
ಕೋಲಾರ, ೨೧ ನವೆಂಬರ್ (ಹಿ.ಸ) :
ಆ್ಯಂಕರ್ : ಅಕ್ರಮವಾಗಿ ಮರ ಕಡಿದು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಂದ ಪೋನ್ ಪೇ ಮೂಲಕ ಲಂಚ ಸ್ವೀಕರಿಸಿದ ಕೋಲಾರ ತಾಲ್ಲೂಕು ಹರಟಿ ಅರಣ್ಯ ವಲಯದ ಕಾವಲುಗಾರನ ಅಮಾನತಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಆದೇಶಿಸಿದ್ದಾರೆ.
ಕೋಲಾರದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಈ ಹಗರಣದ ಬಗ್ಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸಭೆಯ ಗಮನ ಸೆಳೆದರು. ರೈತನೊಬ್ಬ ಮರ ಕಡಿದು ಟ್ರ್ಯಾಕ್ಟರ್ ನಲ್ಲಿ ಕೋಲಾರಕ್ಕೆ ಸಾಗಾಣಿಕೆ ಮಾಡುತ್ತಿದ್ದ ವಿಷಯ ತಿಳಿದು ಅರಣ್ಯ ಕಾವಲುಗಾರ ಕೋಲಾರ ನಗರದ ಹೊರವಲಯದಲ್ಲಿ ಟ್ರ್ಯಾಕ್ಟರ್ ತಡೆದು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ ಇದರಿಂದ ಪಾರಾಗಲು ರೈತ ೩೫ ಸಾವಿರ ಅರಣ್ಯ ಕಾವಲುಗಾರಿಗೆ ಪೋನ್ ಪೇ ಮಾಡಿದ.
ಆ ನಂತರ ರೈತ ಉಪಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿದ. ಹಣ ನೀಡಿದ ರೈತ ಮತ್ತು ನಾನು ಸಂಬಂಧಿಗಳು ನನಗೆ ತುರ್ತು ಅಗತ್ಯಕ್ಕೆ ರೈತ ದುಡ್ಡು ನೀಡಿದ್ದಾನೆ ನಾನು ಲಂಚ ಪಡೆದಿಲ್ಲ ಎಂದು ಹಗರಣದಿಂದ ಪಾರಾಗಲು ಕಥೆ ಕಟ್ಟಿರುವುದಾಗಿ ಶಾಸಕ ಮಂಜುನಾಥ್ ಹೇಳಿದರು.
ಮಧ್ಯ ಪ್ರವೇಶ ಮಾಡಿದ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಣ ಪಡೆದ ಸಿಬ್ಬಂದಿಯನ್ನು ಅಮಾನತು ಮಾಡದಿರಲು ಕಾರಣವೇನೆಂದು ಪ್ರಶ್ನಿಸಿದರು. ಈಗಾಗಲೇ ನನಗೆ ದೂರು ಬಂದಿದ್ದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣಾ ವರದಿಯನ್ನು ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗುವುದು ಸಿಬ್ಬಂದಿಯನ್ನು ಅಮಾನತು ಮಾಡಲು ನನಗೆ ಅಧಿಕಾರವಿಲ್ಲ ಎಂದು ವಿವರಿಸಿದರು.
ಮಾಹಿತಿ ಪಡೆದ ಸಚಿವ ಬೈರತಿ ಸುರೇಶ್ ಪೋನ್ ಪೇ ಮೂಲಕ ಲಂಚ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೂಡಲೇ ಅಮಾನತು ಪಡಿಸುವಂತೆ ಸೂಚಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್