
ವಿಜಯಪುರ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಮೋಹನ ತರಂಗಿಣಿ, ನಳಚರಿತೆ, ರಾಮಧಾನ್ಯ ಚರಿತೆ, ಹರಿಭಕ್ತಿ ಸಾರ, ಸೇರಿದಂತೆ 316 ಕೀರ್ತನೆಗಳು ನೀಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ ಸಂತ ಕನಕದಾಸರ ಕೀರ್ತನೆಗಳು ಜನಮಾನಸದಲ್ಲಿ ಜನಜನಿತವಾಗಿವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಖಾತೆ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕಂದಗ¯ತ್ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಸಂತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರ ಚಿಂತನೆಗಳು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ.ಸಮಾಜದಲ್ಲಿ ಮೌಢ್ಯತೆ ತುಂಬಿದ ಸಂದರ್ಭದಲ್ಲಿ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ದಾಸಸಾಹಿತ್ಯ, ಪದಗಳ ಮೂಲಕ ಸಮಾಜದ ಓರೆ-ಕೊರೆಗಳನ್ನು ತಿದ್ದಿ, ಅನಿಷ್ಠ ಪದ್ಧತಿಗಳು, ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದವರಾಗಿದ್ದು, ಇಂತಹ ಶ್ರೇಷ್ಠರ ತತ್ವಾದರ್ಶನಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು, ಜಾತಿ ವ್ಯವಸ್ಥೆ, ಅಸಮಾನತೆ, ಸಮಾಜದಲ್ಲಿನ ಮೌಢ್ಯತೆ, ಅಂಧಕಾರ, ಅನಿಷ್ಠ ಪದ್ಧತಿ, ಮೂಢನಂಬಿಕೆಗಳನ್ನು ತೊಡೆದು ಹಾಕಲು ವಚನಗಳ ಮೂಲಕ ಶ್ರಮಿಸಿದರು. ಅದೇ ಮಾರ್ಗದಲ್ಲಿ ಸಂತ ಕನಕದಾಸರು ಕೂಡ ಸಾಮಾಜಿಕ ಸುಧಾರಣೆಯ ಕೈಂಕರ್ಯದಲ್ಲಿ ಮುನ್ನಡೆದರು.
ಕನಕದಾಸರು ರಚಿಸಿದ ಕೀರ್ತನೆಗಳಲ್ಲೊಂದಾದ ಅತ್ಯಂತ ಮುಖ್ಯವಾದ ಕುಲ ಕುಲವೆಂದು ಹೊಡೆದಾಡದಿರಿ... ಎಂಬ ಕೀರ್ತನೆಯ ಸಾಲುಗಳನ್ನು ಸಚಿವರು ಪ್ರಸ್ತಾಪಿಸಿದರು.
ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಕಾಗಿನೆಲೆಯಾದಿ ಕೇಶವ ಇವರ ಕೀರ್ತನೆಗಳ ಅಂಕಿತನಾಮವಾಗಿದೆ. ಕನಕದಾಸರು ವಿವಿಧ ಪ್ರಕಾರದ ಕೀರ್ತನೆಗಳು, ಸುಳಾದಿ, ಉಗಾಭೋಗಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಲ್ಲದೇ, ಸಂಗೀತ ಪ್ರಪಂಚಕ್ಕೆ ತನ್ನದೇಯಾದ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
ಬಿಎಲ್‍ಡಿಇ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ದಾಸ ಸಾಹಿತ್ಯದ 65 ಸಂಪುಟ ಹೊರತರಲಾಗುತ್ತಿದ್ದು, ಈಗಾಗಲೇ 45 ಸಂಪುಟಗಳ ಕಾರ್ಯ ಪೂರ್ಣಗೊಂಡಿದೆ. ಈ ಪೈಕಿ 4 ಸಂಪುಟಗಳು ಕನಕದಾಸರ ಕೀರ್ತನೆಗೊಳಗೊಂಡಿವೆ. ಪ್ರಚಲಿತವಲ್ಲದ, ಎಲ್ಲೂ ಪ್ರಕಟವಾಗದೇ ಇರುವ 150 ಕ್ಕೂ ಹೆಚ್ಚು ಕನಕದಾಸರ ಕೀರ್ತನೆಗಳನ್ನು ಸಂಶೋಧಿಸಿ ಪ್ರಕಟಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ನೀರಾವರಿ, ಔದ್ಯೋಗಿಕರಣ, ಉದ್ಯೋಗ, ಕೋಟಿ ವೃಕ್ಷ ಅಭಿಯಾನದ ಮೂಲಕ ಹಸರೀಕರಣ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಕನಕದಾಸರ ಜಯಂತಿ ಶುಭ ದಿನದಂದು ಕ್ಷೀರಕ್ರಾಂತಿ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಎಲ್ಲ ವರ್ಗದ ಜನರ ಅಭಿವೃದ್ದಿಗಾಗಿ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಠಾನಗೊಳಿಸಿ ಬಡವರ ಬಾಳಿನ ಬಾಳಿನಲ್ಲಿ ಸಮೃದ್ಧಿಯನ್ನು ತಂದಿದೆÉ. 5 ಗ್ಯಾರಂಟಿಗಳ ಮೂಲಕ ಎಲ್ಲ ವರ್ಗದ ಜನರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಸ್ತ್ರೀ ಸ್ವಾವಲಂಬನೆಯ ದಿಟ್ಟ ಹೆಜ್ಜೆಯನ್ನಿಡಲಾಗಿದೆ. ಉಚಿತ ಪ್ರಯಾಣದಿಂದ ಬಹಳಷ್ಟು ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಆಸರೆ ದೊರಕಿದೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂ. ಬ್ಯಾಂಕ್ ಖಾತೆಗೆ ಒದಗಿಸುವ ಮೂಲಕ ಜನರ ಜೀವನಕ್ಕೆ ಅನುಕೂಲ ಕಲ್ಪಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆಯಿಂದ ಹಲವರ ಬದುಕಿನಲ್ಲಿ ಆಶಾಕಿರಣ ಮೂಡಿದ್ದು, ಎಲ್ಲ ವರ್ಗದ ಜನರ ಆರ್ಥಿಕ ಸ್ವಾವಲಂಬನೆ ತಂದುಕೊಡುವಲ್ಲಿ ನಮ್ಮ ಸರ್ಕಾರದ ಯೋಜನೆಗಳು ಜನಪರ ಯೋಜನೆಗಳಾಗಿವೆ.
ಅದರಂತೆ ಬಸವಾದಿ ಶರಣರ ಆಶಯದಂತೆ ನಡೆಯುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದು, ನಾಡಿನ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಮಾತನಾಡಿ, ಭಕ್ತಿಪಂಥದ ದಾಸವರೇಣ್ಯರಲ್ಲಿ ಭಕ್ತ ಕನಕದಾಸರು ಹೆಸರು ಅಜರಾಮರ ಅವರಂದ ರಚಿತ ಸಾಹಿತ್ಯ ಜನ ಸರಳವಾಗಿ ಅಥೈಸಿಕೊಳ್ಳಬಹುದಾಗಿದೆ. ಅವರ ಚಿಂತನೆಗಳು ಸಂದೇಶಗಳು ಸುಂದರ ಬದುಕಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ದಾರ್ಶನಿಕರು ನೀಡಿರುವ ಸಂದೇಶ ಹಾಗೂ ಚಿಂತನೆಗಳ ಸಾರ ಅರಿತು ನಡೆಯೋಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಅವರು ದಾಸ ಸಾಹಿತ್ಯದ ಮೂಲಕ ಜೀವನ ಫಾಟ ಸಾರಿದವರು ಕನಕದಾಸರು,ಅವರು ಮಾತನಾಡಿ,ಕನಕದಾಸರು ಕನ್ನಡ ಸಾಹಿತ್ಯತ ಲೋಕದ ಅಶ್ವಿನಿ ದೇವತೆ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದಾರೆ. ಗಣನೀಯ ಕೊಡುಗೆ ನೀಡಿದ್ದಾರೆ.ಸಂಗೀತಕ್ಕೂ ಕೊಡುಗೆ ನೀಡಿದ್ದಾರೆ. ಕೀರ್ತನೆಕಾರರಾಗಿ ಸಂತರಾಗಿ ದಾರ್ಶನಿಕರಾಗಿ ಕನ್ನಡಕ್ಕೆ ಅವರ ಕೊಡುಗೆ ಅಪಾರ ನೀಡಿದ್ದಾರೆ. ರಾಮಧಾನ್ಯ ಚರಿತೆ ಸಮಾನತೆಯ ಸಂಕೇತವಾಗಿ ಧ್ವನಿಸುತ್ತವೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಸಿದ್ದಪ್ಪ ಧನಗೊಂಡ ಅವರು ಮಾತನಾಡಿ, ನಮ್ಮ ದೇಶದಲ್ಲಿ ಸಾಧು ಸತ್ಪುರುಷರು ತಮ್ಮ ಅಮೂಲ್ಯ ಚಿಂತನೆಗಳನ್ನು ಈ ದೇಶಕ್ಕೆ ನೀಡಿ ಬೆಳಗಿದ್ದಾರೆ. ಅವರ ಚಿಂತನಗೆಳು ನಮಗೆ ಮಾರ್ಗದರ್ಶನ ನಿಡುತ್ತವೆ. ಕನಕದಾಸರ ರಚನೆಯ ಮೋಹನ ತರಂಗಿಣಿ, ನಳಚರಿತ್ರೆ ಸೇರಿದಂತೆ ಅವರ ಸಾಹಿತ್ಯದ ಕುರಿತು ಅವಲೋಕಿಸಿದ ಅವರು, ಅವರ ಕೀರ್ತನೆಗಳಲ್ಲಿ ಬರುವ ಒಳರ್ರ್ಥವನ್ನು ಅರಿತುಕೊಳ್ಳಬೇಕು. ಕನಕದಾಸರು ತಮ್ಮ ಅಮುಳ್ಯ ಸಾಹಿತ್ಯದ ಕೀರ್ತನಗೆಳ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಹಾಗೂ ಜನರಲ್ಲಿ ವೈಚಾರಿಕ ಮನೋಭಾವ ಬೆಳೆಸುವಲ್ಲಿ ಅನನ್ಯ ಕೊಡುಗೆಯಾಗಿವೆ ಎಂದು ಅವರು ಹೇಳಿದರು.
ಇದಕ್ಕೂ ಮೊದಲು ನಗರದ ಕನಕದಾಸ ವೃತ್ತದಲ್ಲಿ ಕನಕದಾಸ ಪ್ರತಿಮೆಗೆ ಸಚಿವರು ಪುಷ್ಪಾರ್ಚನೆ ಸಲ್ಲಿಸಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೋಹನ್ ಕಟ್ಟಿಮನಿ ನಿರೂಪಿಸಿ ವಂದಿಸಿದರು.
ಮಾಳವಿಕಾ ಜೋಶಿ ಹಾಗೂ ತಂಡದವರು ಗೀತಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ ಎಂ.ಎಸ್ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನ್ನಾನ್ ಮುಶ್ರೀಪ್, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಸುಜಾತ ಕಳ್ಳಿಮನಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಪಾಲಿಕೆಯ ಪಾಲಿಕೆಯ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಮಾಜದ ಮುಖಡರಾದ ಮಲ್ಲಣ್ಣ ಶಿರಸ್ಯಾಡ, ಕೆಕೆಆರ್‍ಟಿಸಿಯ ವಿಭಾಗೀಯ ನಿಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಪಾಲಿಕೆ ಉಪಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೇರಿದಂತೆ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande