
ವಿಜಯಪುರ, 08 ನವೆಂಬರ್ (ಹಿ.ಸ.) :
ಆ್ಯಂಕರ್: ಮುಖ್ಯಮಂತ್ರಿ ಸ್ಪಷ್ಟವಾಗಿ 3,300 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದಾರೆ. ಆದ್ರೇ, ನಮ್ಮ ಜಿಲ್ಲೆಯಲ್ಲಿ ಸ್ವಲ್ಪ ಗೊಂದಲ ಇದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹೋರಾಟ ವಿಜಯಪುರದಲ್ಲಿ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ನಮ್ಮಲ್ಲಿ ಇಳುವರಿ ಸ್ವಲ್ಪ ಕಡಿಮೆ ಬರುತ್ತದೆ. ಅದಕ್ಕೆ ಸ್ವಲ್ಪ ಗೊಂದಲ ಇದೆ. ಸಕ್ಕರೆ ಸಚವ ಶಿವಾನಂದ ಪಾಟೀಲ್ ಜೊತೆ ಇದರ ಬಗ್ಗೆ ಚರ್ಚೆ ಮಾಡ್ತೆನೆ. ನಂತರ ರೈತರಿಗೆ ಸ್ಪಷ್ಟನೆ ನೀಡ್ತೆನೆ ಎಂದರು.
ಈ ವಿಷಯದಲ್ಲಿ ರಾಜ್ಯ ಸರ್ಕಾರದ ಪಾತ್ರ ಬಹಳ ಇಲ್ಲ. ಇದನ್ನು ಮೊದಲೆ ಹೇಳಿದ್ರೇ ತಪ್ಪಾಗುತ್ತಿತ್ತು. ರೈತರ ಹೋರಾಟದಲ್ಲಿ ಬಿಜೆಪಿಯರು ಭಾಗಿಯಾಗಿ ಅಲ್ಲಿ ಮಲಗಿ ರಾಜಕೀಯ ಮಾಡಿದ್ರೂ ಎಂದು ವಾಗ್ದಾಳಿ ನಡೆಸಿದರು.
ಎಫ್ ಆರ್ ಪಿ, ಎಂಆರ್ ಪಿ ನಿರ್ಧರಿಸೋದು ಕೇಂದ್ರ ಸರ್ಕಾರ ಹಾಗೂ ಕೇಂದ್ರದವರು ಇಥೆನಾಲ್ ಕಡಿಮೆ ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಎಲ್ಲ ನ್ಯೂನತೆಗಳು ಇರೋದು ಕೇಂದ್ರ ಸರಕಾರದ್ದು, ಆದ್ರೆ ರಾಜಕೀಯ ಮಾಡಿ ರೈತರನ್ನು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂಡಿಸಿದರು. ಇನ್ನು ರೈತರು ಜಾಣರಿದ್ದಾರೆ. ಈಗ ಅವರಿಗೆ ಗೊತ್ತಾಗಿದೆ. ವಿಜಯೇಂದ್ರ ಅವರೆ ನೀವು ಪ್ರಧಾನಿಗಳ ಸಮಯ ತೆಗೆದುಕೊಂಡು ಹೇಳಿ, ನಾವು ನಿಯೋಗ ಕೊಂಡೋಯ್ಯುತ್ತೆವೆ ಅಂತಾ ಮುಖ್ಯಮಂತ್ರಿ ಹೇಳಿದ್ದಾರೆ. ವಿಜಯೇಂದ್ರಯವರೇ ಪ್ರಧಾನಿಗಳ ಸಮಯ ಪಡೆದುಕೊಳ್ಳುವಂತೆ ಸಚಿವ ಪಾಟೀಲ ಸವಾಲ್ ಹಾಕಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande