
ಗದಗ, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಭಕ್ತ ಕನಕದಾಸ ರೈಲ್ವೆ ನೌಕರರ ಸಂಘದ ವತಿಯಿಂದ 538 ನೇ ವಿಶ್ವಚೇತನ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಇದೇ ನ. 23 ರಂದು ಬೆಳಿಗ್ಗೆ 10. 30 ಗಂಟೆಗೆ ನಗರದ ಗಣೇಶ ಹಾಲ್‍ನಲ್ಲಿ ಜರುಗಲಿದೆ.
ಇದಕ್ಕೂ ಮುನ್ನ ಬೆಳಿಗ್ಗೆ 8.30 ಗಂಟೆಗೆ ಶ್ರೀ ಭಕ್ತಕನಕದಾಸ ವೃತ್ತ ಹಾತಲಗೇರಿ ನಾಕಾದಲ್ಲಿರುವ ಶ್ರೀ ಕನಕದಾಸರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆ ಕೊಣ್ಣೂರಿನ ಶ್ರೀ ರಾಯಣ್ಣ ಕಲಾ ತಂಡದವರಿಂದ ಡೊಳ್ಳಿನ ಮೆರವಣಿಗೆ ಮೂಲಕ ಸಕಲ ರೈಲ್ವೆ ನೌಕರರು ಹಾಗೂ ಶ್ರೀ ಕನಕದಾಸರ ಭಕ್ತರು ಗಾಂಧಿ ಸರ್ಕಲ್ ಮುಖಾಂತರ ಗದುಗಿನ ರೈಲ್ವೆ ಗಣೇಶ ಹಾಲ್ ತಲುಪುವುದು.
ಈ ಕಾರ್ಯಕ್ರಮದಲ್ಲಿ ಮನ್ಸೂರ್-ಧಾರವಾಡದ ಶ್ರೀ ರೇವಣಸಿದ್ಧೇಶ್ವರ ಮಹಾಮಠದ ಪೂಜ್ಯಶ್ರೀ ಡಾ. ಶ್ರೀ ಬಸವರಾಜ ದೇವರು ದಿವ್ಯ ಸಾನಿಧ್ಯವಹಿಸುವರು. ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕೀರಪ್ಪ ಹೆಬಸೂರ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ವಾಸಣ್ಣ ಕುರಡಗಿ, ರವಿ ದಂಡಿನ, ಡಾ. ಜಿ.ಬಿ. ಬಿಡಿನಹಾಳ, ಎನ್. ಎಮ್. ಅಂಬಲಿಯವರ, ಪ್ರಕಾಶ ಕರಿ, ಡಾ. ಜಯದೇವ ಮೆಣಸಗಿ, ರಾಮಕೃಷ್ಣ ರೊಳ್ಳಿ, ಜೆ.ಬಿ. ಕಟಗಿ, ಬಸವರಾಜ ಗುಡ್ಲಾನೂರ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಸಾಹಿತಿಗಳಾದ ಸಿದ್ದಪ್ಪ ಜಕಬಾಳ ಹಾಗೂ ಬಸವರಾಜ ಜಾಲಿಹಾಳ ಅವರು ಭಕ್ತ ಕನಕದಾಸರ ಕುರಿತು ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ರಮೇಶ ಕಂಬಳಿ, ಡಾ. ಸಾಗರ ಮುಂಡರಗಿ, ಎಮ್.ಕೆ. ರಘುಪ್ರಸನ್ನ, ವಿಶ್ವನಾಥ ಕೆಳಗಿನಮಠ, ಬಾಲ ಶರವಣ, ಜೈಕೃಷ್ಣಕುಮಾರ, ಮನೋಜ ಬಾಗಡೆ, ಜೈ ಕೃಷ್ಣಕುಮಾರ, ಸೋಮಶೇಖರ, ಸಿದ್ದಪ್ಪ ಅಳವಂಡಿ, ಮಯಾಂಕ್‍ರಾಜ್, ವಿನಾಯಕ ಕುಲಕರ್ಣಿ,ಜಿ. ಪವನಕುಮಾರ, ಕೆ. ವೆಂಕಟಸುಬ್ಬರಾವ್,ರಿತೇಶಕುಮಾರ, ಗೋನಾಜಾನ ಬಾಬು, ಎಚ್.ಕೆ. ಜೋಗಿನ, ಉಮೇಶ ಕುರಿ
ಅತಿಥಿಗಳಾಗಿ ಆಗಮಿಸುವರು.
ಇದೇ ಸಂದರ್ಭದಲ್ಲಿ ರೈಲ್ವೆ ನೌಕರರ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವದು. ಸುರೇಶ ಮುಧೋಳ ಹಾಗೂ ಹನಮಂತಪ್ಪ ಶಿವಪೂರ ಕಾರ್ಯಕ್ರಮ ನಿರೂಪಿಸುವರು. ನಂತರ ರಾಯಣ್ಣ ಕಲಾ ತಂಡ ಕೊಣ್ಣೂರು ಇವರಿಂದ ಡೊಳ್ಳಿನ ನೃತ್ಯ ಕಾರ್ಯಕ್ರಮ ಜರುಗುವದು.
ಹಿಂದೂಸ್ತಾನ್ ಸಮಾಚಾರ್ / lalita MP