ದೀಪಾವಳಿ ಹಬ್ಬ ಯುನೆಸ್ಕೋ ಪಟ್ಟಿಗೆ : ಉಪ ರಾಷ್ಟ್ರಪತಿ ರಾಧಾಕೃಷ್ಣನ್ ಹರ್ಷ
ನವದೆಹಲಿ, 11 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೀಪಗಳ ಹಬ್ಬ ದೀಪಾವಳಿಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದನ್ನು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಗುರುವಾರ ಸದನದಲ್ಲಿ ಸಂತೋಷದಿಂದ ಘೋಷಿಸಿದರು. ಡಿಸೆಂಬರ್ 10, 2025ರಂದು ಪ್ರಕಟವಾದ ಈ ಮನ್ನಣೆ ಭಾರತೀಯ
Vice President


ನವದೆಹಲಿ, 11 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೀಪಗಳ ಹಬ್ಬ ದೀಪಾವಳಿಯನ್ನು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಿರುವುದನ್ನು ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಗುರುವಾರ ಸದನದಲ್ಲಿ ಸಂತೋಷದಿಂದ ಘೋಷಿಸಿದರು. ಡಿಸೆಂಬರ್ 10, 2025ರಂದು ಪ್ರಕಟವಾದ ಈ ಮನ್ನಣೆ ಭಾರತೀಯರಿಗೆ ಮತ್ತು ವಿಶ್ವದಾದ್ಯಂತ ವಾಸಿಸುವ ಭಾರತೀಯ ಮೂಲದ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು.

ದೀಪಾವಳಿ ಕೇವಲ ಹಬ್ಬವಲ್ಲದೆ, ಕತ್ತಲೆಯ ಮೇಲೆ ಬೆಳಕು, ಅಜ್ಞಾನದ ಮೇಲೆ ಜ್ಞಾನ, ಹತಾಶೆಯ ಮೇಲೆ ಭರವಸೆ ಮತ್ತು ಅಧರ್ಮದ ಮೇಲೆ ಧರ್ಮದ ಜಯ ಎಂಬ ನಾಗರಿಕತೆಯ ಸಂದೇಶವನ್ನು ಹೊತ್ತಿದೆ ಎಂದು ರಾಧಾಕೃಷ್ಣನ್ ಅಭಿಪ್ರಾಯಪಟ್ಟರು. ಈ ಹಬ್ಬದ ತತ್ತ್ವಶಾಸ್ತ್ರವು ಧರ್ಮ, ಪ್ರದೇಶ ಹಾಗೂ ತಲೆಮಾರಿನ ಬೇಧಗಳನ್ನು ಮೀರಿದ್ದು, ಭಾರತದ ಒಳಗೊಳ್ಳುವಿಕೆ, ಕಾಂತಿ ಮತ್ತು ಪರಿಶ್ರಮದ ಮೂಲ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು.

ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸಲಾದ 16ನೇ ಭಾರತೀಯ ಹಬ್ಬದ ಗೌರವ ದೀಪಾವಳಿಗೆ ಲಭಿಸಿದ್ದು, ಭಾರತದ ಸಂಸ್ಕೃತಿಯ ಜಗತ್ತಿನಲ್ಲಿನ ಸ್ಥಾನ ಮತ್ತೊಮ್ಮೆ ಎತ್ತಿಹಿಡಿದಿದೆ. ಸದನದ ಪರವಾಗಿ, ಈ ಸಾಧನೆಗೆ ಕಾರಣರಾದ ಸಂಶೋಧಕರು, ಸಾಂಸ್ಕೃತಿಕ ಪರಿಣಿತರನ್ನು ಹಾಗೂ ಸಂಸ್ಥೆಗಳನ್ನು ಅವರು ಅಭಿನಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande