ಸಿಟಿ ಫಾರ್ ಯುತ್, ಯುತ್ ಫಾರ್ ಸಿಟಿ ಅಭಿಯಾನದಡಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ : ಜುಬಿನ್ ಮೊಹಪಾತ್ರ
ರಾಯಚೂರು, 08 ನವೆಂಬರ್ (ಹಿ.ಸ.) : ಆ್ಯಂಕರ್ : ಸಿಟಿ ಫಾರ್ ಯುತ್, ಯುತ್ ಫಾರ್ ಸಿಟಿ ಅಭಿಯಾನದಡಿ ರಾಯಚೂರು ಮಹಾನಗರ ಪಾಲಿಕೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ
ಸಿಟಿ ಫಾರ್ ಯುತ್, ಯುತ್ ಫಾರ್ ಸಿಟಿ ಅಭಿಯಾನದಡಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ : ಜುಬಿನ್ ಮೊಹಪಾತ್ರ


ರಾಯಚೂರು, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಸಿಟಿ ಫಾರ್ ಯುತ್, ಯುತ್ ಫಾರ್ ಸಿಟಿ ಅಭಿಯಾನದಡಿ ರಾಯಚೂರು ಮಹಾನಗರ ಪಾಲಿಕೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯ ಭಾಗಿಯಾಗಬೇಕು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ವಿದ್ಯಾರ್ಥಿ-ಯುವಜನರು ಈ ದೇಶದ ಬಹುದೊಡ್ಡ ಸಂಪತ್ತು. ಸಕಾಲಕ್ಕೆ ಮಾರ್ಗದರ್ಶನ ಸಿಗದೇ ಇದ್ದಲ್ಲಿ ಯುವಜನತೆ ದಾರಿತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನರಿತು ರಾಯಚೂರು ಮಹಾನಗರ ಪಾಲಿಕೆಯು ಸಿಟಿ ಫಾರ್ ಯುತ್, ಯುತ್ ಫಾರ್ ಸಿಟಿ ಅಭಿಯಾನದಡಿ ಯುವಜನರಿಗೆ ಉತ್ತಮ ಮಾರ್ಗದರ್ಶನದ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಅಭಿಯಾನದ ಮುಂದುವರೆದ ಭಾಗವಾಗಿ ಈಗ ಈ ಶಿಬಿರ ಆಯೋಜನೆ ಮಾಡಿದ್ದೇವೆ.

ಈ ಭಾಗದ ವಿದ್ಯಾರ್ಥಿಗಳು ದೂರದ ಬೆಂಗಳೂರು, ಮಂಗಳೂರ, ಧಾರವಾಡ, ವಿಜಯಪುರ, ಮೈಸೂರ ಸೇರಿದಂತೆ ಅನೇಕ ಕಡೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ತೆರಳುತ್ತಾರೆ. ಇದರಿಂದ ಅವರಿಗೆ ಆರ್ಥಿಕ ಹೊರೆಯಾಗುತ್ತದೆ. ಇದನ್ನು ತಪ್ಪಿಸಲು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ರಾಯಚೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಉಚಿತ ತರಬೇತಿ ಶಿಬಿರ ಆಯೋಜನೆ ಮಾಡಿದ್ದೇವೆ.

ರಾಯಚೂರಲ್ಲಿ 30 ದಿನ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಶಿಬಿರಕ್ಕೆ ಹೆಸರು ನೋಂದಣಿಗೆ ನವೆಂಬರ್ 8 ಕೊನೆಯ ದಿನವಾಗಿದ್ದು, ಆಸಕ್ತರು ಬೇಗನೇ ಹೆಸರು ನೋಂದಣಿ ಮಾಡಬೇಕು. ಐಎಎಸ್, ಐಪಿಎಸ್, ಐಆರ್‍ಎಸ್, ಕೆಎಎಸ್ ಪರೀಕ್ಷೆಗಳು ಜೊತೆಗೆ ಎಫಡಿಎ, ಎಸ್ ಡಿಎ, ಪೆÇಲೀಸ್, ಪಿಡಿಓ ಸೇರಿದಂತೆ ಅನೇಕ ಬಗೆಯ ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡುವ ಕನಸು ನನಸು ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನವೆಂಬರ್ 12ರಂದು ಮಧ್ಯಾಹ್ನ 3 ರಿಂದ 4.30ರವರೆಗೆ ರಾಯಚೂರಿನ ಜಿಲ್ಲಾ ರಂಗಮಂದಿರ ಹತ್ತಿರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೊದಲ 100 ಅಭ್ಯರ್ಥಿಗಳಿಗೆ ಉಚಿತ ತರಬೇತಿಗೆ ಅವಕಾಶ ನೀಡಲಾಗುತ್ತದೆ.

ಪಿಯುಸಿ ಪಾಸಾದ ಹಾಗೂ ಪದವಿ ಓದುತ್ತಿರುವ ಅಥವಾ ಪದವಿ ಪೂರ್ಣಗೊಳಿಸಿದ ರಾಯಚೂರ ಸೇರಿದಂತೆ ರಾಜ್ಯದ ಯಾವುದೇ ಭಾಗದ ಆಸಕ್ತ ವಿದ್ಯಾರ್ಥಿಗಳು ಕ್ಯುಆರ್ ಕೋಡ್ ಬಳಸಿ ಹೆಸರು ನೋಂದಣಿ ಮಾಡಬಹುದಾಗಿದೆ. ಈ ತರಬೇತಿಗೆ ಯಾವುದೇ ಪ್ರವೇಶಾತಿ ಮತ್ತು ತರಬೇತಿ ಶುಲ್ಕ ಇರುವುದಿಲ್ಲ. ಇತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ರಂಗಮಂದಿರ ಹಿಂದುಗಡೆಯ ಜಿಲ್ಲಾ ಗ್ರಂಥಾಲಯದ ಕಚೇರಿಯನ್ನು ಕಚೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande