

ಬಳ್ಳಾರಿ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಕನಕದಾಸರು ಕೇವಲ ಭಕ್ತರಾಗಿರದೇ ದಾರ್ಶನಿಕರಾಗಿ ಸಾಹಿತ್ಯವನ್ನು ರಚಿಸಿ ದಾಸಶ್ರೇಷ್ಠರಾಗಿ ಅಜರಾಮರಾಗಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಅವ್ವಾರು ಮಂಜುನಾಥ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಕನಕದಾಸ ಜಯಂತಿಯನ್ನು ಶನಿವಾರ ಆಚರಿಸಿ ಮಾತನಾಡಿದ ಅವರು, ಸಂತ ಕನಕದಾಸರ ಜಯಂತಿಯನ್ನು ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ಕನಕದಾಸರ ಸಂದೇಶಗಳನ್ನು ನಾವೆಲ್ಲರೂ ದೈನಂದಿನ ಚಟುವಟಿಕೆಗಳಲ್ಲಿ, ನಡೆ - ನುಡಿಗಳಲ್ಲಿ ಪಾಲಿಸಬೇಕು ಎಂದರು.
ಕನಕದಾಸರು ಎಲ್ಲಾ ಜನರಿಗೆ ಅರ್ಥವಾಗುವ ರೀತಿಯಲ್ಲಿ ಆಡುಭಾಷೆಯಲ್ಲಿ ಸರಳವಾಗಿ ಸಾಹಿತ್ಯವನ್ನು ರಚಿಸಿ ಅವುಗಳನ್ನು ಜನರಿಗೆ ತಲುಪಿಸಿ ಆ ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಬಯಸಿದ್ದರು. ಕನಕದಾಸರು ವಿಶ್ವಮಾನವರು ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು, ಹಿರಿಯ ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ, ಉಪಾಧ್ಯಕ್ಷರಾದ ಸೊಂತ ಗಿರಿಧರ್ ಪಿ. ಪಾಲಣ್ಣ, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಖಜಾಂಚಿಗಳಾದ ನಾಗಳ್ಳಿ ರಮೇಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿ.ಎಸ್. ಸತ್ಯನಾರಾಯಣ, ಟಿ. ಶ್ರೀನಿವಾಸರಾವ್, ನೇಕಾರ ನಾಗರಾಜ್, ಪಿ. ಶೇಷರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್