ಬೆಳೆ ಸಮೀಕ್ಷೆದಾರರಿಗೆ ಸೇವಾಭದ್ರತೆ ಹಾಗೂ ಜೀವವಿಮೆ ಒದಗಿಸಿ
ವಿಜಯಪುರ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕದಲ್ಲಿ ಸುಮಾರು ೭-೮ ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಿದ್ದೇವೆ. ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಎದುರಾಳಿಗಳ ಸುಳಿವು ಮುಂಚಿತವಾಗಿ ಸಿಗಬಹುದು. ಆದರೆ ನಾವು ಹೊಲಗಳಲ್ಲಿ ಸಮೀಕ್ಷೆ ಮಾಡುವಾಗ ಅನೇಕ ಕಾಡುಪ್ರಾಣಿ
ಭದ್ರತೆ


ವಿಜಯಪುರ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದಲ್ಲಿ ಸುಮಾರು ೭-೮ ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಿದ್ದೇವೆ. ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಎದುರಾಳಿಗಳ ಸುಳಿವು ಮುಂಚಿತವಾಗಿ ಸಿಗಬಹುದು. ಆದರೆ ನಾವು ಹೊಲಗಳಲ್ಲಿ ಸಮೀಕ್ಷೆ ಮಾಡುವಾಗ ಅನೇಕ ಕಾಡುಪ್ರಾಣಿಗಳಿಂದ ಹಾಗೂ ವಿವಿಧ ರೀತಿಯ ಅನಾಹುತಗಳಾಗಿ ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ಆದ್ದರಿಂದ ಕರ್ನಾಟಕ ರಾಜ್ಯ ಬೆಳೆ ಸಮೀಕ್ಷೆದಾರರಿಗೆ ಸೇವಾಭದ್ರತೆ ಹಾಗೂ ಜೀವವಿಮೆ ಒದಗಿಸಿ, ದಿನಗೂಲಿ ಕಾರ್ಮಿಕರನ್ನಾಗಿ ನೇಮಕಗೊಳಿಸುವಂತೆ ಜಿಲ್ಲಾಧ್ಯಕ್ಷ ನರಸಪ್ಪ ನಾವಿ ಅವರು ಅಪರ್ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಜಮೀನುಗಳಲ್ಲಿ ಕಾರ್ಯ ನಿರ್ವಹಿಸುವಾಗ ಅನೇಕ ರೀತಿಯ ಹುಳ- ಹುಪ್ಪಡಿ, ಹಾವು, ಚೇಳು, ಕಾಡು ಹಂದಿ, ತೋಳ, ಕುರಿಗಾಯಿಗಳ ನಾಯಿಗಳ ದಾಳಿಯಿಂದಾಗಿ ಅನೇಕ ಅಪಾಯಗಳಾಗಿವೆ. ರೈತರ ಮೊಟರ್ ಪಂಪಸೆಟ್‌ಗಳ ವೈರ ತುಂಡಾಗಿ ಪ್ರಾಣಾಪಾಯಗಳು ಆಗಿವೆ, ಈ ವಿಷಯವನ್ನು ಮಿಂಚನಾಳ ಗ್ರಾಮದಲ್ಲಿ ಒಬ್ಬ ಪಿ.ಆರ್.ಓ ಗೆ ಆದಾಗ ಸಂಬಂಧಿಸಿದ ಅಧಿಕಾರಗಳ ಗಮನಕ್ಕೆ ತಂದಾಗ ಯಾವ ಕ್ರಮವನ್ನು ಕೂಡಾ ಕೈಗೊಳ್ಳಲಿಲ್ಲ.

ವರ್ಷದಲ್ಲಿ ೨-೩ ತಿಂಗಳು ನಿರಂತರವಾಗಿ ಪ್ರಾಣದ ಹಂಗನ್ನು ತೊರೆದು ಶ್ರದ್ದೆಯಿಂದ ಅಧಿಕಾರಿಗಳ ಅಣತೆಯಂತೆ ಸೇವೆ ಸಲ್ಲಿಸುತ್ತಿದ್ದೆವೆ, ಕೂಡಲೇ ನಮ್ಮನ್ನು ದಿನಗೂಲಿ ಕಾರ್ಮಿಕರೆಂದು ನೇಮಕಮಾಡಿ ವರ್ಷವಿಡಿ ಕೆಲಸ ನೀಡಿ ಸೇವಾಭದ್ರತೆ ಹಾಗೂ ಜೀವ ವಿಮೆಯನ್ನು ಒದಗಿಸಬೇಕು ಎಂದರು. ಈ ವೇಳೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭೀಮಪ್ಪ ತಳವಾರ, ಜಿಲ್ಲಾ ಉಪಾಧ್ಯಕ್ಷರಾದ ಸುರೇಶ ಹಜೇರಿ, ಸದಾಶಿವ ಚಲವಾದಿ, ಅರುಣ ತಳವಾರ, ಚಂದನ ಕೋಳಿ, ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ ನೂರಾರು ಕರ್ನಾಟಕ ರಾಜ್ಯ ಬೆಳೆ ಸಮೀಕ್ಷೆದಾರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande