
ಹುಬ್ಬಳ್ಳಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹುಬ್ಬಳ್ಳಿ ಮಹಾನಗರದ ವತಿಯಿಂದ ನವೆಂಬರ್ 9 ರಂದು ಬೃಹತ್ ರಕ್ತದಾನ ಶಿಬಿರವನ್ನು ರಾಷ್ಟ್ರೋತ್ಥಾನ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಭವಾನಿ ನಗರದ ರಾಯರಮಠದ ಶ್ರೀಸುಜಿಯೀಂದ್ರ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉತ್ತರ ಪ್ರಾಂತ ಉಪಾಧ್ಯಕ್ಷ ಗೋವರ್ಧನರಾವ್ ತಿಳಿಸಿದ್ದಾರೆ
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 41 ವರ್ಷಗಳಿಂದ ಭಜರಂಗದಳವು ಸೇವಾ, ಸುರಕ್ಷಾ, ಸಂಸ್ಕಾರದೊಂದಿಗೆ ಕಾರ್ಯ ಮಾಡುತ್ತಿದೆ. ಇದಲ್ಲದೇ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಜೊತೆಗೆ ಮತಾಂತರ, ಲವ್ ಜಿಹಾದ್, ಗೋ ರಕ್ಷಣೆ ವಿಷಯವಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ. ಇದೀಗ ಕೇಂದ್ರ ಸರ್ಕಾರ ಆರೋಗ್ಯದ ಬಗ್ಗೆ ಯುವಕ-ಯುವತಿಯರಲ್ಲಿ ಜಾಗೃತಿ ಮೂಡಿಸಲು ನಶೆಮುಕ್ತ ಭಾರತ ಕಾರ್ಯಕ್ರಮ ನಡೆಸುತ್ತಿದೆ. ಇದಕ್ಕೆ ಬೆಂಬಲವಾಗಿ ಬಜರಂಗದಳವು ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಆರೋಗ್ಯಕ್ಕಾಗಿ ಓಟ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಭಾಷಣಗಳು, ಆರೋಗ್ಯ ಶಿಬಿರಗಳನ್ನು ನಡೆಸಲಿದೆ ಎಂದರು.
1990 ರಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಮಡಿದ ಕರಸೇವಕರ ನೆನಪಿಗಾಗಿ ಬಲಿದಾನ ದಿವಸ ಮತ್ತು ಋಷಿ ದಧೀಚಿಯು ದೇವತೆಗಳ ರಕ್ಷಣೆಗಾಗಿ ರಾಕ್ಷಸರ ಸಂಹಾರಕ್ಕಾಗಿ ತನ್ನ ಬೆನ್ನು ಮೂಳೆಯನ್ನೇ ದಾನವಾಗಿ ನೀಡಿದ್ದಾರೆ. ಈ ಕಾರಣಕ್ಕಾಗಿ ಪ್ರತಿವರ್ಷ ದಧೀಚಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಈ ವರ್ಷವೂ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು, ನ.9 ರಂದು ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದತ್ತಮೂರ್ತಿ ಕುಲಕರ್ಣಿ, ಚೇತನ್ ರಾವ್, ಪ್ರಶಾಂತ ನರಗುಂದ, ರಘು ಯಲ್ಲಕ್ಕನವರ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa