ಸಿದ್ಧಾಂತ ಶಿಖಾಮಣಿ ಮತ್ತು ವಚನಗಳ ಸ್ಪರ್ಧೆ
ಬಳ್ಳಾರಿ, 21 ನವೆಂಬರ್ (ಹಿ.ಸ.) : ಆ್ಯಂಕರ್ : ವೀರಶೈವ ಲಿಂಗಾಯತ ಸನಾತನ ಧರ್ಮದ ಹೆಚ್ಚಿನ ಅರಿವಿಗಾಗಿ `ಸಿದ್ಧಾಂತ ಶಿಖಾಮಣಿ''ಯ ಎಂಟನೇ ಅಧ್ಯಾಯ ಮತ್ತು ಬಸವಣ್ಣನವರು ಬರೆದಿರುವ ಆಯ್ದ 30 ವಚನಗಳ ಸ್ಪರ್ಧೆಯು ವುಂಕಿ ಮರಿಸಿದ್ದಮ್ಮ ಶಾಲೆಯಲ್ಲಿ ಜನವರಿ 30 ರಂದು ನಡೆಯಲಿದೆ ಎಂದು ವೀರಶ
ಸಿದ್ಧಾಂತ ಶಿಖಾಮಣಿ ಮತ್ತು ವಚನಗಳ ಸ್ಪರ್ಧೆ


ಸಿದ್ಧಾಂತ ಶಿಖಾಮಣಿ ಮತ್ತು ವಚನಗಳ ಸ್ಪರ್ಧೆ


ಬಳ್ಳಾರಿ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ವೀರಶೈವ ಲಿಂಗಾಯತ ಸನಾತನ ಧರ್ಮದ ಹೆಚ್ಚಿನ ಅರಿವಿಗಾಗಿ `ಸಿದ್ಧಾಂತ ಶಿಖಾಮಣಿ'ಯ ಎಂಟನೇ ಅಧ್ಯಾಯ ಮತ್ತು ಬಸವಣ್ಣನವರು ಬರೆದಿರುವ ಆಯ್ದ 30 ವಚನಗಳ ಸ್ಪರ್ಧೆಯು ವುಂಕಿ ಮರಿಸಿದ್ದಮ್ಮ ಶಾಲೆಯಲ್ಲಿ ಜನವರಿ 30 ರಂದು ನಡೆಯಲಿದೆ ಎಂದು ವೀರಶೈವ ಲಿಂಗಾಯಿತ ಸಮಾಜದ ಸಂಚಾಲಕ ಎಂ. ಚಂದ್ರಮೌಳಿ ಅವರು ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದ ಅವರು, ವೀರಶೈವ ಲಿಂಗಾಯತ ಸನಾತನ ಧರ್ಮದ ಉಳಿವು ಮತ್ತು ತಿಳುವಳಿಕೆಗಾಗಿ ಈ ಮೂಲಕ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು - ಆದರ್ಶಗಳನ್ನು ಮೂಡಿಸುವ ಪ್ರಯತ್ನ ನಡೆದಿದೆ. ಆಸಕ್ತರು ಎರೆಡೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಪ್ರತಿ ಸ್ಪರ್ಧೆಯಿಂದ ಆಯ್ಕೆಯಾದ ತಲಾ 10 ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಪಾಲಕರು ಹಾಗೂ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಶ್ರೀ ರೇಣುಕಾ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.

ವೀರಶೈವ ಲಿಂಗಾಯಿತ ಸಮಾಜದ ಮುಖಂಡರುಗಳಾದ ಎಸ್. ಮಲ್ಲನಗೌಡ, ಅಂಗಡಿ ಲಿಂಗೇಶ, ಎರ್ರಿಸ್ವಾಮಿ ಬೂದಿಹಾಳ್ ಮಠ, ವಕೀಲ ನೀಲನಗೌಡ, ಎಚ್.ಕೆ. ಗೌರಿಶಂಕರ, ವೀರೇಶ್ ಗಂಗಾವತಿ, ಗೋನಾಳ್ ಎಂ. ಮಂಜುನಾಥ್, ಸುರೇಶ್ ಹೂಗಾರ್, ಎಚ್.ಎಂ. ಆರಾಧ್ಯ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವರಗಳಿಗಾಗಿ : ಚಂದ್ರಮೌಳಿ, ಸಂಚಾಲಕರು, ವೀರಶೈವ ಲಿಂಗಾಯಿತ ಸಮಾಜ, ಮೊಬೈಲ್ ಸಂಖ್ಯೆ : 99860 81469 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande