ಸಮುದಾಯ ಆರೋಗ್ಯ ಕೇಂದ್ರದ ಅಭಿವೃದ್ಧಿಗಾಗಿ ಮನವಿ
ವಿಜಯಪುರ, 22 ನವೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರ ಕನ್ನೂರಿನ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕನ್ನೂರ ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷ
ಮನವಿ


ವಿಜಯಪುರ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರದ ಸಮುದಾಯ ಆರೋಗ್ಯ ಕೇಂದ್ರ ಕನ್ನೂರಿನ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಕನ್ನೂರ ಗ್ರಾಮ ಪಂಚಾಯಿತಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾ ವಿಠ್ಠಲ ತಿ. ಭಜಂತ್ರಿ ಮಾತನಾಡಿ, ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಕನ್ನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕನ್ನೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಪರೇಷನ್ ಥೇಟರನ ಸಲಕರಣೆಗಳಿದ್ದು, ಅದರ ತಂಕ್ಕAತೆ ಟೆಕ್‌ನಿಷನ್‌ಗಳಿಲ್ಲ, ಲ್ಯಾಬರೊಟರಿ ಇದ್ದು ಲ್ಯಾಬ ಟೆಕ್‌ನಿಷನ್‌ಇಲ್ಲಿ, ಸಿ.ಬಿ.ಸಿ ಮಷೀನ್ ಇದ್ದು ಅದರದು ಟೆಕ್‌ನಿಷನ್ ಇಲ್ಲ, ಎಕ್ಸ್ ರೇ ಮಷೀನ್ ಇಲ್ಲ ಆದರೆ ಟೆಕ್‌ನಿಷನ್ ಇರುತ್ತಾರೆ. ಫಾರಮಾಸಿಸ್ಟ ಇರುವುದಿಲ್ಲ ಸಮುದಾಯ ಕೆಂದ್ರಕ್ಕೆ ಸಂಬAದಿಸಿದAತೆ ಮೂಲಭೂತ ಸೌಕರ್ಯವಿಲ್ಲ ಮತ್ತು ಸಮುದಾಯ ಕೇಂದ್ರಕ್ಕೆ ಅವಸ್ಯ ವಿರುವ ಸ್ತ್ರೀರೋಗ ತಜ್ಞರು, ನೇತ್ರ ತಜ್ಞರು ಇರವುದಿಲ್ಲ, ಸಮುದಾಯ ಕೇಂದ್ರಕ್ಕೆ ಅವಸ್ಯ ವಿರುವ ತಜ್ಞ ವೈದ್ಯರು ಇರುವುದಿಲ್ಲ ಜೊತೆಗೆ ಸಮುದಾಯ ಕೇಂದ್ರಕ್ಕೆ ವ್ಯದ್ಯಾಧಿಕಾರಿಗಳಿಗೆ ಅನೂಕೂಲವಾಗುವ ವಸತಿ ಗೃಹಗಳನ್ನು ಹಾಗೂ ಸಂಪೂರ್ಣ ಪ್ರಮಾಣದ ಎಲ್ಲ ಔಷದಿಗಳು, ಸಿಭಂದಿಗಳು, ಮತ್ತು ವೈದ್ಯರು ಸರಿಯಾದ ಸಮಯಕ್ಕೆ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕನ್ನೂರಿನ ಸಮಾಜ ಸೇವಕರಾದ ಸತೀಶ ಅ. ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಯ ವಿಜಯಪೂರ ತಾಲೂಕಿನ ಕನ್ನೂರ ಗ್ರಾಮ ಒಳಕೊಂಡ0ತೆ ಮಡಸನಾಳ, ಕನ್ನೂರ ದರ್ಗಾ, ಶಿರನಾಳ, ಡೋಮನಾಳ, ಮಖಣಾಪೂರ, ತಿಡಗುಂದಿ, ಗುಣಕಿ, ಬೋಮನಳ್ಳಿ, ಕನ್ನಾಳ, ಮಿಂಚನಾಳ, ಇವುಗಳ ಜೊತೆ ಹತ್ತಾರು ತಾಂಡಾಗ್ರಾಮಗಳು ಮತ್ತು ಮೋನಪ್ಪನದೊಡ್ಡಿ, ಬ್ಯಾಕೋಡ ದೊಡ್ಡಿ, ಜಮಾದಾರ ವಸ್ತಿ, ಹೀಗೆ ಅನೇಕ ಗ್ರಾಮಗಳಿದ್ದು ಈ ಎಲ್ಲ ಗ್ರಾಮಗಳಿಗೆ ಅನೂಕುಲವಾಗುವಂತೆ ಸಮುದಾಯ ಆರೋಗ್ಯ ಕೇಂದ್ರ ಕನ್ನೂರದಲ್ಲಿ ಸುಸಜ್ಜಿತ ಹೊಸ ಕಟ್ಟಡ ಹೊಂದಿದ್ದರು. 30 ಕಿಲೋಮೀಟರ ದೂರದ ವಿಜಯಪುರದ ಜಿಲ್ಲಾ ಆಸ್ಪತ್ರೆ ಅಥವಾ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯ ಮೋರೆ ಹೊಗುತ್ತಿದ್ದಾರೆ ಆದ ಕಾರಣ ಈ ಎಲ್ಲ ಗ್ರಾಮದ ಉದರದರ್ಶಕ (ಲ್ಯಾಪರೊಸ್ಕೋಪಿಕ್) ಶಸ್ತ್ರಚಿಕಿತ್ಸೆ ಅವಶ್ಯವಿರುವ ಮಹಿಳೆಯರಿಗೆ ಅನುಕೂಲವಾಗುವಂತೆ ಅತಿ ಶೀಘ್ರದಲ್ಲಿ ಉದರದರ್ಶಕ (ಲ್ಯಾಪರೊಸ್ಕೋಪಿಕ್) ಶಸ್ತ್ರಚಿಕಿತ್ಸೆ ಕ್ಯಾಂಪ್ ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಕನ್ನೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳಬೇಕೆಂದು ಈ ವಿಷಯವನ್ನು ಜರೂರು ಪರೀಗಣಿಸಬೇಕೆಂದು ಒತ್ತಾಯಿಸಿದರು.

ವೈದ್ಯರಾದ ಶ್ರೀ ನಾಗೇಂದ್ರಪ್ಪಾ ಸರ್ ಶ್ರೀ ಸಂತೋಷ್ ಶೆಟ್ಟಿ ಸರ್ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವು ಮೇತ್ರಿ, ಬಸುಗೌಡ ಪಾಟೀಲ, ಅಪ್ಪುಗೌಡ್ ಪಾಟೀಲ (ಮಖಣಾಪುರ), ಅಪ್ಪಾಸಾಹೇಬ ಬಂಡಿ, ಚಂದ್ರಕಾ0ತ್ ಶೇರಖಾನೆ, ಶರಣು ಬೆಳ್ಳೂಂಡಗಿ, ತುಕಾರಾಮ ಘೋರ್ಪಡೆ, ಗುರು ಬೆಳ್ಳೂoಡಗಿ, ಮಹಾದೇವ ನಾಗಠಾಣ, ಮಲ್ಲಿಕಾರ್ಜುನ ಪಾಟೀಲ, ಯಲಗೊಂಡಗೌಡ ಬಿರಾದಾರ ಅನಿಲ ನಾಗಠಾಣ, ರಫೀಕ್ ಮುಲ್ಲಾ, ಚೆನ್ನು ತೇಲಿ, ಸಂತೋಷ್ ತಳವಾರ, ಭೀಮಯರಾವ್ ಶಿಂಧೆ, ಸಿದರಾಯ ಪಾಟೀಲ, ಸಯ್ಯದ್ ಪೂಜಾರಿ , ಪ್ರಕಾಶ ಕರಪೆ, ಬಾಬಾಗೌಡ ಪಾಟೀಲ ಇನ್ನೂ ಅನೇಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande