
ವಿಜಯಪುರ, 05 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ನಡೆಯುತ್ತಿರುವ ಕಬ್ಬು ಬೆಳಗಾರರ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಭೇಟಿ ನೀಡಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೂ ಸಚಿವ ಎಂ ಬಿ ಪಾಟೀಲ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಕೇಂದ್ರದ ವಿರುದ್ದ ಸಚಿವ ಎಂ ಬಿ ಪಾಟೀಲ ಆರೋಪಕ್ಕೆ ಉತ್ತರ ನೀಡಲು ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ಮುಂದಾದರು.
ಆಗ ಸಚಿವ ಪಾಟೀಲ ಸಿಡಿಮಿಡಿಗೊಂಡರು. ನಾನು ಇಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತ ಇದೆ. ನೀವು ಬೇಕಾದ್ರೇ ಆಮೇಲೆ ರೈತರನ್ನು ಭೇಟಿಯಾಗಿ ಎಂದರು.
ನಿಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹೇಳಿ ಪ್ರಧಾನಿ ಅವರನ್ನು ಭೇಟಿ ಮಾಡಿಸುವ ವ್ಯವಸ್ಥೆ ಮಾಡಲು ಎಂದು ತಿರುಗೇಟು ನೀಡಿದರು.
ನೀವು ರೈತರ ಪರವಾಗಿ ಇದ್ರೆ ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ನೀವು ಒಂದು ರಾಜಕೀಯ ಪಕ್ಷದ ಅಧ್ಯಕ್ಷರಾಗಿರಿ. ಅದಕ್ಕಾಗಿ ನಾನು ರೈತನಾಗಿ ಇಲ್ಲಿ ಬಂದಿದ್ದೇನೆ ಎಂದ ಬಿಜೆಪಿ ಜಿಲ್ಲಾಧ್ಯಕ್ಷ ಅಂಗಡಿ ಪ್ರತ್ಯುತ್ತರ ನೀಡಿದರು. ರೈತನಾಗಿ ರೈತರಿಗೆ ಬೆಂಬಲ ನೀಡಲು ಬಂದಿದ್ಧೆನೆ ಎಂದರು. ಇದಕ್ಕೆ ಕ್ಯಾರೆ ಅನ್ನದೆ ಮಾತು ಮುಗಿಸಿ ಸಚಿವ ಎಂ ಬಿ ಪಾಟೀಲ ತೆರಳಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande