ಇನ್ ಕ್ಯೂಬಿಷನ್ ಯೋಜನೆ : ನಾಳೆ ತಳಕಲ್‌ನಲ್ಲಿ ಒಂದು ದಿನದ ಅರಿವು ಕಾರ್ಯಗಾರ
ಎಂಜಿನಿಯರಿಂಗ್
ಇನ್ ಕ್ಯೂಬಿಷನ್ ಯೋಜನೆ : ನಾಳೆ ತಳಕಲ್‌ನಲ್ಲಿ ಒಂದು ದಿನದ ಅರಿವು ಕಾರ್ಯಗಾರ


ಕೊಪ್ಪಳ, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆ.ಸಿ.ಟಿ.ಯು, ಕೆ.ಎಸ್.ಎಮ್.ಸಿ & ಎ, ಬೆಂಗಳೂರು, ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಉದ್ದೇಶದಿಂದ (RAMP) ಯೋಜನೆಯಡಿಯಲ್ಲಿ ಇನ್ ಕ್ಯೂಬಿಷನ್ (INCUBATION) ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ನ. 20 ರಂದು ಬೆಳಿಗ್ಗೆ 10.30 ಗಂಟೆಗೆ ಕೊಪ್ಪಳ ಜಿಲ್ಲೆಯ ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೊಜಿಸಲಾಗಿದೆ.

ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಕಾರ್ಯಾಗಾರ ಉದ್ಘಾಟಿಸುವರು. ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ಉಪಸ್ಥಿತರಿರುವರು. ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಮನ್ಸೂರ್ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿರುಪಾಕ್ಷಿ ಬಾಗೋಡಿ, ಕೊಪ್ಪಳ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮಾರುತಿ, ಕೊಪ್ಪಳ ಕೆ.ಎಸ್.ಎಫ್.ಸಿ ಯ ಶಾಖಾ ವ್ಯವಸ್ಥಾಪಕ ಸೋಮೇಶ ಎಂ. ಚಿಕ್ಕಮಠ, ಭಾನಾಪುರ ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್ ಏಕಸ್ ಲಿಮಿಟೆಡ್ ಉಪಾಧ್ಯಕ್ಷ ರಾಯಪ್ಪ ಅನಂತಪಲ್ಲಿ ಅವರು ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಸಿದ್ದಯ್ಯ ಹಾಗೂ ಪ್ರಕಾಶ ಬಿಸೇರೊಟ್ಟಿ ಅವರು ಉಪಸ್ಥಿತರಿರುವರು ಎಂದು ಕೊಪ್ಪಳ ಜಿಲ್ಲಾ ಕೈಗಾರಿಕಾ ಕೇಂದ್ರ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande