
ಗಂಗಾವತಿ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಬ್ರಿಡ್ಜ್ ಹತ್ತಿರದ ತುಂಗಭದ್ರ ಎಡದಂಡೆ ಕಾಲುವೆಯಿಂದ ಕಾಣೆಯಾದ ಕೊಪ್ಪಳ ನಗರದ ಮಿಟ್ಟಿಕೇರಿ ಓಣಿಯ ನಿವಾಸಿ ಮಂಜುನಾಥ ತಂದೆ ದೇವಪ್ಪ ಪಲ್ಲೇದ ಎಂಬ ವ್ಯಕ್ತಿಯ ಪತ್ತೆಗೆ ಸಹಕರಿಸುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊಪ್ಪಳ ನಗರದ ಮಿಟ್ಟಿಕೇರಿ ಓಣಿಯ ನಿವಾಸಿ ಮಂಜುನಾಥ ತಂದೆ ದೇವಪ್ಪ ಪಲ್ಲೇದ ಎಂಬ 34 ವರ್ಷದ ವ್ಯಕ್ತಿಯು ಇದೇ ನವೆಂಬರ್ 8 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಬ್ರಿಡ್ಜ್ ಹತ್ತಿರದ ತುಂಗಭದ್ರ ಎಡದಂಡೆ ಕಾಲುವೆಯಲ್ಲಿ ಈಜಾಡಲೆಂದು ಹೋಗಿದ್ದಾಗ ಕಾಲೂವೆಯಲ್ಲಿ ಹಾರಿದವರು ವಾಪಸ್ ಮೇಲೆ ಎದ್ದು ಬಂದಿರುವುದಿಲ್ಲಾ ಎಂದು ಪಿರ್ಯಾದಿದಾರರು ಗಾಬರಿಯಾಗಿ ದೂರು ನೀಡಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 304/2025 ಕಲಂ ಮನುಷ್ಯ ಕಾಣೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿರುತ್ತದೆ. ಕಾಣೆಯಾದ ವ್ಯಕ್ತಿಯನ್ನು ಈ ವರೆಗೆ ಕಾಲುವೆಯಲ್ಲಿ ಹುಡುಕಾಡಿದ್ದು, ಎಲ್ಲಿಯೂ ಮಂಜುನಾಥನು ಸಿಕ್ಕಿರುವುದಿಲ್ಲ.
ವ್ಯಕ್ತಿಯ ಚಹರೆ : ಕಾಣೆಯಾದ ವ್ಯಕ್ತಿಯು ಸದೃಡ ಮೈಕಟ್ಟು, ಕೆಂಪು ಮೈ ಬಣ್ಣ, ದುಂಡು ಮುಖ ಹೋಂದಿದ್ದು, 5.7 ಫೀಟ್ ಎತ್ತರ ಇದ್ದು, ಕಪ್ಪು ಕೂದಲು ಇರುತ್ತದೆ. ಕನ್ನಡ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ನೀರಿನಲ್ಲಿ ಬಿಳುವಾಗ ಅಂಡರ ವೇರ್ ಮಾತ್ರ ಧರಿಸಿದ್ದರು.
ಕಾಣೆಯಾದ ಈ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಹತ್ತಿರದ ಪೋಲಿಸ್ ಠಾಣೆ ಅಥವಾ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್