
ಬೆಂಗಳೂರು, 22 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಳಂದೂರು ರೋಡ್ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಈ ಕೆಳಕಂಡ ರೈಲು ಸೇವೆಗಳನ್ನು ಅವುಗಳ ಮುಂದೆ ನೀಡಲಾಗಿರುವ ವಿವರದಂತೆ ರದ್ದುಗೊಳಿಸಲಾಗುವುದು/ ಮಾರ್ಗ ಬದಲಾವಣೆ ಮಾಡಲಾಗುವುದು/ ನಿಯಂತ್ರಿಸಲಾಗುವುದು :
ರೈಲುಗಳ ರದ್ದತಿ :
1. ದಿನಾಂಕ 25.11.2025 ರಂದು ರೈಲು ಸಂಖ್ಯೆ 66563 ಯಶವಂತಪುರ- ಹೊಸೂರು ಮೆಮು, ರೈಲು ಸಂಖ್ಯೆ 66585 ಯಶವಂತಪುರ- ಹೊಸೂರು ಮೆಮು ಮತ್ತು ರೈಲು ಸಂಖ್ಯೆ 06591 ಯಶವಂತಪುರ- ಹೊಸೂರು ಮೆಮು ಸೇವೆಗಳನ್ನು ರದ್ದುಗೊಳಿಸಲಾಗುವುದು.
2. ದಿನಾಂಕ 25.11.2025 ರಂದು ರೈಲು ಸಂಖ್ಯೆ 66564 ಹೊಸೂರು – ಯಶವಂತಪುರ ಮೆಮು, ರೈಲು ಸಂಖ್ಯೆ 66586 ಹೊಸೂರು – ಯಶವಂತಪುರ ಮೆಮು ಮತ್ತು ರೈಲು ಸಂಖ್ಯೆ 06592 ಹೊಸೂರು – ಯಶವಂತಪುರ ಮೆಮು ಸೇವೆಗಳನ್ನು ರದ್ದುಗೊಳಿಸಲಾಗುವುದು.
ರೈಲುಗಳ ಮಾರ್ಗ ಬದಲಾವಣೆ :
1. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 12677 ಎಸ್.ಎಂ.ವಿ.ಟಿ. ಬೆಂಗಳೂರು – ಎರ್ನಾಕುಲಂ ಎಕ್ಸ್ಪ್ರೆಸ್ ರೈಲು ಎಸ್.ಎಂ.ವಿ.ಟಿ. ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟ್ಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಕಾರ್ಮೆಲರಾಮ್, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳ ನಿಲುಗಡೆಯು ಇರುವುದಿಲ್ಲ.
2. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 16529 ಎಸ್.ಎಂ.ವಿ.ಟಿ. ಬೆಂಗಳೂರು – ಕಾರೈಕ್ಕಾಲ್ ಎಕ್ಸ್ಪ್ರೆಸ್ ರೈಲು ಎಸ್.ಎಂ.ವಿ.ಟಿ. ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟ್ಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಬೆಳಂದೂರು ರೋಡ್, ಕಾರ್ಮೆಲರಾಮ್, ಹೀಲಲಿಗೆ, ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯನಾಗತುನೈ, ರಾಯಕ್ಕೋಟ್ಟೈ, ಮಾರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಸಿವಾಡಿ, ಮುತ್ತಂಪಟ್ಟಿ, ತೋಪ್ಪೂರು, ಕಾರುವಳ್ಳಿ, ಸೆಮ್ಮಂದಪಟ್ಟಿ ಮತ್ತು ಓಮಲೂರ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
3. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 20642 ಕೊಯಮತ್ತೂರು- ಬೆಂಗಳೂರು ಕಂಟೋನ್ಮೆಂಟ್ ವಂದೇಭಾರತ್ ಎಕ್ಸ್ ಪ್ರೆಸ್ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟ್ಟೈ ಎ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮಾರ್ಗವಾಗಿ ಸಂಚರಿಸಲಿದ್ದು ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
4. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 20641 ಬೆಂಗಳೂರು ಕಂಟೋನ್ಮೆಂಟ್ – ಕೊಯಮತ್ತೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚರಿಸಲಿದ್ದು ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
5. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 11014 ಕೊಯಮತ್ತೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟ್ಟೈ ಎ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ಮಾರ್ಗವಾಗಿ ಸಂಚರಿಸಲಿದ್ದು ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
6. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 16211 ಯಶವಂತಪುರ – ಸೇಲಂ ಎಕ್ಸ್ ಪ್ರೆಸ್ ರೈಲು ಹೆಬ್ಬಾಳ, ಬಾಣಸವಾಡಿ, ಎಸ್.ಎಂ.ವಿ.ಟಿ. ಬೆಂಗಳೂರು, ಕೃಷ್ಣರಾಜಪುರಂ, ಜೋಲಾರಪೇಟ್ಟೈ ಎ ಕ್ಯಾಬಿನ್, ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಬೆಳಂದೂರು ರೋಡ್, ಕಾರ್ಮೆಲರಾಂ, ಹೀಲಲಿಗೆ ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯನಾಗತುನೈ, ರಾಯಕ್ಕೋಟ್ಟೈ, ಮಾರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಸಿವಾಡಿ, ಮುತ್ತಂಪಟ್ಟಿ, ತೋಪ್ಪೂರು, ಕಾರುವಳ್ಳಿ, ಸೆಮ್ಮಂದಪಟ್ಟಿ ಮತ್ತು ಓಮಲೂರ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
7. ದಿನಾಂಕ 25.11.2025ರಂದು ಹೊರಡುವ ರೈಲು ಸಂಖ್ಯೆ 16212 ಸೇಲಂ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಸೇಲಂ, ಜೋಲಾರಪೇಟ್ಟೈ ಎ ಕ್ಯಾಬಿನ್, ಕೃಷ್ಣರಾಜಪುರಂ, ಎಸ್.ಎಂ.ವಿ.ಟಿ. ಬೆಂಗಳೂರು, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿರುವುದರಿಂದ ಓಮಲೂರು, ಸೆಮ್ಮಂದಪಟ್ಟಿ, ಕಾರುವಳ್ಳಿ, ತೋಪ್ಫೂರು, ಮುತ್ತಂಪಟ್ಟಿ, ಸಿವಾಡಿ, ಧರ್ಮಪುರಿ, ಪಾಲಕ್ಕೋಡು, ಮಾರಂಡಹಳ್ಳಿ, ರಾಯಕ್ಕೋಟ್ಟೈ, ಪೆರಿಯನಾಗತುನೈ, ಕೆಲಮಂಗಲಂ, ಹೊಸೂರು, ಆನೇಕಲ್ ರೋಡ್, ಹೀಲಲಿಗೆ, ಕಾರ್ಮೆಲರಾಂ ಮತ್ತು ಬೆಳಂದೂರು ರೋಡ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
ರೈಲುಗಳ ನಿಯಂತ್ರಣ :
1. ದಿನಾಂಕ 24.11.2025ರಂದು ಹೊರಡುವ ರೈಲು ಸಂಖ್ಯೆ 11022 ತಿರುನೆಲ್ವೇಲಿ- ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ.ಎನ್.ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa