
ಬೆಲೆಮ್, 20 ನವೆಂಬರ್ (ಹಿ.ಸ.) :
ಆ್ಯಂಕರ್ : ಜಾಗತಿಕ ಸಮಾನ ಹವಾಮಾನ ಪರಿಹಾರಗಳಿಗೆ ಜೆಸಿಎಂ
ಪ್ರಮುಖ ಸಾಧನವೆಂದು ಭಾರತವು COP-30 ಸಮ್ಮೇಳನದಲ್ಲಿ ತಿಳಿಸಿದೆ.
ಬ್ರೆಜಿಲ್‌ನ ಬೆಲೆಮ್ ನಲ್ಲಿ ಜಪಾನ್ ಪರಿಸರ ಸಚಿವಾಲಯ ಆಯೋಜಿಸಿದ 11ನೇ ಜೆಸಿಎಂ ಪಾಲುದಾರ ರಾಷ್ಟ್ರಗಳ ಸಭೆಯಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮಾತನಾಡಿ, ಜೆಸಿಎಂ ಭಾರತ–ಜಪಾನ್ ತಾಂತ್ರಿಕ ಸಹಕಾರವನ್ನು ಬಲಪಡಿಸುವುದರ ಜೊತೆಗೆ, ಭಾರತಕ್ಕೆ ಕಡಿಮೆ-ಹೊರಸೂಸುವಿಕೆ ಅಭಿವೃದ್ಧಿ ಗುರಿ ಸಾಧನೆಗೆ ನೆರವಾಗುತ್ತದೆ ಎಂದರು.
ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಜೈವಿಕ ಅನಿಲ, ಉಕ್ಕು–ಸಿಮೆಂಟ್ ಸೇರಿದಂತೆ ಹಲವಾರು ಪ್ರಮುಖ ವಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಜಾರಿಗೊಳಿಸಲು ಜೆಸಿಎಂ ಸಹಾಯ ಮಾಡಲಿದೆ ಎಂದರು.
ಸಭೆಯಲ್ಲಿ ಜಪಾನ್ ಸಚಿವ ಹಿರೋಟಕ ಇಶಿಹರಾ, ಜೆಸಿಎಂ ಪಾಲುದಾರ ರಾಷ್ಟ್ರಗಳು 31 ಕ್ಕೆ ಹೆಚ್ಚಿದ್ದು, ಆರ್ಟಿಕಲ್-6 ಅಡಿಯಲ್ಲಿ 280 ಕ್ಕೂ ಹೆಚ್ಚು ಯೋಜನೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa