ಕೊಪ್ಪಳ : ಎರಡು ವರ್ಷದಲ್ಲಿ 40 ಬಾಲ ಕಾರ್ಮಿಕರ ರಕ್ಷಣೆ, ಪುನರ್ವಸತಿ
ಕೊಪ್ಪಳ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲು ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, 2024-25ನೇ ಮತ್ತು 2025-26ನೇ ಸಾಲಿನಲ್ಲಿ ನಡೆಸಿದ ಬಾಲಕಾರ್ಮಿಕ ದಾಳಿ, ತಪಾಸಣೆ ಕಾ
ಕೊಪ್ಪಳ : ಎರಡು ವರ್ಷದಲ್ಲಿ 40 ಬಾಲ ಕಾರ್ಮಿಕರ ರಕ್ಷಣೆ: ಪುನರ್ವಸತಿ


ಕೊಪ್ಪಳ : ಎರಡು ವರ್ಷದಲ್ಲಿ 40 ಬಾಲ ಕಾರ್ಮಿಕರ ರಕ್ಷಣೆ: ಪುನರ್ವಸತಿ


ಕೊಪ್ಪಳ : ಎರಡು ವರ್ಷದಲ್ಲಿ 40 ಬಾಲ ಕಾರ್ಮಿಕರ ರಕ್ಷಣೆ: ಪುನರ್ವಸತಿ


ಕೊಪ್ಪಳ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲು ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ವತಿಯಿಂದ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, 2024-25ನೇ ಮತ್ತು 2025-26ನೇ ಸಾಲಿನಲ್ಲಿ ನಡೆಸಿದ ಬಾಲಕಾರ್ಮಿಕ ದಾಳಿ, ತಪಾಸಣೆ ಕಾರ್ಯಾಚರಣೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಒಟ್ಟು 40 ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ರಕ್ಷಣೆ ಮಾಡಿ, ಆ ಮಕ್ಕಳನ್ನು ಪುನರ್ವಸತಿಗೊಳಿಸಿದೆ.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ಕೊಪ್ಪಳ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳ ಸಹಯೋಗದೊಂದಿಗೆ ಕೈಗೊಳ್ಳಲಾದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸುವ ಕಾರ್ಯಾಚರಣೆಯಲ್ಲಿ 6 ಬಾಲ ಕಾರ್ಮಿಕ ಮಕ್ಕಳು ಹಾಗೂ 21 ಕಿಶೋರ ಕಾರ್ಮಿಕ ಮಕ್ಕಳು ಸೇರಿ ಒಟ್ಟು 27 ಮಕ್ಕಳು ಪತ್ತೆ ಮಾಡಲಾಗಿದ್ದು, ಈ ಎಲ್ಲಾ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮುಖಾಂತರ ಪುನರ್ವಸತಿಗೊಳಿಸಲಾಗಿದೆ. ಹಾಗೂ ಇದೇ ವರ್ಷದಲ್ಲಿ ಇಬ್ರಾಹಿಂ ಖಾಲೀದ್ ಮಾಲೀಕರು, ಮೆ|| ನ್ಯೂ ಇಂಡಿಯನ್ ಅಲ್ಯೂಮಿನಿಯಂ ಶಾಪ್, ಕಿನ್ನಾಳ ರೋಡ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ನೂರಮಹ್ಮದ್ ತಂದೆ ಮಹ್ಮದ್ ರಫಿ ಸಾ|| ನಿರ್ಮಿತಿ ಕೇಂದ್ರ, ತಾ||ಜಿ|| ಕೊಪ್ಪಳ. 2) ಮಹಮ್ಮದ್ ರಿಯಾನ್ ತಂದೆ ರಜಾಕ್, ಸಾ||ಮೈಬೂಬ ನಗರ, ನಿರ್ಮಿತಿ ಕೇಂದ್ರ, ಕೊಪ್ಪಳ 3) ನವಾಜ ತಂದೆ ಜಾಗೀರ ಮುಖಂದರ್, ಸಾ|| ದಿಡ್ಡಿಕೇರಾ, ತಾ||ಜಿ|| ಕೊಪ್ಪಳ 4) ಮಫೀದ್ ಹುಸೇನ್ ತಂದೆ ನಸೀಮ್, ಸಾ|| ಪಲ್ಟನ್ ಓಣಿ, ತಾ||ಜಿ||ಕೊಪ್ಪಳ 5) ಮಹಮ್ಮದ್ ಸಮಿ ತಂದೆ ಮಹ್ಮದ್ ರಫೀ ಚೌತಾಯಿ, ಸಾ|| ಹಮಾಲರ ಕಾಲೋನಿ, ತಾ||ಜಿ|| ಕೊಪ್ಪಳ, ನಾಗರಾಜ ಮಾಲೀಕರು, ಮೆ: ಪ್ರೈವುಡ್ ಕಟಿಂಗ್, ಕೆ.ಇ.ಬಿ ರೋಡ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಮಹ್ಮದ್ ಹುಸೇನ್ ತಂದೆ ಅಬ್ದುಲ್ ಲತೀಫ್ ಸಾ||ದಿಡ್ಡಿಕೇರಿ ಓಣಿ, ತಾ||ಜಿ||ಕೊಪ್ಪಳ, ಗೌಸ್ ಹಿರೇಮನಿ ಮಾಲೀಕರು, ಮರ್ದಾನ ವೆಲ್ಡಿಂಗ್ ವಕ್ರ್ಸ್, ಪಾಂಡುರಂಗ ದೇವಸ್ಥಾನ ಹತ್ತಿರ, ತಾ||ಜಿ|| ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಸೈಯದ್ ತೌಸಿಫ್ ಹುಸೇನ್ ತಂದೆ ಸೈಯದ್ ಆಸಿಫ್ ಹುಸೇನ್, ಸಾ|| ಹಟಗಾರ ಪೇಟೆ, ತಾ||ಜಿ|| ಕೊಪ್ಪಳ, ಸಿದ್ದಲಿಂಗೇಶ್ವರ ಪಾಟೀಲ್ ಮಾಲೀಕರು, ಪಾಟೀಲ್ ಹೋಂಡಾ ಗ್ಯಾರೇಜ್, ಗವಿಮಠ ರಸ್ತೆ, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಹನುಮಂತಪ್ಪ ತಂದೆ ಮುಕ್ಕಣ್ಣ ಕೋರಿ, ತಾ||ಜಿ||ಕೊಪ್ಪಳ, ಮಾಲೀಕರು ಶ್ರೀ ಜಾಡೆಪ್ಪ ತಂದೆ ಭೀರಪ್ಪ ಸುಣಧೋಳಿ. ಕುರಿ ಕಾಯುವ ಕೆಲಸ ಕೊಪ್ಪಳ ಎಂಬಲ್ಲಿ 1) ಸಂತೋಷ ತಂದೆ ಬಸವರಾಜ ಕೊಡ್ಲಿ, ಸಾ|| ಹೊಳಿಹೊಸೂರು, ತಾ|| ಗೋಕಾಕ, ಜಿ|| ಬೆಳಗಾವಿ. ಮಕ್ಕಳನ್ನು ನೇಮಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ 5 ಜನ ಮಾಲೀಕರುಗಳ ವಿರುದ್ಧ ನ್ಯಾಯಾಲಯದಲ್ಲಿ 5 ಮೊಕದ್ದಮೆ ದಾಖಲಿಸಲಾಗಿರುತ್ತದೆ. ಈ ಎಲ್ಲಾ ಪ್ರಕರಣಗಳು ವಿಚಾರಣೆ ಹಂತದಲ್ಲಿರುತ್ತವೆ ಹಾಗೂ ಮಾಲೀಕರಿಂದ ಒಂದು ಪ್ರಕರಣದಲ್ಲಿ 20,000 ರೂ.ಗಳ ಕಾರ್ಪಸ್ ಫಂಡ್ ವಸೂಲಿ ಮಾಡಲಾಗಿದೆ.

ಅದರಂತೆ, 2025-26ನೇ ಸಾಲಿನಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸುವ ಕಾರ್ಯಾಚರಣೆಯಲ್ಲಿ 3 ಬಾಲಕಾರ್ಮಿಕ ಮಕ್ಕಳು ಹಾಗೂ 10 ಕಿಶೋರ ಕಾರ್ಮಿಕ ಮಕ್ಕಳು ಪತ್ತೆಯಾಗಿದ್ದು, ಒಟ್ಟು 13 ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮುಖಾಂತರ ಪುನರ್ವಸತಿಗೊಳಿಸಲಾಗಿದೆ. ಹಾಗೂ ಇದೇ ವರ್ಷದಲ್ಲಿ ಮಕ್ಕಳನ್ನು ನೇಮಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ ಸೈಯದ್ ಮಿರಜವಲಿ ತಂದೆ ಬಾಬುಸಾಬ ಹಿರೇಮನಿ, ಮೆ:ಹೆಚ್.ಕೆ.ಜಿ.ಎನ್ ಸರ್ವಿಸ್ ಸೆಂಟರ್, ಇರಕಲ್ಲಗಡಾ ಎಂಬ ಸಂಸ್ಥೆಯಲ್ಲಿ 1) ಪ್ರೇಮಕುಮಾರ ತಂದೆ ಯಲ್ಲಪ್ಪ ತಳವಾರ ಸಾ||ಚಾಮಲಾಪುರ, ತಾ||ಜಿ||ಕೊಪ್ಪಳ, ಮಹ್ಮದ್ ಕೊತ್ವಾಲ್ ಮಾಲೀಕರು, ಮೆ|| ರಿಜ್ವಾನ್ ಸರ್ವಿಸ್ ವಕ್ರ್ಸ್, ಸಾ|| ಇರಕಲ್ಲಗಡಾ, ಕುಷ್ಟಗಿ ರಸ್ತೆ, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಖಲಂದರ ಬಾಬಾ ತಂದೆ ಖಾಸಿಂಸಾಬ ಮಂಗಳಾಪುರ, ಸಾ||ಇರಕಲ್ಲಗಡಾ, ತಾ||ಜಿ||ಕೊಪ್ಪಳ, ಮೆ|| ಅಕ್ಬರ್ ಆಟೋ ವಕ್ರ್ಸ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಸೈಯದ್ ಫರ್ಹಾನ್ ಖಲಂದರ ತಂದೆ ಖಾಸಿಂ ಅಲಿ ಖಾದ್ರಿ ಸಾ|| ನಿರ್ಮಿತಿ ಕೇಂದ್ರ, ತಾ||ಜಿ|| ಕೊಪ್ಪಳ, ಮೆ|| ಆಸೀಫ್ ಸರ್ವಿಸ್ ಸೆಂಟರ್, ಹೈದರ ಅಲಿ ಸರ್ಕಲ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಅಲ್ಲಾಭಕ್ಷಿ ತಂದೆ ಮರ್ದಾನ್ ಅಲಿ ಸಾ||ಕುರುಬರ ಓಣಿ, ತಾ||ಜಿ|| ಕೊಪ್ಪಳ, ಶಿವನಗೌಡ ಪಕೀರಗೌಡ ಪಾಟೀಲ ಮಾಲೀಕರು, ಮೆ|| ಬೆಂಗಳೂರು ಬೇಕರಿ, ಪಾಂಡುರಂಗ ಗುಡಿ ಹತ್ತಿರ, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಗ್ಯಾನಪ್ಪ ತಂದೆ ಹನುಮಪ್ಪ ಮೇಟಿ ಸಾ|| ಲಾಚನಕೇರಿ, ತಾ||ಜಿ|| ಕೊಪ್ಪಳ 2) ಪ್ರವೀಣ ತಂದೆ ಬೀರಪ್ಪ ಕುರಿ, ಸಾ||ಬಹದ್ದೂರಬಂಡಿ, ತಾ||ಜಿ||ಕೊಪ್ಪಳ, ಮಲ್ಲಿಕಾರ್ಜುನ ಗಡಾದ ಮಾಲೀಕರು, ಮೆ|| ಬಸವೇಶ್ವರ ಕಿರಾಣಿ ಸ್ಟೋರ್, ಜವಾಹರ ರೋಡ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಅಜಯಕುಮಾರ ತಂದೆ ಹಾಲಪ್ಪ ಆದೋನಿ ಸಾ|| ಕುಟಗನಹಳ್ಳಿ, ತಾ||ಜಿ|| ಕೊಪ್ಪಳ, ಎಸ್.ಆರ್.ಸಿ ಕೆಮಿಕಲ್ಸ್, ಸಾ|| ಅಲ್ಲಾನಗರ, ತಾ||ಜಿ|| ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಸಚಿನ್ ತಂದೆ ಬ್ರಿಜ್‍ಕಿಶೋರ ಸಹಾನಿ, ಸಾ|| ಧಾರಾಪುರ, ತಾ||ಜಿ|| ಮುಜಾಫರಪುರ, ರಾಜ್ಯ|| ಬಿಹಾರ 2) ರಾಜೀವ ತಂದೆ ಜಯರಾಮ ಸಹಾನಿ, ಸಾ|| ಟೆಂಗರಾರಿ ತಾ||ಜಿ|| ಮುಜಾಫರಪುರ, ರಾಜ್ಯ|| ಬಿಹಾರ, ಶ್ರೀ ಹುಲಿಗೆಮ್ಮದೇವಿ ಇಂಡಸ್ಟ್ರೀಸ್, ಭೀಮನೂರು ರಸ್ತೆ, ಗಿಣಿಗೇರಾ, ತಾ||ಜಿ|| ಕೊಪ್ಪಳ ಎಂಬ ಸಂಸ್ಥೆಯಲ್ಲಿ 1) ಮಿಲನ್ ಗೌರ್ ತಂದೆ ಬಿಷ್ಣು ಗೌರ್ ಸಾ|| ಮಜಬತ್, ಜಿಲ್ಲೆ|| ಉದಳಗುರಿ, ರಾಜ್ಯ|| ಆಸ್ಸಾಂ, ಎಂಬ ಮಕ್ಕಳು ಪತ್ತೆಯಾಗಿದ್ದು, ಮಕ್ಕಳನ್ನು ನೇಮಿಸಿಕೊಂಡ ಮಾಲೀಕರುಗಳ ವಿರುದ್ಧ ನ್ಯಾಯಾಲಯದಲ್ಲಿ 8 ಮೊಕದ್ದಮೆ ದಾಖಲಿಸಲಾಗಿರುತ್ತದೆ. ಈ ಎಲ್ಲಾ ಪ್ರಕರಣಗಳು ನ್ಯಾಯಾಲದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ ಹಾಗೂ ಮಾಲೀಕರಿಂದ ಎರಡು ಪ್ರಕರಣದಲ್ಲಿ 1,20,000 ರೂ. ಗಳ ಕಾರ್ಪಸ್ ಫಂಡ್ ವಸೂಲಿ ಮಾಡಲಾಗಿರುತ್ತದೆ.

ಮಕ್ಕಳಿಗೆ ಬ್ಯಾಂಕ್ ಠೇವಣಿ ಬಾಂಡ್ ವಿತರಣೆ: ಮಾಲೀಕರಿಂದ ವಸೂಲಾದ 20,000 ರೂ.ಗಳ ಕಾರ್ಪಸ್ ಫಂಡ್ ಹಾಗೂ ಸರ್ಕಾರದ ವಂತಿಕೆ 15,000 ರೂ. ಸೇರಿ ಒಟ್ಟು ಪ್ರತಿ ಮಗುವಿಗೆ 35,000 ರೂ.ಗಳಂತೆ ಬ್ಯಾಂಕಿನಲ್ಲಿ ಠೇವಣಿ ಮಾಡಿ ಬಾಂಡ್‍ಗಳನ್ನು 7 ಮಕ್ಕಳಿಗೆ ಕಾರ್ಮಿಕ ಅಧಿಕಾರಿಗಳು ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಮೂಲಕ ಇತ್ತೀಚೆಗೆ ವಿತರಿಸಲಾಗಿದೆ.

ಹಾಗಾಗಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಬಳಕೆಯೂ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಪದ್ಧತಿಯು ಮಕ್ಕಳನ್ನು ದೈಹಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣದ ಹಾಗೂ ಸರ್ವಾಂಗಿಣ ಪ್ರಗತಿಯ ಅವಕಾಶಗಳನ್ನು ತಡೆಗಟ್ಟುತ್ತದೆ. ಶಿಕ್ಷಣ ವಂಚಿತ ಹಾಗೂ ದುಡಿಮೆಯಲ್ಲಿ ತೊಡಗಿರುವ ಈ ಮಕ್ಕಳನ್ನು ರಾಷ್ಟ್ರದ ಮುಖ್ಯವಾಹಿನಿಗೆ ಕರೆ ತರಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸಬೇಕಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿ ನಾಗರೀಕನ ಕರ್ತವ್ಯವಾಗಿರುತ್ತದೆ. ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಪ್ರಮುಖ ಪ್ರಾವಧಾನಗಳು ಇಂತಿವೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರಂಟ್ ರಹಿತ ಬಂದಿಸಬಹುದಾದ) ಅಪರಾಧವಾಗಿದೆ.

ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಂತೆ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 20,000 ರಿಂದ 50,000 ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ ರೂ. 10,000 ಗಳ ದಂಡವನ್ನು ವಿಧಿಸಬಹುದಾಗಿರುತ್ತದೆ.

ಭಾರತದ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ 465/1986 ರಲ್ಲಿ ನೀಡಿರುವ ನಿರ್ದೇಶನದನ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ ರೂ. 20,000 ಗಳನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಬಾಲಕಾರ್ಮಿಕ ಪುನರ್ವಸತಿ ಕಲ್ಯಾಣ ನಿಧಿಗೆ ಪಾವತಿಸಬೇಕಾಗಿರುತ್ತದೆ. ಹಾಗಾಗಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರು ಕಂಡು ಬಂದಲ್ಲಿ ಕಾರ್ಮಿಕ ನೀರಿಕ್ಷಕರು ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಗೆ ಹಾಗೂ ಮಕ್ಕಳ ಸಹಾಯವಾಣಿ 1098 ಅಥವಾ 112 ಗೆ ಕರೆಮಾಡಿ ಮಾಹಿತಿ ನೀಡುವಂತೆ ಕೊಪ್ಪಳ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande