ನಾಳೆಯ ಸಂಪುಟ ಸಭೆಯಲ್ಲಿ ಕಬ್ಬು ಬೆಳಗಾರರ ಬೇಡಿಕೆ ಬಗ್ಗೆ ಚರ್ಚೆ : ಸಚಿವ ಎಂ ಬಿ ಪಾಟೀಲ್
ಮಾಡುತ್ತೇವೆ
ಪಾಟೀಲ


ವಿಜಯಪುರ, 05 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳಗಾರರ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಭೇಟಿ ನೀಡಿದರು. ಇದೆ ವೇಳೆ ಮಾತನಾಡಿದ ಸಚಿವ ಎಂ ಬಿ ಪಾಟೀಲ‌, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಯಾವ ಸಕ್ಕರೆ ಕಾರ್ಖಾನೆಗಳ ಪರವಾಗಿ ಇಲ್ಲ. ಮುಖ್ಯಮಂತ್ರಿ ರೈತರ ಪರವಾಗಿದ್ದಾರೆ, ರಾಜ್ಯ ಸರಕಾರ ಕೂಡ ರೈತ ಪರವಾಗಿ ಇದೆ. ತಮ್ಮ ಎಲ್ಲ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ನಾನು,ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲರು ಸೇರಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ. ಇದರ ನಾವು ಪ್ರಾಮಾಣಿಕತೆಯಿಂದ ಚರ್ಚೆ ಮಾಡುತ್ತೇವೆ. ಇಲ್ಲಿ ಕೇಂದ್ರ ಸರಕಾರದ ಇಲ್ಲಿ ದೊಡ್ಡ ಪಾತ್ರ ಇದೆ.ಕೇಂದ್ರದವರು 3,550 ರೂ ಪ್ರತಿ ಕ್ವಿಂಟಲ್ ಗೆ ಕೊಟ್ಟಿದೆ.

ನಮ್ಮಲ್ಲಿ ಇಳುವರಿ ಜಾಸ್ತಿ ಇದೆ. ವಿಜಯಪುರ, ಬಾಗಲಕೋಟ, ಬೆಳಗಾವಿ ಯಲ್ಲಿ ಇಳುವರಿ ಬರ್ತದೆ. ಕೆಲವರು ಪವರ್ ಗೆ,ಇಥಿನಾಲ್ ಸೇರಿದಂತೆ ಅನೇಕ ರೀತಿ ಕಾರ್ಖಾನೆಗಳು ಉತ್ಪನ್ನಗಳನ್ನ ತಗೆಯುತ್ತವೆ.ಇದರ ಬಗ್ಗೆ ಕೂಡ ನಾವು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇವೆ ಎಂದರು.

ಅಲ್ಲದೆ ಇದರ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತರ್ತೆವೆ. ಇಥಿನಾಲ್ ತಗೆದಿದ್ದಾರೆ ಆದ್ರೆ ಅದನ್ನ ಕೇಂದ್ರದವರು ಖರಿದಿ ಮಾಡುತ್ತಿಲ್ಲ. ಇದರಲ್ಲಿ ಕೇವಲ ರಾಜ್ಯ ಸರಕಾರದ ಪಾತ್ರ ಇಲ್ಲ,ಇದರಲ್ಲಿ ಕೇಂದ್ರ ಸರಕಾರದ ಪಾತ್ರ ಕೂಡ ಇದೆ. ಸರಕಾರ ಕೂಡ ತನ್ನ ಕೆಲಸ ಮಾಡುತ್ತೇವೆ. ನಾನು ಯಾರ ಮೇಲು ಆರೋಪ ಮಾಡಲ್ಲ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಎರಡು ಸೇರಿ ಇದನ್ನ ಮಾಡಬೇಕಾಗುತ್ತೆ. ನಮ್ಮ ರಾಜ್ಯ ಸರಕಾರದಿಂದ ಏನು ಮಾಡಬೇಕು ಅದನ್ನ ನಾವು ಮಾಡುತ್ತೇವೆ.ಕೇಂದ್ರ ಸರಕಾರಕ್ಕು ಕೂಡ ಮುಖ್ಯಮಂತ್ರಿ ಅವರು ಸಂಪರ್ಕಿಸಿ ಮಾತನಾಡುತ್ತಾರೆ.ಕೇಂದ್ರದ ಸಹಾಯ ಕೂಡ ಪಡೆದುಕೊಂಡು ನಾವು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತೇವೆ. ನಾಳೆಯ ಸಂಪುಟ ಸಭೆಯಲ್ಲಿ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande