ನ.26, 27 ರಂದು ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ
ಬಳ್ಳಾರಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರಾಜ್ಯದ ಮಕ್ಕಳ, ಯುವಕರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪೆÇ್ರೀತ್ಸಾಹ ನೀಡುವ ಹಾಗೂ ಅವರಲ್ಲಿನ ಕಲಾ ಪ್ರತಿಭೆಯನ್ನು ವೃದ್ಧಿಗೊಳಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್
ನ.26, 27 ರಂದು ಜಿಲ್ಲಾಮಟ್ಟದ ಕಲಾ ಪ್ರತಿಭೋತ್ಸವ


ಬಳ್ಳಾರಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ರಾಜ್ಯದ ಮಕ್ಕಳ, ಯುವಕರ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪೆÇ್ರೀತ್ಸಾಹ ನೀಡುವ ಹಾಗೂ ಅವರಲ್ಲಿನ ಕಲಾ ಪ್ರತಿಭೆಯನ್ನು ವೃದ್ಧಿಗೊಳಿಸುವ ಉದ್ದೇಶದಿಂದ 2025-26ನೇ ಸಾಲಿನಲ್ಲಿ ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಹಾಗೂ ಸಮೂಹ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಿದೆ.

ಜಿಲ್ಲಾ ಮಟ್ಟದ ಪ್ರತಿ ವಿಭಾಗಗಳಲ್ಲಿ ಪ್ರತಿ ಪ್ರಕಾರಗಳಲ್ಲಿ ನಡೆಸುವ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಿದವರನ್ನು ವಲಯ ಮಟ್ಟಕ್ಕೆ ಕಳುಹಿಸಲಾಗುವುದು. ವಲಯ ಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಿಸಿದವರನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು.

ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ (ಪ್ರತಿ ವಿಭಾಗಗಳ) ಪಡೆದವರಿಗೆ ಕ್ರಮವಾಗಿ ರೂ.15,000, ರೂ.10,000, ರೂ.7500 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಸಮೂಹ ಸ್ಪರ್ಧೆಗಳಲ್ಲಿ (ನಾಟಕ) ರಾಜ್ಯ ಮಟ್ಟದ ಅಂತಿಮ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಿಗೆ ಕ್ರಮವಾಗಿ ರೂ.50,000, ರೂ.40,000, ರೂ.30,000 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.

ಸ್ಪರ್ಧೆಗಳು:

ನ.26 ರಂದು ಬೆಳಿಗ್ಗೆ 10 ಗಂಟೆಗೆ ಬಾಲ ಮತ್ತು ಕಿಶೋರ ಪ್ರತಿಭೆಗಳಿಗೆ ವಿವಿಧ ಸ್ಥಳಗಳಲ್ಲಿ ಸ್ಪರ್ಧೆ ನಡೆಯಲಿದೆ.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶಾಸ್ತ್ರೀಯ ನೃತ್ಯ(10 ನಿಮಿಷ), ಸುಗಮ ಸಂಗೀತ (7 ನಿಮಿಷ), ಜಾನಪದ ಗೀತೆಗಳು(7 ನಿಮಿಷ).

ನಗರದ ಸಾಂಸ್ಕøತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿತ)-120 ನಿಮಿಷ.

ನಗರದ ಸಾಂಸ್ಕøತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ವಾದ್ಯ(7 ನಿಮಿಷ), ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ(7 ನಿಮಿಷ) ಸ್ಪರ್ಧೆಗಳು ನಡೆಯಲಿವೆ.

ನ.27 ರಂದು ಬೆಳಿಗ್ಗೆ 10 ಗಂಟೆಗೆ ಯುವಪ್ರತಿಭೆ ಮತ್ತು ಸಮೂಹ ಸ್ಪರ್ಧೆಗಳಿಗೆ ವಿವಿಧ ಸ್ಥಳಗಳಲ್ಲಿ ಸ್ಪರ್ಧೆ ನಡೆಯಲಿದೆ.

ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶಾಸ್ತ್ರೀಯ ನೃತ್ಯ(10 ನಿಮಿಷ), ಸುಗಮ ಸಂಗೀತ (7 ನಿಮಿಷ), ನಾಟಕ(45 ನಿಮಿಷ).

ನಗರದ ಸಾಂಸ್ಕøತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮಂದಿರದಲ್ಲಿ ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿತ)-120 ನಿಮಿಷ.

ನಗರದ ಸಾಂಸ್ಕøತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ವಾದ್ಯ(7 ನಿಮಿಷ), ಹಿಂದೂಸ್ಥಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ(7 ನಿಮಿಷ), ನನ್ನ ಮೆಚ್ಚಿನ ಸಾಹಿತಿ(ಆಶು ಭಾಷಣ)-7 ನಿಮಿಷ ಸ್ಪರ್ಧೆಗಳು ನಡೆಯಲಿವೆ.

ಮಾರ್ಗಸೂಚಿ:

ಬಾಲಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಗಳುಗಳಿಗೆ ಕನಿಷ್ಠ 8 ವರ್ಷ ತುಂಬಿರಬೇಕು. 14 ವರ್ಷಕ್ಕಿಂತ ಕಡಿಮೆ ಇರಬೇಕು. ಕಿಶೋರಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಗಳುಗಳಿಗೆ ಕನಿಷ್ಠ 14 ವರ್ಷ ತುಂಬಿರಬೇಕು ಹಾಗೂ 18 ವರ್ಷಕ್ಕಿಂತ ಕಡಿಮೆ ಇರಬೇಕು.

ಯುವಪ್ರತಿಭೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಗಳುಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ 30 ವರ್ಷಕ್ಕಿಂತ ಕಡಿಮೆ ಇರಬೇಕು. ಸಮೂಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಇರಬೇಕು ಮತ್ತು ಗರಿಷ್ಠ 15 ಇರಬೇಕು. ತಂಡದ ಎಲ್ಲಾ ಕಲಾವಿದರು ವಯಸ್ಸಿನ ದಾಖಲೆ ಸಲ್ಲಿಸಬೇಕು ನಾಟಕವು ಕನಿಷ್ಠ 30 ನಿಮಿಷದಿಂದ ಗರಿಷ್ಠ 45 ನಿಮಿಷಗಳವರೆಗೆ ಇರಬೇಕು.

ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ/ಕಾಲೇಜಿನಿಂದ ಪಡೆದ ಪ್ರಮಾಣ ಪತ್ರಗಳನ್ನು ನೀಡಬೇಕು. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡದೇ ಇರುವವರು ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಪಾಲಿಕೆ ಕಚೇರಿಯರಿಂದ ದೃಢೀಕರಣ ಪತ್ರ ನೀಡಬೇಕು. ಒಬ್ಬ ಸ್ಪರ್ಧಿ ಒಂದಕ್ಕಿಂತ ಹೆಚ್ಚು ಪ್ರಕಾರಗಳ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.

ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಡ್ರಾಯಿಂಗ್ ಹಾಳೆ ಮಾತ್ರ ನೀಡಲಾಗುವುದು. ಉಳಿದ ಪರಿಕರಗಳನ್ನು ಅಭ್ಯರ್ಥಿಗಳೇ ತರಬೇಕು. ತೀರ್ಪುಗಾರರ ಆಯ್ಕೆಯೇ ಅಂತಿಮವಾಗಿರುತ್ತದೆ. ಈ ಹಿಂದೆ ರಾಜ್ಯ ಮಟ್ಟದಲ್ಲಿ ಬಾಲಪ್ರತಿಭೆ, ಕಿಶೋರಪ್ರತಿಭೆ, ಯುವಪ್ರತಿಭೆ/ ನಾಟಕ ಸಮೂಹ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಈ ಮೇಲಿನ ವಿವಿಧ ವಿಭಾಗಗಳ, ಪ್ರಕಾರಗಳ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಭಾಗವಹಿಸಬೇಕು. ಸ್ಪರ್ಧಾಳುಗಳಿಗೆ ಲಘು ಉಪಹಾರ ವ್ಯವಸ್ಥೆ ಇದ್ದು, ಅವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ರಾಜ್ಯ ಮಟ್ಟದ/ವಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹರಾದವರಿಗೆ ವಾಸ್ತವ ಪ್ರಯಾಣ ವೆಚ್ಚ ಹಾಗೂ ವಸತಿ ಊಟದ ವ್ಯವಸ್ಥೆಯನ್ನು ಮಾಡಲಾಗುವುದು.

ಚಿತ್ರಕಲಾ ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಹಾಳೆಗಳನ್ನು ಮಾತ್ರ ನೀಡಲಾಗುವುದು, ಕುಂಚ, ಬ್ರಷ್ ಮತ್ತು ಬಣ್ಣಗಳನ್ನು ಅಭ್ಯರ್ಥಿಗಳೇ ತರಬೇಕು. ಸ್ಪರ್ಧಾಳುಗಳಿಗೆ ಬೇಕಾಗುವ ವಾದ್ಯ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು. ಪಕ್ಕವಾದ್ಯ ಇಲ್ಲದೆಯೂ ಭಾಗವಹಿಸಬಹುದು.

ಈ ಮೇಲ್ಕಂಡ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಛಿಸುವವರು ಸಂಪೂರ್ಣ ವಿವರಗಳೊಂದಿಗೆ ಹಾಗೂ ವಯಸ್ಸಿನ ದಾಖಲೆಗಳು ಹಾಗೂ ಭಾಗವಹಿಸುವ ಪ್ರಕಾರಗಳ ಬಗ್ಗೆ ಸ್ಪಷ್ಟವಾಗಿ ನಮೂದಿಸಿದ ಅರ್ಜಿಗಳನ್ನು ನವೆಂಬರ್ 20 ರೊಳಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾಂಸ್ಕøತಿಕ ಸಮುಚ್ಚಯ, ಡಾ.ರಾಜ್‍ಕುಮಾರ್ ರಸ್ತೆ, ಬಳ್ಳಾರಿ ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂ.08392-275182 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande