
ಬೆಂಗಳೂರು, 04 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯದ ಅಂಗನವಾಡಿ ಸುವರ್ಣ ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಸರ್ಕಾರ, ನವೆಂಬರ್ 19ರಂದು ಬೆಂಗಳೂರು ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿರುವ “ಅಂಗನವಾಡಿ ಸುವರ್ಣ ಮಹೋತ್ಸವ” ಕಾರ್ಯಕ್ರಮದ ವೇಳೆ ‘ಅಕ್ಕಾಪಡೆ’ ಯೋಜನೆಗೆ ಅಧಿಕೃತ ಚಾಲನೆ ನೀಡಲಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿ ಕಾರ್ಯಕ್ರಮದ ತಯಾರಿ, ಸುರಕ್ಷತಾ ಕ್ರಮಗಳು ಹಾಗೂ ‘ಅಕ್ಕಾಪಡೆ’ ಯೋಜನೆಯ ಅನುಷ್ಠಾನ ಕುರಿತು ಚರ್ಚಿಸಿದರು.
ಭೇಟಿ ನಂತರ ಸಚಿವೆ ಹೆಬ್ಬಾಳಕರ್ ಅವರು ಮಾಧ್ಯಮಗಳಿಗೆ ಮಾತನಾಡಿ, “ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಸುವರ್ಣ ಮಹೋತ್ಸವವನ್ನು ಭವ್ಯವಾಗಿ ಆಚರಿಸಲು ಯೋಜಿಸಲಾಗಿದೆ. ಅದೇ ವೇದಿಕೆಯಲ್ಲಿ ಅಕ್ಕಾಪಡೆ ಯೋಜನೆಗೆ ಚಾಲನೆ ನೀಡಲಾಗುವುದು,” ಎಂದು ಹೇಳಿದರು.
‘ಅಕ್ಕಾಪಡೆ’ ಯೋಜನೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಸುರಕ್ಷತೆಯನ್ನು ಬಲಪಡಿಸಲು ಉದ್ದೇಶಿತ ಹೊಸ ಉಪಕ್ರಮವಾಗಿದ್ದು, ಅದು ಅಂಗನವಾಡಿ ಕಾರ್ಯಕರ್ತೆಯರ ಶಕ್ತೀಕರಣಕ್ಕೂ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa