ಚೆಲ್ಸಿಯಾ ತಂಡಕ್ಕೆ ಮರಳಿದ ಕೋಲ್ ಪಾಮರ್
ಲಂಡನ್, 29 ನವೆಂಬರ್ (ಹಿ.ಸ.) : ಆ್ಯಂಕರ್ : ಚೆಲ್ಸಿಯಾದ ಸ್ಟಾರ್ ಫಾರ್ವರ್ಡ್ ಕೋಲ್ ಪಾಮರ್ ಆರ್ಸೆನಲ್ ವಿರುದ್ಧ ಭಾನುವಾರ ನಡೆಯುವ ಪ್ರೀಮಿಯರ್ ಲೀಗ್ ಪ್ರಮುಖ ಪಂದ್ಯಕ್ಕೂ ಮುನ್ನ ತಂಡಕ್ಕೆ ಮರಳಿದ್ದಾರೆ ಎಂದು ಮ್ಯಾನೇಜರ್ ಎಂಜೊ ಮಾರೆಸ್ಕಾ ತಿಳಿಸಿದ್ದಾರೆ. ಸೆಪ್ಟೆಂಬರ್ 20ರಿಂದ ತೊಡೆಸಂದು ಗಾಯ ಮತ್ತು ಕ
Famar


ಲಂಡನ್, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಚೆಲ್ಸಿಯಾದ ಸ್ಟಾರ್ ಫಾರ್ವರ್ಡ್ ಕೋಲ್ ಪಾಮರ್ ಆರ್ಸೆನಲ್ ವಿರುದ್ಧ ಭಾನುವಾರ ನಡೆಯುವ ಪ್ರೀಮಿಯರ್ ಲೀಗ್ ಪ್ರಮುಖ ಪಂದ್ಯಕ್ಕೂ ಮುನ್ನ ತಂಡಕ್ಕೆ ಮರಳಿದ್ದಾರೆ ಎಂದು ಮ್ಯಾನೇಜರ್ ಎಂಜೊ ಮಾರೆಸ್ಕಾ ತಿಳಿಸಿದ್ದಾರೆ.

ಸೆಪ್ಟೆಂಬರ್ 20ರಿಂದ ತೊಡೆಸಂದು ಗಾಯ ಮತ್ತು ಕಾಲ್ಬೆರಳಿನ ಮುರಿತದಿಂದ ಹೊರಗುಳಿದಿದ್ದ ಪಾಮರ್‌ರ ವಾಪಸ್ಸು ಚೆಲ್ಸಿಯಾಗೆ ದೊಡ್ಡ ಬಲವರ್ಧನೆ ಎನ್ನಲಾಗಿದೆ. ಕಳೆದ ಋತುವಿನಲ್ಲಿ ಅವರು 15 ಲೀಗ್ ಗೋಲುಗಳೊಂದಿಗೆ ಕ್ಲಬ್‌ನ ಟಾಪ್ ಸ್ಕೋರರ್ ಆಗಿದ್ದರು. ಈ ಋತುವಿನಲ್ಲಿ ಗಾಯದ ಕಾರಣ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಆಡಿರುವ ಅವರು 2 ಗೋಲುಗಳನ್ನು ಬಾರಿಸಿದ್ದಾರೆ.

ಪಾಮರ್ ನಮ್ಮ ಅತ್ಯುತ್ತಮ ಆಟಗಾರ. ಅವರ ಮರಳುವಿಕೆ ತಂಡಕ್ಕೆ ಅಗತ್ಯವಾದ ಆತ್ಮವಿಶ್ವಾಸ ನೀಡುತ್ತದೆ ಎಂದು ಮಾರೆಸ್ಕಾ ಹೇಳಿದ್ದಾರೆ.

ಚೆಲ್ಸಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಟಾಪ್‌ನಲ್ಲಿ ಇರುವ ಆರ್ಸೆನಲ್‌ಗೆ ಆರು ಅಂಕಗಳ ಹಿಂದೆ ಇದೆ. ಪಂದ್ಯವು ಭಾನುವಾರ ಸ್ಟ್ಯಾಂಫರ್ಡ್ ಬ್ರಿಡ್ಜ್ ನಲ್ಲಿ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande