ಪಾಟೀಲ ಜನ್ಮ ದಿನ ; ಗಣ್ಯರೊಂದಿಗೆ ಸೇರಿ ಸಸಿ ನೆಡುವ ಕಾರ್ಯಕ್ರಮ
ವಿಜಯಪುರ, 09 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಅವರ ಜನ್ಮದಿನವನ್ನು ಇಂದು ರವಿವಾರ ಗಣ್ಯರೊಂದಿಗೆ ಸೇರಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ, ವಿಜಯಪುರ ಜಿಲ್ಲಾ ಸೈಕ್
ಪಾಟೀಲ


ವಿಜಯಪುರ, 09 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಅವರ ಜನ್ಮದಿನವನ್ನು ಇಂದು ರವಿವಾರ ಗಣ್ಯರೊಂದಿಗೆ ಸೇರಿ ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವೃಕ್ಷಥಾನ್ ಹೆರಿಟೇಜ್ ರನ್ ಸಮಿತಿ, ವಿಜಯಪುರ ಜಿಲ್ಲಾ ಸೈಕ್ಲಿಂಗ್ ಗ್ರುಪ್ ಜಂಟಿಯಾಗಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಬಸನಗೌಡ ಎಂ. ಪಾಟೀಲ, ವೈದ್ಯಕೀಯ ಕಾಲೇಜಿನ ಶರೀರಕ್ರಿಯಾ ಶಾಸ್ತ್ರ ವಿಭಾಗದ ಡಿಸ್ಟಿಂಗ್ವಿಶ್ ಚೇರ್ ಪ್ರೊ. ಕುಸಾಲ ದಾಸ ಮತ್ತೀತರ ಗಣ್ಯರು ಜನ್ಮದಿನದ ಅಂಗವಾಗಿ ಸಸಿ ನೆಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕುಸಾಲ ದಾಸ, ಬಸನಗೌಡ ಎಂ. ಪಾಟೀಲ ಅವರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳಡಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಮತ್ತು ಡೀಮ್ಡ್ ವಿಶ್ವವಿದ್ಯಾಲಯವನ್ನು ಉತ್ತುಂಗಕ್ಕೆ ಒಯ್ಯಲಿದ್ದಾರೆ ಎಂದು ಹೇಳಿದರು.

ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯ ವೀರೇಂದ್ರ ಗುಚ್ಚೆಟ್ಟಿ ಮಾತನಾಡಿ, ಬಸನಗೌಡ ಅವರು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿದ್ದಾರೆ. ಅವರು ಯುವಕರಾಗಿದ್ದು, ಇಂದಿನ ಅಗತ್ಯಕ್ಕಗಳಿಗೆ ಅನುಗುಣವಾಗಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಮುಖಂಡ ಸುರೇಶ ಗೊಣಸಗಿ ಮಾತನಾಡಿ, ಬಸನಗೌಡ ಎಂ. ಪಾಟೀಲ ಅವರು, ತಂದೆಗೆ ತಕ್ಕ ಮಗನಾಗಿದ್ದು, ಸಚಿವ ಎಂ. ಬಿ. ಪಾಟೀಲ ಅವರ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಶ್ರೀ ಸಿದ್ದೇಶ್ವರ ಸ್ವಾಮೀಜಿ, ನಾಡಿನ ಸಕಲ ಶರಣರು, ಪಂಚಪೀಠಾಧೀಶರ ಆಶೀರ್ವಾದ ಅವರ ಮೇಲಿದೆ. ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಡಾ. ಮಹಾಂತೇಶ ಬಿರಾದಾರ, ಪ್ರಾಚಾರ್ಯರಾದ ಡಾ. ಅಶೋಕ ಪಾಟೀಲ, ಡಾ. ರಘುವೀರ ಕುಲಕರ್ಣಿ, ಶೋಲ್ಮನ್ ಚೋಪಡೆ, ವೃಕ್ಷಥಾನ್ ಟೀಮ್, ಸೈಕ್ಲಿಂಗ್ ಗ್ರುಪ್, ಮಾರ್ನಿಂಗ್ ಮಾಕರ್ಸ್ ಟೀಮ್ ಪದಾಧಿಕಾರಿಗಳಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಸೋಮಶೇಖರ ಸ್ವಾಮಿ, ಸೋಮು ಮಠ, ಶಿವರಾಜ ಪಾಟೀಲ, ಶಿವಾನಂದ ಯರನಾಳ, ವಿನಯ ಕಂಚ್ಯಾಣಿ, ಡಾ. ಪ್ರವೀಣ ಚೌರ, ವಿನೋದ ಸಜ್ಜನ, ಗುರುಶಾಂತ ಕಾಪಸೆ, ಅಶ್ಪಾಕ ಮನಗೂಳಿ, ಡಾ. ಗಂಗಾಧರ ಸಂಬಣ್ಣಿ, ಯಲ್ಲಾಲಿಂಗ ಜನವಾಡ, ಸಿದ್ದು ನಾಯ್ಕೋಡಿ, ಸಂದೀಪ ಮಡಗೊಂಡ, ಡಾ. ದಯಾನಂದ ಬಿರಾದಾರ, ಡಾ. ಸಂಜೀವ ಬೆಂಟೂರ, ಡಾ. ಉದಯಕುಮಾರ ನುಚ್ಚಿ, ಡಾ. ಗುಡದಿನ್ನಿ, ಡಾ. ವಿಕಾಸ ದೇಸಾಯಿ, ಡಾ. ಗೆಣ್ಣೂರ, ಮಹೇಶ ವಿ. ಶಟಗಾರ, ಸಂತೋಷ ಮಸಳಿ, ಜಗದೀಶ ಪಾಟೀಲ, ಶ್ರೀಕಾಂತ ಹಡಲಗೇರಿ, ನವೀದ ನಾಗಠಾಣ, ವೀಣಾ ದೇಶಪಾಂಡೆ, ಶ್ರೀಕಾಂತ ಅಂಗಡಿ, ಉಮೇಶ ಕೊಪ್ಪದ, ಅಜಯ ವಾಲಿ, ಆನಂದ ಪಾಟೀಲ, ರವಿ ಅಲ್ಲಾಪುರ, ರವಿ ಜನಗೊಂಡ, ಪ್ರದೀಪ ಮಲಜಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande