ಬಳ್ಳಾರಿಯಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ
ಬಳ್ಳಾರಿ, 04 ನವೆಂಬರ್ (ಹಿ.ಸ.) : ಆ್ಯಂಕರ್ : ಮನುಷ್ಯನಿಗೆ ಪಾಶ್ರ್ವವಾಯು ಸಂಭವಿಸಿದಾಗ ನಿರ್ಲಕ್ಷ್ಯ ವಹಿಸದೇ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಅವರು ಹೇಳಿದ್ದಾರೆ/ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,
ಬಳ್ಳಾರಿಯಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ


ಬಳ್ಳಾರಿಯಲ್ಲಿ ವಿಶ್ವ ಸ್ಟ್ರೋಕ್ ದಿನಾಚರಣೆ


ಬಳ್ಳಾರಿ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ಮನುಷ್ಯನಿಗೆ ಪಾಶ್ರ್ವವಾಯು ಸಂಭವಿಸಿದಾಗ ನಿರ್ಲಕ್ಷ್ಯ ವಹಿಸದೇ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಅವರು ಹೇಳಿದ್ದಾರೆ/

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ, ಜಿಲ್ಲಾ ಆಸ್ಪತ್ರೆ, ಮರಿಸ್ವಾಮಿ ಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ‘ಪ್ರತಿಕ್ಷಣವೂ (ಎಣಿಕೆ) ಮುಖ್ಯವಾಗುತ್ತದೆ’ ಎಂಬ ಘೋಷವಾಕ್ಯದಡಿ ನಗರದ 07 ನೇ ವಾರ್ಡ್ ಛಲವಾದಿಗೇರಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪಾಶ್ರ್ವವಾಯು ಅಥವಾ ಮೆದುಳಿನ ಆಘಾತವು ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಉಂಟಾಗುವ ಸ್ಥಿತಿಯಾಗಿದ್ದು, 30 ವರ್ಷ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಮದ್ಯಪಾನ ಮತ್ತು ಧೂಮಪಾನದಿಂದ ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಾಶ್ರ್ವವಾಯುವಿನ ರೋಗಲಕ್ಷಣಗಳನ್ನು ನೆನಪಿಡಲು ನಾವು ಬಿ-ಫಾಸ್ಟ್ (ಃಇ ಈಂSಖಿ) ಎಂಬ ಸಂಕ್ಷಿಪ್ತ ರೂಪ ಬಳಸುತ್ತೇವೆ. ಬಿ-ಬ್ಯಾಲೆನ್ಸ್ ರೋಗಿಯ ದೇಹದ ಸಮತೋಲನ ತಪ್ಪುವುದು. ಇ-ಐ ದೃಷ್ಟಿಯ ಸಮಸ್ಯೆಗಳು ಉಂಟಾಗುವುದು ಕೆಲವರಲ್ಲಿ ಇದು ಕುರುಡುತನವನ್ನು ಉಂಟುಮಾಡುತ್ತದೆ.

ಎಫ್-ಫೇಸ್ ಫೇಸಿಯಲ್ ಅಸಿಮ್ಮೆಟ್ರಿ. ಮುಖದ ಒಂದು ಭಾಗ ವಕ್ರ ವಾಗುವುದು. ಎ-ಆರ್ಮ್ ವೀಕ್ನೆಸ್. ಕೈ ಅಥವಾ ಕಾಲು ಸ್ವಾಧೀನ ತಪ್ಪುವುದು. ಎಸ್-ಸ್ಪೀಚ್ ಡಿಸ್ಟರ್ಬೆನ್ಸ್. ಮಾತನಾಡಲು ತೊದಲುವುದು, ಮಾತು ನಿಂತುಹೋಗುವುದು, ಅಥವಾ ಬೇರೆಯವರು ಮಾತನಾಡಿದ್ದು ಅರ್ಥವಾಗದೇ ಇರುವುದು. ಟಿ-ಟೈಮ್ ರೋಗಿ ಸಂಪೂರ್ಣವಾಗಿ ನಾರ್ಮಲ್ ಆಗಿದ್ದ ಸಮಯ, ಅಥವಾ ಪಾಶ್ರ್ವವಾಯು ಸಂಭವಿಸಿದ ಮೊದಲ ನಾಲ್ಕು ಗಂಟೆಗಳಲ್ಲಿ (ಗೋಲ್ಡನ್ ಅವರ್) ರೋಗಿಗೆ ವೈದ್ಯಕೀಯ ನೆರವು ನೀಡುವ ಸಮಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹಾಗೂ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಾಶ್ರ್ವವಾಯು ಎಂದರೆ ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ಹೋಗಿ ಅದರಿಂದಾಗುವ ನರಮಂಡಲದ ಮೇಲಾಗುವ ಪರಿಣಾಮಕ್ಕೆ ಪಾಶ್ರ್ವವಾಯು ಎಂದು ಕರೆಯುತ್ತಾರೆ ಎಂದರು.

ರಕ್ತನಾಳ ಹೆಪ್ಪುಗಟ್ಟಿ ಮೆದುಳಿನ ಅಂಗಾಂಶಗಳಿಗೆ ಘಾಸಿ ಆಗುವುದನ್ನು ಇಸ್ಚಿಮಿಕ್ ಸ್ಟ್ರೋಕ್ ಎಂದು, ರಕ್ತನಾಳ ಒಡೆದು ಹೋಗಿ ಮೆದುಳಿನ ಒಳಗೆ ಉಂಟಾಗುವ ರಕ್ತಸ್ರಾವವನ್ನು ಹೆಮರೇಜಿಕ್ ಸ್ಟ್ರೋಕ್ ಎಂದು ಎರಡು ವಿಧಗಳಿವೆ ಎಂದು ತಿಳಿಸಿದರು.

ಜೀವನ ಶೈಲಿಯ ಬದಲಾವಣೆಯಿಂದ ಆರೋಗ್ಯದಲ್ಲಿ ಏರು-ಪೇರು ಉಂಟಾಗುವ ಸಾಧ್ಯತೆ ಇದ್ದು, ನಿಯಮಿತ ಆಹಾರ ಸೇವನೆ, ಯೋಗ-ವ್ಯಾಯಾಮ, ಸಂಗೀತ ಆಲಾಪನೆ ಸೇರಿದಂತೆ ಇತರೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಶಿಸ್ತಿನ ಜೀವನ ನಡೆಸಿ ಸುಸ್ಥಿರ ಆರೋಗ್ಯ ಹೊಂದಬೇಕು ಎಂದು ಅವರು ಕರೆ ನೀಡಿದರು.

ಅಧಿಕ ರಕ್ತದೊತ್ತಡ, ಹೆಚ್ಚಿನ ಮಧುಮೇಹ, ತಲೆಸುತ್ತು, ರಕ್ತ ಪರಿಚಲನೆಯಲ್ಲಿ ಬದಲಾವಣೆ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ರೋಗಮುಕ್ತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕುರಿತ ಭಿತ್ತಿಪತ್ರಗಳನ್ನು ಗಣ್ಯರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ 7ನೇ ವಾರ್ಡ್ ನ ಸದಸ್ಯರಾದ ಉಮಾದೇವಿ ಶಿವರಾಜು, ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ, ಮರಿಸ್ವಾಮಿ ಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸೌಜನ್ಯ, ಜಿಲ್ಲಾ ಆರೋಗ್ಯ ಶಿP್ಪ್ಷಣಾಧಿಕಾರಿ ಖುರ್ಶಿದ್ ಬೇಗಮ್, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಣ್ಣಕೇಶವ ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande