ಅಕ್ಕ ಪಡೆಗೆ ಗುತ್ತಿಗೆ ಆಧಾರದಡಿ ಮಹಿಳೆಯರ ಆಯ್ಕೆ : ಆಹ್ವಾನ
ಬಳ್ಳಾರಿ, 03 ನವೆಂಬರ್ (ಹಿ.ಸ.) : ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಕ್ಕ ಪಡೆ ಯೋಜನೆಯಡಿ ಗುತ್ತಿಗೆ ಆಧಾರದ ಮೇರೆಗೆ 05 ಮಹಿಳಾ ಎನ್‍ಸಿಸಿ ಕೆಡೆಟ್ಸ್ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಹರಿಂದ ಆಹ್ವಾನಿಸಲಾಗಿದೆ. ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು
ಅಕ್ಕ ಪಡೆಗೆ ಗುತ್ತಿಗೆ ಆಧಾರದಡಿ ಮಹಿಳೆಯರ ಆಯ್ಕೆ : ಆಹ್ವಾನ


ಬಳ್ಳಾರಿ, 03 ನವೆಂಬರ್ (ಹಿ.ಸ.) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಕ್ಕ ಪಡೆ ಯೋಜನೆಯಡಿ ಗುತ್ತಿಗೆ ಆಧಾರದ ಮೇರೆಗೆ 05 ಮಹಿಳಾ ಎನ್‍ಸಿಸಿ ಕೆಡೆಟ್ಸ್ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಹರಿಂದ ಆಹ್ವಾನಿಸಲಾಗಿದೆ.

ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.

ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸಬಲ್ಲವರು ಅರ್ಹರಾಗಿರುತ್ತಾರೆ.

ಆಯ್ಕೆ ಮಾನದಂಡ:

ಎನ್‍ಸಿಸಿ ‘ಸಿ’ ಸರ್ಟಿಫಿಕೇಟ್ ಹೊಂದಿರುವ 35-45 ವಯೋಮಾನದ ಮಹಿಳಾ ಎನ್‍ಸಿಸಿ ಕೆಡೆಟ್ಸ್ ಅರ್ಹರು. ಎಸ್‍ಎಸ್‍ಎಲ್‍ಸಿ, ಪಿಯುಸಿ, ಯಾವುದೇ ಪದವಿ ಪಾಸಾಗಿರಬೇಕು. ದೈಹಿಕ ಸದೃಢತೆ ಹೊಂದಿರಬೇಕು.

ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುವುದು. ಉತ್ತಮ ನಡವಳಿಕೆ ಸಂವಹನ ಕಲೆ, ಕಾರ್ಯದಕ್ಷತೆ ಉಳ್ಳವರಾಗಿರಬೇಕು. ಶಿಫ್ಟ್ ವೇಳೆ ಕೆಲಸ ನಿರ್ವಹಿಸಲು ಸಿದ್ಧರಿರಬೇಕು (7 ರಿಂದ ಸಂಜೆ 8 ರವರೆಗೆ 2 ಪಾಳಿಗಳಲ್ಲಿ ಅಂದರೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ).

ಗುತ್ತಿಗೆ ಅವಧಿ 11 ತಿಂಗಳಿಗೆ ಸೀಮಿತವಾಗಿದ್ದು, ಕರ್ತವ್ಯ ನಿರ್ವಹಣೆ ತೃಪ್ತಿಕರವಾಗಿದ್ದಲ್ಲಿ ಸೇವೆಯನ್ನು ಮುಂದುವರೆಸಲಾಗುವುದು.

ಆಸಕ್ತ ಮಹಿಳಾ ಎನ್‍ಸಿಸಿ ಮಹಿಳಾ ಕೆಡೆಟ್ಸ್ ಗಳು ನ.03 ರಿಂದ 10 ರ ವರೆಗೆ ನಗರದ ವಾಲ್ಮೀಕಿ ವೃತ್ತ(ಎಸ್.ಸಿ ವೃತ್ತ)ದ ಬಳಿಯ ದೇವಿನಗರದ ಸ್ತ್ರೀಸೇವಾನಿಕೇತನ ಆವರಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸ್ವ-ವಿವರವುಳ್ಳ ಬಯೋಡೇಟಾ, ಇತ್ತೀಚಿನ ಭಾವಚಿತ್ರ, ನಿಗದಿಪಡಿಸಿದ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಎನ್‍ಸಿಸಿ ‘ಸಿ’ ಸರ್ಟಿಫಿಕೇಟ್ ಪ್ರಮಾಣ ಪತ್ರ, ಸೇವಾ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಸೇರಿದಂತೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ದೃಢೀಕರಿಸಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊ.7353901862 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಅವರು ತಿಳಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande