು ಅಲ್ಲಿ ಸೇರಿಸಿಕೊಳ್ಳಲು ಪ್ರೇರೇಪಿಸುತ್ತಿದ್ದರು ಎಂಬುದು ಬಹಿರಂಗವಾಗಿದೆ. ಜಾಲದ ಪ್ರಮುಖ ವ್ಯಕ್ತಿ ದೆಹಲಿಯಲ್ಲಿ ಈ ವರ್ಷದ ಜೂನ್‌ನಲ್ಲಿ ನಿಧನರಾದ ಸಾಕಿಬ್ ಅಬ್ದುಲ್ ಹಮೀದ್ ನಾಚನ್ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಇನ್ನೊಬ್ಬ ಪ್ರಮುಖ ಆರೋಪಿಯಾಗಿರುವ ಶಹನವಾಜ್ ಆಲಂ ಈಗಾಗಲೇ ಮತ್ತೊಂದು ಪ್ರಕರಣದಲ್ಲಿ ಬಂಧಿತನಾಗಿದ್ದಾನೆ.

ಮಹಾರಾಷ್ಟ್ರ ಎಟಿಎಸ್‌ನ ಮಾಹಿತಿಯ ಪ್ರಕಾರ, ಕೆಲ ಆರೋಪಿಗಳು ಖೇರ್ ಮರದ ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನೂ ತೀವ್ರಗಾಮಿ ಚಟುವಟಿಕೆಗಳಿಗೆ ಬಳಸಿದ್ದಾರೆ ಎಂದು ಶಂಕಿಸಲಾಗಿದೆ.

ಇಡಿ ವಿವಿಧ ಸ್ಥಳಗಳಿಂದ ವಶಪಡಿಸಿಕೊಂಡಿರುವ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರೆದಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande