ಬಳ್ಳಾರಿ ಮೇಯರ್ ಹುದ್ದೆ ಎಡಗೈಗೆ ನೀಡಲು ಮನವಿ
ಬಳ್ಳಾರಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಕ್ಷವು ಈಬಾರಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ನೀಡಲು ಕೋರಿ ಕಾಂಗ್ರೆಸ್‍ನ ಎಡಗೈ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರಾದ ವೆಂಕಟೇಶ ಹೆಗಡೆ, ಎರುಕು
ಬಳ್ಳಾರಿ ಮೇಯರ್ ಹುದ್ದೆ ಎಡಗೈಗೆ ನೀಡಲು ಮನವಿ


ಬಳ್ಳಾರಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಯನ್ನು ಕಾಂಗ್ರೆಸ್ ಪಕ್ಷವು ಈಬಾರಿ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ನೀಡಲು ಕೋರಿ ಕಾಂಗ್ರೆಸ್‍ನ ಎಡಗೈ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖಂಡರಾದ ವೆಂಕಟೇಶ ಹೆಗಡೆ, ಎರುಕುಲಸ್ವಾಮಿ, ಹುಸೇನಪ್ಪ, ವೀರೇಂದ್ರ ಕುಮಾರ್, ಟಿ. ಆನಂದ್, ಗೌತಮ್, ಪೃಥ್ವಿ, ರವಿಕುಮಾರ್, ವೀರೇಶ್ ಇನ್ನಿತರರು ಪತ್ರಿಕಾಗೋಷ್ಠಿಯ ಮೂಲಕ ಪಕ್ಷ ಮತ್ತು ಪಕ್ಷದ ಮುಖಂಡರಲ್ಲಿ ಶನಿವಾರ ಮನವಿ ಸಲ್ಲಿಸಿದ್ದಾರೆ.

ಮೇಯರ್ ಮತ್ತು ಉಪ ಮೇಯರ್ ಎರೆಡೂ ಈಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಸಾಮಾನ್ಯ ವರ್ಗದ ಪ್ರತಿನಿಧಿಗಳು ಅನೇಕಬಾರಿ ಮೇಯರ್ ಆಗಿರುವ ಕಾರಣ ಈಬಾರಿ ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಮೇಯರ್ ಹುದ್ದೆ ನೀಡಿ, ಬಳ್ಳಾರಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆಯಬೇಕು ಎಂದು ಅವರು ಕೋರಿದರು.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಪರಿಶಿಷ್ಟರ 80 ಸಾವಿರ ಮತಗಳಿದ್ದು, ಬಹುತೇಕ ಕಾಂಗ್ರೆಸ್ ಪಕ್ಷದ ಕಾಯಂ ಮತಗಳಾಗಿವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಿಶಿಷ್ಟರ ಸಮುದಾಯಗಳು ಕಾಂಗ್ರೆಸ್ ಪಕ್ಷದ ಬೆಂಬಲಕ್ಕಿದ್ದ ಕಾರಣ ಪಕ್ಷ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದಿದೆ ಎಂದು ಅವರು ತಮ್ಮ ಮನವಿಗೆ ಪುಷ್ಠಿ ನೀಡುವ ಅಂಶಗಳನ್ನು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande