ಬಿಹಾರದ ಮಹಿಳೆಯರೊಂದಿಗೆ ಪ್ರಧಾನಿ ಮೋದಿ ನೇರ ಸಂವಾದ
ಪಾಟ್ನಾ, 04 ನವೆಂಬರ್ (ಹಿ.ಸ.) : ಆ್ಯಂಕರ್ : ಬಿಹಾರದಲ್ಲಿ ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಮಹಿಳೆಯರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. “ನನ್ನ ಬೂತ್, ಬಲಿಷ್ಠ - ಮಹಿಳಾ ಸಂವಾದ” ಅಭಿಯಾನದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮ ಮಧ್ಯಾಹ್ನ 3:30ಕ
Pm


ಪಾಟ್ನಾ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ಬಿಹಾರದಲ್ಲಿ ಚುನಾವಣಾ ಚಟುವಟಿಕೆಗಳು ತೀವ್ರಗೊಂಡಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಮಹಿಳೆಯರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. “ನನ್ನ ಬೂತ್, ಬಲಿಷ್ಠ - ಮಹಿಳಾ ಸಂವಾದ” ಅಭಿಯಾನದ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮ ಮಧ್ಯಾಹ್ನ 3:30ಕ್ಕೆ ನಮೋ ಅಪ್ಲಿಕೇಶನ್ ಮೂಲಕ ಪ್ರಸಾರಗೊಳ್ಳಲಿದೆ.

ಬಿಹಾರದ ತಾಯಂದಿರು ಹಾಗೂ ಸಹೋದರಿಯರೊಂದಿಗೆ ನೇರ ಸಂವಹನದ ಮೂಲಕ ಪ್ರಧಾನಿ ಮೋದಿ ಸಂಘಟನೆಯ ತಳಮಟ್ಟದ ಬಲವನ್ನು ಒತ್ತಿ ಹೇಳಲಿದ್ದಾರೆ. ಜೊತೆಗೆ, ಮಹಿಳಾ ಸಬಲೀಕರಣಕ್ಕಾಗಿ ಎನ್‌ಡಿಎ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳಾದ ಉಜ್ವಲ, ಜನ್‌ಧನ್, ಹೆರಿಗೆ ಸಹಾಯ ಯೋಜನೆ, ಆಯುಷ್ಮಾನ್ ಭಾರತ್, ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಫಲಶ್ರುತಿಯನ್ನು ವಿವರಿಸಲಿದ್ದಾರೆ ಎಂದು ಬಿಹಾರ ಬಿಜೆಪಿ ಘಟಕ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande