ಮಾನಸಿಕ ಅಸ್ವಸ್ಥತೆ ಹೊಂದಿರುವ ನಿರಾಶ್ರಿತರ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರ ಸ್ಥಾಪನೆ
ಗದಗ, 21 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ನಿರಾಶ್ರಿತರಿಗೆ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರವನ್ನು ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ ಮಲ್ಲಸಮುದ್ರ ಗದಗದಲ್ಲಿ ಕೊಠಡಿ ಸಂಖ್ಯೆ: 232ರಲ್ಲಿ ಸ್ಥಾಪನೆಗೊಂಡಿದೆ.
ಫೋಟೋ


ಫೋಟೋ


ಗದಗ, 21 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ನಿರಾಶ್ರಿತರಿಗೆ ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರವನ್ನು ಕೆ.ಎಚ್.ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ ಮಲ್ಲಸಮುದ್ರ ಗದಗದಲ್ಲಿ ಕೊಠಡಿ ಸಂಖ್ಯೆ: 232ರಲ್ಲಿ ಸ್ಥಾಪನೆಗೊಂಡಿದೆ.

ಇದೊಂದು ಕರ್ನಾಟಕ ಸರ್ಕಾರ ಹಾಗೂ ನಿಮ್ಹಾನ್ಸ್ ಸಂಸ್ಥೆ ಆಲದಮರ ಫೌಂಡೇಶನ್, ಸಾರಥಿ ಸಂಸ್ಥೆ ಹಿರೇಹಂದಿಗೋಳ, ಗದಗ ಇವರ ಸಹಯೋಗದೊಂದಿಗೆ ಉಚಿತವಾಗಿ ಮಾನಸಿಕವಾಗಿ ಬಳಲುತ್ತಿರುವ ಬೀದಿಗಳಲ್ಲಿ ಗುರಿಯಿಲ್ಲದೆ ಅಲೆದಾಡುತ್ತಿರುವ ನಿರಾಶ್ರಿತರಿಗಾಗಿ ತುರ್ತುಚಿಕಿತ್ಸೆಯನ್ನು ಹಾಗೂ ಅಸ್ವಸ್ಥತೆಗೊಂಡಿರುವಂತಹ ರೋಗಿಗಳಿಗಾಗಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ಮನೋವೈದ್ಯರಿಂದ ನೀಡಲಾಗುವುದು. ಮತ್ತು ಗುಣಮುಖವಾಗುವರೆಗೂ ಉಚಿತ ಊಟ ಹಾಗೂ ಆರೈಕೆ ಔಷದೋಪಚಾರವನ್ನು ನೀಡಲಾಗುವುದು ಗುಣಮುಖ ಹೊಂದಿದವರನ್ನು ವಿಳಾಸ ಹಾಗೂ ಸಂಬ0ಧಿಕರ ಮಾಹಿತಿಯನ್ನು ಪಡೆದು ಅವರಲ್ಲಿ ತಲುಪಲು ನೇರವಾಗುವುದಕ್ಕೆ ಈ ಕೇಂದ್ರ ಸಹಾಯವನ್ನು ಮಾಡಲಾಗುವುದು.

ಗದಗ ಜಿಲ್ಲೆಯಲ್ಲಿ ತುರ್ತು ಚಿಕಿತ್ಸೆ ಹಾಗೂ ಆರೈಕೆ ಕೇಂದ್ರ ಸ್ಥಾಪನೆಗೊಂಡಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande