ಪವಾಡ ಸಧೃಶವಾದ ಸುಕ್ಷೇತ್ರ ಕರೇಗುಡ್ಡ- ಎನ್ಎಸ್ ಬೋಸರಾಜು
ಮಾನ್ವಿ,, 08 ನವೆಂಬರ್ (ಹಿ.ಸ.) : ಆ್ಯಂಕರ್ : ಐತಿಹಾಸಿಕ ಪವಾಡ ಸದೃಶ ಪ್ರತೀಕದ ಮಹಾ ಸುಕ್ಷೇತ್ರವಾದ ಕರೆಗುಡ್ಡ ಶ್ರೀ ಮಾಹಾಂತೇಶ್ವರ ಸಂಸ್ಥಾನ ಮಠದ ಭಕ್ತರ ಆಶಯದಂತೆ ಕರೆಗುಡ್ಡ ಶ್ರೀ ಮಠ ಹಾಗೂ ಕೊಟ್ನೆಕಲ್ ಶಾಖಾ ಮಠದ ಅಭಿವೃದ್ದಿಗಾಗಿ ಒಟ್ಟು 50 ಲಕ್ಷ ರೂಗಳ ಅನುದಾನ ನೀಡಿದ್ದೇವೆ ಎಂದು ಸಣ್ಣ ನೀರಾವರ
ಪವಾಡ ಸಧೃಶವಾದ ಸುಕ್ಷೇತ್ರ ಕರೇಗುಡ್ಡ- ಎನ್ಎಸ್ ಬೋಸರಾಜು


ಪವಾಡ ಸಧೃಶವಾದ ಸುಕ್ಷೇತ್ರ ಕರೇಗುಡ್ಡ- ಎನ್ಎಸ್ ಬೋಸರಾಜು


ಮಾನ್ವಿ,, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಐತಿಹಾಸಿಕ ಪವಾಡ ಸದೃಶ ಪ್ರತೀಕದ ಮಹಾ ಸುಕ್ಷೇತ್ರವಾದ ಕರೆಗುಡ್ಡ ಶ್ರೀ ಮಾಹಾಂತೇಶ್ವರ ಸಂಸ್ಥಾನ ಮಠದ ಭಕ್ತರ ಆಶಯದಂತೆ ಕರೆಗುಡ್ಡ ಶ್ರೀ ಮಠ ಹಾಗೂ ಕೊಟ್ನೆಕಲ್ ಶಾಖಾ ಮಠದ ಅಭಿವೃದ್ದಿಗಾಗಿ ಒಟ್ಟು 50 ಲಕ್ಷ ರೂಗಳ ಅನುದಾನ ನೀಡಿದ್ದೇವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.

ಮಾನ್ವಿ ತಾಲೂಕಿನ ಸುಕ್ಷೇತ್ರ ಕರೆಗುಡ್ಡ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಷ. ಬ್ರ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರ ರಜತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಮಹಾತ್ಮರ ಜೀವನ ದರ್ಶನ ಪ್ರವಚನ, 5001 ಸುಮಂಗಲಿಯರಿಗೆ ಉಡಿ ತುಂಬುವ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎನ್ಎಸ್ ಬೋಸರಾಜು ಶಾಸಕ‌ ಹಂಪಯ್ಯ ನಾಯಕ ಅವರು ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಮಾತನಾಡಿದರು.

ಅನೇಕ ವರ್ಷಗಳಿಂದ ಶ್ರೀ ಮಠಕ್ಕೆ ನಾನು ಭಕ್ತನಾಗಿದ್ದೇನೆ. ಅಲ್ಲಿಂದ ಇಲ್ಲಿಯವರೆಗೂ ಮಠದ ಶ್ರೀಗಳು ನಮಗೆ ಏನನ್ನು ಕೇಳಿಲ್ಲ. ಶ್ರೀಗಳಿಗೆ ಯಾವುದೇ ನಿರೀಕ್ಷೆಗಳಿಲ್ಲ, ಬಹಾಳ ಸರಳ ಸಜ್ಜನಿಕೆಯಿಂದ ಶ್ರೀಗಳು ಭಕ್ತರಿಗೆ ಶಕ್ತಿಯಾಗಿದ್ದಾರೆ. ಮಠಗಳು ಯಾವುದೇ ಬೇದ ಭಾವಗಳಿಲ್ಲದೆ ಸಮಾಜದಲ್ಲಿ ಶಾಂತಿ ಸೌಹಾರ್ಧತೆ ಕಾಪಾಡುತ್ತಿವೆ. ಶ್ರೀಮಠದ ನಿರಂತರ ಅನ್ನದಾಸೋಹ, ಪುರಾಣ, ಪ್ರವಚನ, ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ನಂತರ ಶಾಸಕ ಹಂಪಯ್ಯ ನಾಯಕ ಮಾತನಾಡಿ, ನಾನು ಮೊದಲಿಂದಲು ಶ್ರೀ ಮಠದ ಪವಾಡ ಬಗ್ಗೆ ಜನರು ಹೇಳಿದಾಗ ನಂಬಿರಲಿಲ್ಲ. ಆದರೆ ನಾನು ಖುದ್ದಾಗಿ ಶ್ರೀಮಠದ ಪವಾಡವನ್ನು‌ ಕಂಡಾಗ ನನಗೆ ಆಶ್ಚರ್ಯವಾಯಿತು. ಪವಾಡ, ಶ್ರೀಗಳ ಆಶೀರ್ವಾದಕ್ಕಾಗಿ ಸಾವಿರಾರು ಜನ ಭಕ್ತರು ಶ್ರೀ ಮಠಕ್ಕೆ ಬರುತ್ತಿದ್ದಾರೆ. ಹಾಗಾಗಿ ಶ್ರೀಮಠದ ಅಭಿವೃದ್ಧಿಗೆ ಅನುದಾನ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ‌ ಕೇಂದ್ರ ಸಚಿವರಾದ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಸೇರಿದಂತೆ ಅನೇಕರು ಕಾರ್ಯಕ್ರಮವನ್ನು ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಒಳಬಳ್ಳಾರಿಯ ಸುವರ್ಣಗಿರಿ ವೀರಕ್ತಮಠದ ಪರಮಪೂಜ್ಯ ಶ್ರೀ ಮ.ನಿ.ಪ್ರ.ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಮಠದ ಷ. ಬ್ರ. ಮಹಾಂತಲಿಂಗ ಶಿವಾಚಾರ್ಯರು,ರೌಡಕುಂದ ಸಂಸ್ಥಾನದ ಷ. ಬ್ರ, ಶಿವಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಸಿರುಗುಪ್ಪದ ಶ್ರೀ ಬಸವಭೂಷಣ ಮಹಾಸ್ವಾಮಿಗಳು, ಕರೆಗುಡ್ಡ ಮಠದ ಉತ್ತರಧಿಕಾರಿ ಪರಮಪೂಜ್ಯ ಸಂಗನಬಸವ ಸ್ವಾಮಿಗಳು, ಕಾರಲಕುಂಟಿ ಅಮರೇಗೌಡ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ, ಶರಣಯ್ಯ ನಾಯಕ್, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ, ಅಮರೇಶ್ ಸಾಲಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande