ವಿಷಾನಿಲ, ದೂಳು ದೇಹದ ಸೂಕ್ಷ್ಮ ಕೋಶಗಳನ್ನು ಸಾಯಿಸುತ್ತಿವೆ : ಡಾ: ದೊಡ್ಡಬಸಪ್ಪ
ಕೊಪ್ಪಳ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಬಲ್ಡೋಟ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ 22ನೇ ದಿನದಲ್ಲಿ ಮುಂದುವರಿದ ಧರಣಿಗೆ ಇಂದು ರಾಷ್ಟ್ರಿಯ ಬಸವದಳ ಶ್ರೀಗುರು ಬಸವೇಶ್ವರ ಭಾವಚಿತ್ರ ಸ್ಥಾಪಿಸಿ ಪೂಜೆ ಸಲ್ಲಿಸಿ, ಬಸವ ಭಜನೆ, ಶರಣರ
ವಿಷಾನಿಲ, ದೂಳು ದೇಹದ ಸೂಕ್ಷ್ಮ ಕೋಶಗಳನ್ನು ಸಾಯಿಸುತ್ತಿವೆ - ಡಾ: ದೊಡ್ಡಬಸಪ್ಪ


ವಿಷಾನಿಲ, ದೂಳು ದೇಹದ ಸೂಕ್ಷ್ಮ ಕೋಶಗಳನ್ನು ಸಾಯಿಸುತ್ತಿವೆ - ಡಾ: ದೊಡ್ಡಬಸಪ್ಪ


ವಿಷಾನಿಲ, ದೂಳು ದೇಹದ ಸೂಕ್ಷ್ಮ ಕೋಶಗಳನ್ನು ಸಾಯಿಸುತ್ತಿವೆ - ಡಾ: ದೊಡ್ಡಬಸಪ್ಪ


ವಿಷಾನಿಲ, ದೂಳು ದೇಹದ ಸೂಕ್ಷ್ಮ ಕೋಶಗಳನ್ನು ಸಾಯಿಸುತ್ತಿವೆ - ಡಾ: ದೊಡ್ಡಬಸಪ್ಪ


ಕೊಪ್ಪಳ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಬಲ್ಡೋಟ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ 22ನೇ ದಿನದಲ್ಲಿ ಮುಂದುವರಿದ ಧರಣಿಗೆ ಇಂದು ರಾಷ್ಟ್ರಿಯ ಬಸವದಳ ಶ್ರೀಗುರು ಬಸವೇಶ್ವರ ಭಾವಚಿತ್ರ ಸ್ಥಾಪಿಸಿ ಪೂಜೆ ಸಲ್ಲಿಸಿ, ಬಸವ ಭಜನೆ, ಶರಣರ ವಚನಗಳನ್ನು ವಾಚನ ಮಾಡುವ ಮೂಲಕ ಬೆಂಬಲಿಸಿದರು. ಧರಣಿನಿರತರನ್ನು ಉದ್ದೇಶಿಸಿ ಬಸವ ಧರ್ಮಪೀಠ ಗಣನಾಯಕರಾದ ಕೊರ್ಲಹಳ್ಳಿ ವೀರಣ್ಣ ಲಿಂಗಾಯತ ರವರು 'ನಮ್ಮ ಅಳಿವು ಉಳಿವು ನಮ್ಮ ಕೈಯಲ್ಲಿದೆ, ಕೊಪ್ಪಳ ಪ್ರತಿ ಮನೆಯಿಂದಲೂ ಹೋರಾಟಕ್ಕೆ ಅಣಿಯಾಗಬೇಕು.

ಕಾರ್ಖಾನೆ ಮಾಲಿಕರಿಂದ ಸರಕಾರ ಮತ್ತು ಊರಿನ ಮುಖಂಡರು, ಕಾರ್ಖಾನೆ ಗುತ್ತಿಗೆದಾರರು, ರಾಜಕಾರಣಿಗಳು ಇವರೊಂದಿಗೆ ಶಾಮೀಲಾಗಿ ಹೋರಾಟವನ್ನು ಕುಗ್ಗಿಸುವ ಕೆಲಸ ಮಾಡುತ್ತಿರುವರು ಎಂದು ಸುದ್ದಿ ಇದೆ. ಆದರೆ ಈ ಹೋರಾಟ ಜನಸಾಮಾನ್ಯರಿಂದ ಬಹಳ ಮುಂದಕ್ಕೆ ಸಾಗಲಿದೆ. ನಾವೆಲ್ಲ ಎಚ್ಚರವಹಿಸಬೇಕು, ನಮ್ಮ ನಾಡಿನ ನಡೆದಾಡುವ ದೇವರಾದ ಗವಿಮಠದ ಪೂಜ್ಯರು ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. 'ಈ ಕಾರ್ಖಾನೆ ಮುಂದುವರೆದರೆ ನಾನೇ ಕೊಪ್ಪಳ ಬಿಡುತ್ತೇನೆ' ಈ ಪರಿಸ್ಥಿತಿ ಬರುವ ಮುನ್ನವೇ ನಾವೆಲ್ಲ ಬೀದಿಗಿಳಿದು ಹೋರಾಟ ಮಾಡಿ ನಮ್ಮನ್ನು ನಾವು ಕಾಪಾಡಿಕೊಳ್ಳೋಣ ಬನ್ನಿ ಕೈಜೋಡಿಸಿ' ಎಂದರು.

ಬಸವಶ್ರೀ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನ ಮುಖ್ಯಸ್ಥರಾದ ಡಾ|| ದೊಡ್ಡಬಸಪ್ಪ ಪಾಟೀಲ್ ಮಾತನಾಡಿ, ಕೊಪ್ಪಳ ನಾಗರೀಕನಾಗಿ ನಮ್ಮ ಹೋರಾಟ ಆರೋಗ್ಯ, ಭವಿಷ್ಯಕ್ಕಾಗಿ, ವೈಜ್ಞಾನಿಕವಾಗಿ ಮತ್ತು ಭವಿಷ್ಯದ ನಮ್ಮ ಮಕ್ಕಳಿಗಾಗಿ ಕಾರ್ಖಾನೆಗಳಿಂದ ಬಿಡುವಂತಹ ಅನೇಕ ರಸಾಯನಿಕ ಅನಿಲಗಳು ಅದರಲ್ಲಿ ಸಿಓ, ಎನ್. ಜೀರೋ. ಟೂ, ಎಸ್.ಓ.ಟೂ ಇತರೆ ಅನೆಕ ರಸಾಯನಿಕಗಳು ಜೀವಕ್ಕೆ ಹಾನಿಯುಂಟು ಮಾಡುತ್ತವೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಕೆ.ಬಿ.ಗೋನಾಳ (ಮಲ್ಲಿಕಾರ್ಜುನ), ಮಂಜುನಾಥ ಜಿ. ಗೊಂಡಬಾಳ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ರಾ.ಬ.ದಳ ಜಿಲ್ಲಾಧ್ಯಕ್ಷ ಸತೀಶ ವಿರುಪಾಕ್ಷಪ್ಪ ಮಂಗಳೂರು, ಸುಂಕಪ್ಪ ಅಮರಾಪೂರ, ಲಿಂಗಾಯತ ಧರ್ಮ ಮಹಾಸಭಾದ ಕೊರ್ಲಹಳ್ಳಿ ಈಶ್ವರ, ವಿಜಯಲಕ್ಷ್ಮಿ ಈಶ್ವರ, ರಾಜೇಶ್ವರಿ ರಾಮು ಪೂಜಾರ, ಗಂಗಮ್ಮ ಗೋಸಿ, ರಾ.ಬ.ದಳ ರಾಜೇಶ್ವರಿ ಈ. ಅಂಗಡಿ, ಶೋಭಾ ವಿ. ಕೊರ್ಲಹಳ್ಳಿ, ಶಂಕ್ರಮ್ಮ ಕವಲೂರು, ಶಿಲ್ಪಾ ಗಡಾದ, ಈಶಪ್ರಭು ಅಂಗಡಿ, ಗವಿಸಿದ್ದಪ್ಪ ಗೋಸಿ, ಬಸಪ್ಪ ವದಗನಾಳ, ರಾಮು ಪೂಜಾರ, ಮಖಬೂಲ್ ರಾಯಚೂರು, ಮುಕ್ಕಣ್ಣ ಮೇಸ್ತ್ರಿ ಬಸಾಪುರ, ಮಂಜುನಾಥ ಕವಲೂರು, ದುರಗಪ್ಪ ಕನಕಮನಿ, ಬಸವರಾಜ ಶೀಲವಂತರ, ಮಹಾದೇವಪ್ಪ ಮಾವಿನಮಡು, ಮಹಾಂತೇಶ ಕೊತಬಾಳ, ಬಸವರಾಜ ನರೇಗಲ್ ಮುಂತಾದವರು ಇದ್ದರು. ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರು ಹೋರಾಟಕ್ಕೆ ಸಾಥ್ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande