ಡಬ್ಲುಪಿಎಲ್ 2026 ಹರಾಜು ; ಡೆಲ್ಲಿ ಕ್ಯಾಪಿಟಲ್ಸ್ ಸಮತೋಲಿತ ತಂಡ ರಚನೆ
ನವದೆಹಲಿ, 28 ನವೆಂಬರ್ (ಹಿ.ಸ.) : ಆ್ಯಂಕರ್ : ಡಬ್ಲುಪಿಎಲ್ 2026 ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯೋಜಿತ ಕಾರ್ಯತಂತ್ರದಂತೆ ಪ್ರಮುಖ ಆಟಗಾರ್ತಿಗಳನ್ನು ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟಿದೆ. ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌ರನ್ನು ಉಳಿಸಿಕೊಂಡ ತಂಡ, ವಿಶ್ವಕಪ್‌ ತಾರೆಗಳು ಎನ್. ಶ್ರೀ ಚ
Wpl


ನವದೆಹಲಿ, 28 ನವೆಂಬರ್ (ಹಿ.ಸ.) :

ಆ್ಯಂಕರ್ : ಡಬ್ಲುಪಿಎಲ್ 2026 ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯೋಜಿತ ಕಾರ್ಯತಂತ್ರದಂತೆ ಪ್ರಮುಖ ಆಟಗಾರ್ತಿಗಳನ್ನು ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟಿದೆ. ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌ರನ್ನು ಉಳಿಸಿಕೊಂಡ ತಂಡ, ವಿಶ್ವಕಪ್‌ ತಾರೆಗಳು ಎನ್. ಶ್ರೀ ಚರಣಿ (₹1.30 ಕೋಟಿ) ಮತ್ತು ಸ್ನೇಹ್ ರಾಣಾ (₹50 ಲಕ್ಷ) ಅವರನ್ನು ಸೇರಿಸಿಕೊಂಡಿದೆ.

ವಿಶ್ವಕಪ್ ಟಾಪ್ ಸ್ಕೋರರ್ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೋಲ್ವಾರ್ಡ್ ಅವರನ್ನು ₹1.10 ಕೋಟಿಗೆ, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಚಿನೆಲ್ಲೆ ಹೆನ್ರಿ ಅವರನ್ನು ₹1.30 ಕೋಟಿಗೆ ಸೆಳೆದಿದೆ. ಲಿಜೆಲ್ಲೆ ಲೀ, ಮಿನ್ನು ಮಣಿ, ತಾನಿಯಾ ಭಾಟಿಯಾ ಸೇರಿದಂತೆ ಅನುಭವಿಗಳ ಜೊತೆಗೆ ದಿಯಾ ಯಾದವ್, ಮಮತಾ ಮಡಿವಾಳ, ನಂದಿನಿ ಶರ್ಮಾ ಮೊದಲಾದ ಯುವ ಪ್ರತಿಭೆಗಳನ್ನೂ ತಂಡ ಸೇರಿಸಿಕೊಂಡಿದೆ.

ಭಾರತೀಯ ಸ್ಪಿನ್ನರ್‌ಗಳ ಸೇರ್ಪಡೆ ನಮಗೆ ದೊಡ್ಡ ಬಲ. ತಂಡ ಯೋಜನೆಯಂತೆ ರಚನೆಯಾಗಿದೆ ಎಂದು ತರಬೇತುದಾರ ಜೊನಾಥನ್ ಬ್ಯಾಟಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande